Advertisement

ಮೈಸೂರಿನಲ್ಲಿ ನಿಯಮಗಳು ಮತ್ತಷ್ಟು ಕಠಿಣ: ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ

06:43 PM Apr 16, 2020 | keerthan |

ಮೈಸೂರು: ಕೋವಿಡ್-19 ಸೋಂಕು ತಡೆಗಟ್ಟಲು ಪೊಲೀಸ್ ಇಲಾಖೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಮೈಸೂರು ಕೊವಿಡ್-19 ವೈರಸ್ ನ ಹಾಟ್ ಸ್ಪಾಟ್ ಆಗಿ ಮಾರ್ಪಾಟ್ಟಿದೆ. ಹಾಗಾಗಿ ಬೆಳಿಗ್ಗೆ 6ರಿಂದ 12ರವರೆಗೆ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು  ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ಜನರುದ್ವಿಚಕ್ರ ವಾಹನದಲ್ಲಿ ಸವಾರ ಮಾತ್ರ ಸಂಚರಿಸಬೇಕು. ಹಿಂಬದಿಯಲ್ಲಿ ಯಾರನ್ನು ಕೂರಿಸಿಕೊಂಡು ಸಾಗುವಂತಿಲ್ಲ. ನಾಲ್ಕು ಚಕ್ರದ ವಾಹನದಲ್ಲಿ ಚಾಲಕನ ಜೊತೆಗೆ ಮತ್ತೊಬ್ಬರು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಮಧ್ಯಾಹ್ನ ಹನ್ನೆರಡು ಗಂಟೆಯ ನಂತರ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವವರು ಕಾಲ್ನಡಿಗೆಯಲ್ಲೇ ಹೋಗಬೇಕು. ಮಧ್ಯಾಹ್ನ 12ಗಂಟೆಯ ನಂತರ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವಂತಿಲ್ಲ. ಸಂಜೆ ಆರು ಗಂಟೆಯಿಂದ ಬೆಳಗಿನ ಜಾವ ಆರು ಗಂಟೆಯವರೆಗೆ ಯಾರು ಕೂಡ ರಸ್ತೆಗಿಳಿಯುವಂತಿಲ್ಲ ಎಂದರು.

ಮನೆಯಿಂದ ಹೊರಬರುವವರು ಮಾಸ್ಕ್ ಧರಿಸುವುದು ಕಡ್ಡಾಯ. ಗುರುತಿನ ಪತ್ರಗಳನ್ನು ತರಬೇಕು. ಪಾಸ್ ಹೊಂದಿರುವವರು ತೋರಿಸಬೇಕು. ಔಷಧಿ ಕೊಂಡುಕೊಳ್ಳಲು ಬರುವವರು ವೈದ್ಯರು ನೀಡಿರುವ ಚೀಟಿ ತೋರಿಸಬೇಕು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next