Advertisement

ಮಂಗಳೂರಿನಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿ, ಪಾಸ್ ನಿಷೇಧ, ಅನಗತ್ಯ ಓಡಾಟಕ್ಕೆ ಬ್ರೇಕ್  

12:36 PM May 09, 2021 | Team Udayavani |

ಮಂಗಳೂರು: ನಗರದಲ್ಲಿ ಈಗಾಗಲೇ ಜಾರಿಯಲ್ಲಿರುವ ಕರ್ಫ್ಯೂ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿಲಾಗಿದೆ. ಅನಗತ್ಯವಾಗಿ ವಾಹನ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಪೊಲೀಸರು ಕೆಲವೆಡೆ ಮಾರುಕಟ್ಟೆಗಳಲ್ಲಿ ಜನರನ್ನು ಚದುರಿಸಿದರು.

Advertisement

ಇಂದು ( ಮೇ.08) ಈ ಬಗ್ಗೆ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಲಾಕ್ ಡೌನ್ ವೇಳೆ ಓಡಾಡಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇಲ್ಲ. ರಾಜಕೀಯ ಪಕ್ಷಗಳು, ಮುಖಂಡರು , ಪೊಲೀಸರು ಅಥವಾ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಯಾರು  ಕೂಡ ಪಾಸ್ ನೀಡಲು ಅವಕಾಶವಿಲ್ಲ. ಸ್ವಯಂ ಆಗಿ ಯಾರಾದರೂ ಪಾಸ್ ಮಾಡಿಸಿಕೊಂಡಿದ್ದರೆ ಅಥವಾ ಇತರರಿಂದ ಪಡೆದುಕೊಂಡಿದ್ದರೆ ಅದಕ್ಕೂ ಅವಕಾಶ ನೀಡುವುದಿಲ್ಲ. ತುರ್ತು ಅಗತ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next