ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿಐದು ದಿನಗಳ ಕಾಲ ಬಿಗಿ ಲಾಕ್ ಡೌನ್ ಮಾಡಲಾಗಿದ್ದು ಎರಡನೇ ದಿನವಾದ ಮಂಗಳವಾರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಜಿಲ್ಲೆಯಲ್ಲಿ ಅನಗತ್ಯ ಬೈಕ್ ಗಳಲ್ಲಿ ಸುತ್ತಾಟ ನಡೆಸುವ ಜನರಿಗೆ ವಾಹನ ಜಪ್ತಿ ಸೇರಿ ದಂಡವನ್ನೂ ಹಾಕುತ್ತಿದ್ದಾರೆ. ಇನ್ನೂ ಹಗಲಿರುಳು ಕಾರ್ಯ ನಿರತ ಪೊಲೀಸ್ ತಂಡಕ್ಕೆ ನಗರದ ಹಲವು ಸಂಘ ಸಂಸ್ಥೆಗಳು ತಂಪು ಪಾನೀಯ, ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಿ ಸಾಮಾಜಿಕ ಕಳಕಳಿ ತೋರುತ್ತಿದ್ದಾರೆ.
ಇದನ್ನೂ ಓದಿ:ಗಂಗಾವತಿ: ಕುರಿಹಟ್ಟಿಯ ಮೇಲೆ ಮೂರು ಚಿರತೆಗಳ ದಾಳಿ; 32 ಕುರಿಗಳ ಸಾವು
ಎಸ್ ಪಿ ಶ್ರೀಧರ್, ಡಿಎಸ್ಪಿ ಗೀತಾ ಹಾಗೂ ಸಿಪಿಐಗಳಾದ ರವಿ ಉಕ್ಕುಂದ, ಮೌನೇಶ್ವರ ಪಾಟೀಲ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳ ತಂಡವು ವಿವಿಧ ರಸ್ತೆಗಳಲ್ಲಿ ನಿಂತು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಪೂರ್ಣ ಲಾಕ್ ಡೌನ್‌ಗೆ ಉತ್ತಮ ಸ್ಪಂದನೆಯು ವ್ಯಕ್ತವಾಗಿವೆ.