Advertisement
ಬೆಳಗ್ಗೆಯಿಂದಲೇ ವಾಹನಗಳಲ್ಲಿ ಸಂಚರಿಸುತ್ತಿದ್ದ ಜನರಿಗೆ ಪೊಲೀಸರು ಕಂಡ ಕಂಡಲ್ಲಿ ಲಾಠಿ ರುಚಿ ತೋರಿಸಿದ್ದೂ ಅಲ್ಲದೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳನ್ನು ಸೀಜ್ ಮಾಡಿದ್ದಾರೆ. ಕೆಲವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಹಲವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
Related Articles
Advertisement
ಬೆಳಗ್ಗೆ 10 ಗಂಟೆ ಸಮಯ ಮುಗಿದ ಮೇಲೆ ಹಲವು ಮಾರಾಟಗಾರರು ತಳ್ಳು ಗಾಡಿಯಲ್ಲಿ ಕಾಯಿಪಲ್ಲೆ, ಹಣ್ಣು ಮುಂತಾದವುಗಳನ್ನು ಇಟ್ಟುಕೊಂಡು ಬಡಾವಣೆಗಳಲ್ಲಿ ಸಂಚರಿಸಿ ಸಂಜೆವರೆಗೂ ಮಾರುತ್ತಿರುವುದು ಹಲವೆಡೆ ಕಂಡು ಬಂತು. 10 ಗಂಟೆ ನಂತರ ಎಲ್ಲವೂ ಸ್ತಬ್ಧ: ಪೊಲೀಸರು ಪುರಸಭೆಯ ನೆರವಿನೊಂದಿಗೆ ಮುಖ್ಯ ರಸ್ತೆ ಸಂಪರ್ಕಿಸುವ ಕೆಲವು ಸಂಪರ್ಕ ರಸ್ತೆಗಳನ್ನು ಸಂಚಾರಕ್ಕೆ ಬಂದ್ ಮಾಡಿದ್ದರು. ಇದರಿಂದಾಗಿ ಅನವಶ್ಯಕವಾಗಿ ಸಂಚರಿಸುವವರಿಗೆ ಕಡಿವಾಣ ಹಾಕಿದಂತಾಗಿತ್ತು. ಬೆಳಗ್ಗೆ 10 ಗಂಟೆ ನಂತರ ಎಲ್ಲವೂ ಹೆಚ್ಚು ಕಡಿಮೆ ಸ್ಥಬ್ಧಗೊಂಡಂತಾಗಿತ್ತು.
ಹುಡ್ಕೊàದಲ್ಲಿ ಕೆಲ ಅಂಗಡಿಕಾರರು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವುದನ್ನು ಕಂಡು ಹಿಡಿದ ಪೊಲೀಸರು ಅಲ್ಲಿಗೆ ತೆರಳಿ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿ ಬಂದ್ ಮಾಡಿಸಿದರು. ಅವಶ್ಯಕ ಸೇವೆ, ಚಿಕನ್, ಮಾಂಸ, ಹಾಲು ಮುಂತಾದವುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧವಾಗಿತ್ತು. ಮುಖ್ಯ ರಸ್ತೆಯಿಂದ ದೂರ ಇರುವ ಬಡಾವಣೆಗಳಲ್ಲಿ ಮಾತ್ರ ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಕಾರರು ಅಂಗಡಿ ಓಪನ್ ಇಟ್ಟು ವ್ಯಾಪಾರ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ: ಪೊಲೀಸರು ಪಟ್ಟಣ ಪ್ರದೇಶದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ಗ್ರಾಮೀಣ ಪ್ರದೇಶಗಳ ಕಡೆಗೆ ಲಕ್ಷé ಕಡಿಮೆ ಆಗಿತ್ತು. ಕೆಲವು ಪ್ರಜ್ಞಾವಂತರು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್ ಮಾಡಿದ್ದರು. ಇನ್ನು ಕೆಲವರು ಒಳ ಒಳಗೆ ವ್ಯಾಪಾರ ನಡೆಸಿದರು. ಇದು ಮಿಶ್ರ ಪ್ರತಿಕ್ರಿಯೆಗೆ ಅವಕಾಶ ಮಾಡಿಕೊಟ್ಟಂತಾಗಿತ್ತು