Advertisement
ಈ ಹಿನ್ನೆಲೆಯಲ್ಲಿ 2020-21ನೇ ಸಾಲಿಗೆ ಇಲಾಖಾ ವ್ಯಾಪ್ತಿಯ ಎಲ್ಲ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿನಿಯರಿಗೆ ಬೋಧನ ಮತ್ತು ಪ್ರಯೋಗಾಲಯ ಶುಲ್ಕ ವಿನಾಯತಿ ನೀಡಬೇಕು. ಈ ಹಣವನ್ನು ಸರಕಾರವೇ ಮರುಪಾವತಿ ಮಾಡಲಿದೆ. ವಿದ್ಯಾರ್ಥಿಗಳಿಂದ ಬೋಧನ ಮತ್ತು ಪ್ರಯೋಗಾಲಯ ಶುಲ್ಕ ಪಾವತಿಸಿಕೊಂಡು ಜಮೆ ಮಾಡುವ ಬಗ್ಗೆ ಸರಕಾರ ಈಗಾಗಲೇ ತಿಳಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ದಾಖಲಾತಿ ಸಂಬಂಧ ರೋಸ್ಟರ್ ನಿಯಮ ಪಾಲಿಸಬೇಕು. ಹಾಗೂ ಸರಕಾರ ಸೂಚಿಸಿರುವ ಶುಲ್ಕವನ್ನು ಮಾತ್ರ ಪಡೆಯಬೇಕು. ಶುಲ್ಕದ ವಿವರವನ್ನು ಕಾಲೇಜಿನ ಸೂಚನ ಫಲಕದಲ್ಲಿ ಅಳವಡಿಸಬೇಕು. ಹೆಚ್ಚುವರಿ ಶುಲ್ಕ ಪಡೆದಿರುವ ದೂರು ಬಂದಲ್ಲಿ ಪ್ರಾಂಶುಪಾಲರು ಅಥವಾ ಆಡಳಿತ ಮಂಡಳಿ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. Advertisement
ಹೆಚ್ಚುವರಿ ಶುಲ್ಕ ಪಡೆದರೆ ಕಠಿನ ಕ್ರಮ
01:55 AM Aug 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.