ನಗರದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ-ಕ ಭಾಗಕ್ಕೆ 4750 ಹುದ್ದೆಗಳನ್ನು ಮೀಸಲಿಡಲಾಗಿತ್ತು. ಆದರೆ, ಕೆಲ ಹುದ್ದೆಗಳಿಗೆ ನಿರೀಕ್ಷಿತ ಮಟ್ಟದ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಒಂದು ತಿಂಳಗೊಳಗೆ ಶಿಕ್ಷಕರ ನೇಮಕ ಪ್ರಕ್ರಿಯೆ ಮುಗಿಸಲಾಗುವುದು ಎಂದು ತಿಳಿಸಿದರು. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸರ್ಕಾರ
ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
Advertisement
ಈ ಮುಂಚೆ ಶೇ.15ರಷ್ಟಿದ್ದ ಅನುಪಾತ ಈಗ ಶೇ.20ಕ್ಕೆ ಹೆಚ್ಚಿಸಿದ್ದೇವೆ. ಆದರೆ, ದಂಪತಿ ವರ್ಗಾವಣೆ ವಿಚಾರದಲ್ಲಿನಾವೇನು ಮಾಡಲು ಬರುವುದಿಲ್ಲ. ಸತಿ ಪತಿ ಇಬ್ಬರು ಸರ್ಕಾರಿ ಹುದ್ದೆಯಲ್ಲಿದ್ದರೂ ಕನಿಷ್ಠ ಐದು ವರ್ಷಗಳಾದರೂ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಈ ಬಗ್ಗೆ ನಾವು ಮೊದಲೇ ಮುಚ್ಚಳಿಕೆ ಬರೆಯಿಸಿಕೊಳ್ಳುತ್ತಿದ್ದೇವೆ.
Related Articles
Advertisement
ಮುಜರಾಯಿ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವ ವಿಚಾರವಾಗಿ ಫೆ.5ರಂದು ಮುಜರಾಯಿ ಖಾತೆ ಸಚಿವ ಹಾಗೂ ಕಮಿಶನರ್ ಸಭೆ ಕರೆಯಲಾಗಿದೆ ಎಂದು ಸಚಿವ ತನ್ವೀರ್ ಸೇಠ್ಠ್… ತಿಳಿಸಿದರು. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ನಡೆಸುವ ಶಾಲೆಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ನಿಯಮಾವಳಿಗೆ ತಿದ್ದುಪಡಿ ತಂದು ಕ್ರಮ ಕೈಗೊಳ್ಳಬೇಕು. ತಾಲೂಕಿನ ಶಕ್ತಿನಗರದಲ್ಲಿ ಕಳೆದ ಐದು ದಿನದಿಂದ ಶಿಕ್ಷಕರು ಹೋರಾಟ ನಡೆಸುತ್ತಿರುವ ವಿಚಾರ ಗಮನಕ್ಕಿದೆ. ಅಂಥ ಸಾಕಷ್ಟು ಶಾಲೆಗಳು ರಾಜ್ಯದಲ್ಲಿವೆ ಎಂದರು. ಶಿಕ್ಷಕರನ್ನುಕಾರ್ಮಿಕರೆಂದು ಪರಿಗಣಿಸಲು ಬರುವುದಿಲ್ಲ. ಹೀಗಾಗಿ ಅವರಿಗೆ ಕನಿಷ್ಠ ವೇತನ ಅನ್ವಯ ಆಗುವುದಿಲ್ಲ. ಬದಲಿಗೆ ನಿಯಮ ತಿದ್ದುಪಡಿ ಮಾಡಿ ವೇತನ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು.
ತನ್ವಿರ್ ಸೇಠ್ಠ್…, ಪ್ರೌಢ ಶಿಕ್ಷಣ ಖಾತೆ ಸಚಿವ