Advertisement
ಜಲಸಂಪನ್ಮೂಲ ಇಲಾಖೆ ನೀರಾವರಿ ನಿಗಮಗಳಡಿ ಪೂರ್ಣಗೊಂಡ ನೀರಾವರಿ ಯೋಜನೆಗಳಲ್ಲಿ ಯೋಜಿತ ಅಚ್ಚುಕಟ್ಟು ಪ್ರದೇಶಕ್ಕೆ ಕಾಲುವೆ, ಪೈಪ್ ಜಾಲದಡಿ ನೀರು ಹರಿಸಲಾಗುತ್ತಿದೆ. ಆದರೆ ಕೆಲವೆಡೆ ರೈತರು ಅನಧಿಕೃತವಾಗಿ ಪಂಪ್ ಹಾಗೂ ಪೈಪ್‌ಗ್ಳನ್ನು ಕಾಲುವೆಗೆ ಅಳವಡಿಸುವುದು, ಏರಿ ಭಾಗದಲ್ಲಿ ಕಾಲುವೆಗಳನ್ನು ಕೊರೆದು ಪೈಪ್‌ಲೈನ್ ಅಳವಡಿಸುವುದು, ಕಾಲುವೆಯಡಿ ಕೃತಕ ಅಡ್ಡಗೋಡೆ ನಿರ್ಮಿಸುವುದು, ಕಾಲುವೆ ಔಟ್‌ಲೆಟ್‌ಗಳಿಗೆ ಅಳವಡಿಸಿರುವ ಗೇಟ್‌ಗಳಿಗೆ ಧಕ್ಕೆ ಮಾಡುವುದು, ಕಾಲುವೆ ಜಾಲದಲ್ಲಿ ಕಸಕಡ್ಡಿ ಹಾಕುವುದು ಮತ್ತಿತರ ಅಕ್ರಮ ನಡೆಸುತ್ತಿದ್ದಾರೆ.
ಕರ್ನಾಟಕ ನೀರಾವರಿ ಕಾಯಿದೆ-1965ಕ್ಕೆ ಸೂಕ್ತ ಪರಿಣಾಮಕಾರಿ ಅಧಿಕಾರಯುಕ್ತ ಪ್ರಾವಿಧಾನಗಳನ್ನು ಕಲ್ಪಿಸಲು ಅಗತ್ಯವಿರುವ ಕರಡು ತಿದ್ದುಪಡಿಗಳನ್ನು ರೂಪಿಸಿ, ಸೂಕ್ಷ್ಮ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನಿವೃತ್ತ ಮುಖ್ಯ ಎಂಜಿನಿಯರ್‌ಗಳಾದ ಶಂಕರೇಗೌಡ, ಎಸ್.ಎಚ್. ಮಂಜಪ್ಪ, ಸಮಗ್ರ ಜಲಸಂಪನ್ಮೂಲ ನಿರ್ವಹಣ ಉನ್ನತ ಕೇಂದ್ರದ ತಾಂತ್ರಿಕ ನಿರ್ದೇಶಕ ಡಾ| ಪಿ. ಸೋಮಶೇಖರ ರಾವ್, ನೀರಾವರಿ ನಿಗಮದ ಕಾನೂನು ಸಲಹೆಗಾರ ರಾಘವೇಂದ್ರ ಕುಲಕರ್ಣಿ, ಕಾರ್ಯದರ್ಶಿ ಗಳಾದ ಬಿ.ವಿ. ಕಾಮತ್, ಪ್ರಕಾಶ, ಕಾರ್ಯಪಾಲಕ ಎಂಜಿನಿಯರ್ ಡಿ.ವಿ. ಪಾಟೀಲ್ ಅಧ್ಯಯನ ಸಮಿತಿ ಸದಸ್ಯರಾಗಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ ಪ್ರಸಾದ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
Related Articles
ಕಾಯಿದೆ 1965ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಅಧ್ಯಯನ ನಡೆಸಿ, ಶಿಫಾರಸಿ ನೊಂದಿಗೆ ವರದಿ ಸಲ್ಲಿಸಲು ಸಮಿತಿ ರಚಿಸ ಲಾಗಿದೆ. ಸಮಿತಿಯು ಅಧ್ಯಯನ ಮಾಡಿ 15 ದಿನಗಳಲ್ಲಿ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. – ಮನೋಹರ ರೊಟ್ಟಿ, ವಿಶೇಷ ಕರ್ತವ್ಯಾಧಿಕಾರಿ, ಜಲಸಂಪನ್ಮೂಲ ಇಲಾಖೆ
Advertisement
ಎಚ್.ಕೆ. ನಟರಾಜ