Advertisement

ಮಂಗಳೂರಿಗರೇ ಎಚ್ಚರ : ನೈಟ್ ಕರ್ಫ್ಯೂ ಪಾಲನೆಗೆ ಸಿದ್ಧವಾಗಿವೆ 45 ಚೆಕ್ ಪೋಸ್ಟ್!

01:20 PM Apr 10, 2021 | Team Udayavani |

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನೈಟ್ ಕರ್ಫ್ಯೂವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲು ಪಾಲಿಕೆಯು ಸಜ್ಜಾಗಿದೆ. ಇದೇ ಹಿನ್ನೆಲೆಯಲ್ಲಿ 45 ಚೆಕ್ ಪೋಸ್ಟ್ ಗಳನ್ನು ಸಿದ್ಧ ಮಾಡಲಾಗಿದೆ.

Advertisement

ಕೋವಿಡ್ ನಿಯಮಗಳು ಮತ್ತು ನೈಟ್ ಕರ್ಫ್ಯೂ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಸುಖಾಸುಮ್ಮನೆ ಓಡಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಎಲ್ಲರೂ ರಾತ್ರಿ  10 ಗಂಟೆಯೊಳಗೆ ಮನೆಯಲ್ಲಿರಬೇಕು. ಹೊರ ವಲಯದಿಂದ ನಗರಕ್ಕೆ ಬರುವುದನ್ನು ತಡೆಯುವುದಕ್ಕೆ ಪೊಲೀಸ್ ವಿಶೇಷ ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಇನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಸೂಚನೆ ನೀಡಿರುವ ಪೊಲೀಸ್ ಇಲಾಖೆ, ರಾತ್ರಿ ಪಾಳಿಯವರು ಕರ್ಫ್ಯೂ ಅವಧಿಯಲ್ಲಿ ತಮ್ಮ ಕಂಪನಿ/ ಸಂಸ್ಥೆಯೊಳಗೆ ಇರಬೇಕು. ಕಂಪನಿಗಳು ಇದಕ್ಕೆ ಸರಿಯಾಗಿ ಶಿಫ್ಟ್ ಬದಲಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next