Advertisement

ಅನಗತ್ಯವಾಗಿ ಸಂಚರಿಸಿದರೆ ಕಟ್ಟುನಿಟ್ಟಿನ ಕ್ರಮ

03:44 PM Apr 29, 2020 | Suhan S |

ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ  ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಮಖಂಡಿ,ಮುಧೋಳ ಪಟ್ಟಣಗಳಲ್ಲಿ ದ್ವಿಚಕ್ರಗಳ ವಾಹನಗಳು ವಿನಾಕಾರಣ ರಸ್ತೆಗಿಳಿದರೆ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾ| ಡಾ. ರಾಜೇಂದ್ರ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸೀಲ್‌ಡೌನ್‌ ಪ್ರದೇಶಗಳಾದ ಅವಟಿಗಲ್ಲಿ, ಭಾರಪೇಟ ಗಲ್ಲಿ, ಖಾಟಿಕ ಗಲ್ಲಿ ಹಾಗೂ ಪೊಲೀಸ್‌ ಕ್ವಾರ್ಟರ್ì ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ ಅವರು ಮಾತನಾಡಿದರು. ನಗರದಲ್ಲಿ ಮಂಗಳವಾರ ಮತ್ತೆ ಮೂವರಿಗೆ

ಕೋವಿಡ್ 19  ಸೋಂಕು ದೃಢಪಟ್ಟಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 22 ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರೊಂದಿಗೆ ಪ್ರಥಮ ಸಂಪರ್ಕದ 350 ಹಾಗೂ ದ್ವಿತೀಯ ಸಂಪರ್ಕದಲ್ಲಿ 1660 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಜಮಖಂಡಿಯಲ್ಲಿ ಪ್ರಥಮ ಹಂತದ 591 ಜನರು, ದ್ವಿತೀಯ ಹಂತದ 2200 ಜನರು ಹೋಮ್‌ ಕ್ವಾರಂಟೈನ್‌ದಲ್ಲಿದ್ದಾರೆ ಎಂದರು.

ಮುಧೋಳ-ಜಮಖಂಡಿ ಪಟ್ಟಣದಲ್ಲಿ ವಿನಾಕಾರಣ ರಸ್ತೆಗಿಳಿಯುವ ಬೈಕ್‌ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಮನೆಯಲ್ಲಿದ್ದು, ಎಚ್ಚರಿಕೆ ವಹಿಸಬೇಕು. ವೈದ್ಯಕೀಯ ಸಂಬಂಧಿಸಿದ ವಿಷಯಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಯಾವ ಕಾರಣಕ್ಕೂ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡುವುದಿಲ್ಲ. ಸರ್ಕಾರಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಸೇವೆ ಸಲ್ಲಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಜಮಖಂಡಿ ಪೊಲೀಸ್‌ ಕ್ವಾರ್ಟರ್ನಲ್ಲಿ ಮುಧೋಳ, ಮಹಾಲಿಂಗಪುರ, ಬನಹಟ್ಟಿ, ಸಾವಳಗಿ ಠಾಣೆಯಲ್ಲಿನ ಪೇದೆಗಳು ಸೇವೆಸಲ್ಲಿಸುವ ಠಾಣೆಯಲ್ಲಿ ವಾಸಿಸುವ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯ ಹೊಂದಿರುವ ಕ್ವಾರ್ಟರ್ಸ್ ಗಳನ್ನು ಖಾಲಿ ಮಾಡುವಂತೆ ಕೋವಿಡ್‌-19 ಮುಗಿದ ನಂತರ ಆದೇಶಿಸುವುದಾಗಿ ಹೇಳಿದರು.

Advertisement

ಜನರಲ್ಲಿ ಗೊಂದಲ: ಕೋವಿಡ್ 19 ಭೀತಿಯಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್‌ಗಳ ಸಮಯ ಹೊಂದಾಣಿಕೆಯಿಂದ ಜನರಲ್ಲಿ ಗೊಂದಲ ಮೂಡುತ್ತಿದೆ. ಪೊಲೀಸ್‌ ಇಲಾಖೆ ಬೆಳಗ್ಗೆ 6 ಗಂಟೆಯಿಂದ 11 ಗಂಟೆಗೆ ಬಂದ್‌ ಮಾಡುವಂತೆ ಮೌಖೀಕವಾಗಿ ಹೇಳಿಕೆ ನೀಡುತ್ತಿದ್ದು, ಆದರೇ ಬ್ಯಾಂಕಿನವರು ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ನಿರ್ದೇಶನದ ಸುತ್ತೋಲೆ ಪತ್ರ ನೀಡಿದರೇ ಮುಖ್ಯ ಕಚೇರಿಯ ವ್ಯವಸ್ಥಾಪಕರ ಗಮನಕ್ಕೆ ತಂದು ಲಾಗಿನ್‌ ವ್ಯವಸ್ಥೆ ಬದಲಾವಣೆಗೊಂಡಲ್ಲಿ ಮಾತ್ರ ಹೊಸ ವೇಳೆಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯ ಎಂದು ಕೆಲವು ಬ್ಯಾಂಕ್‌ ವ್ಯವಸ್ಥಾಪಕರು ತಿಳಿಸಿದ್ದಾರೆ.

ಹಬ್ಬಿಬಸವೇಶ್ವರ ಜಾತ್ರೆ ರದ್ದು: ತಾಲೂಕಿನ ಕಡಕೊಳ ಗ್ರಾಮದಲ್ಲಿ ಮೇ 4 ರಂದು ನಡೆಯಬೇಕಾಗಿದ್ದ ಶ್ರೀ ಹೆಬ್ಬಿ ಬಸವೇಶ್ವರ ಜಾತ್ರಾ ಮಹೋತ್ಸವ ರದ್ದು ಗೊಳಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಗಿರಮಲ್ಲಪ್ಪ ತೇಲಿ, ಕಾರ್ಯದರ್ಶಿ ಆನಂದ ಶ್ರೀನಿವಾಸ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next