Advertisement

ಲೈಸೆನ್ಸ್‌ ಪಡೆಯದ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ

12:29 PM Feb 22, 2017 | Team Udayavani |

ಮೈಸೂರು: ವೃತ್ತಿ ರಹದಾರಿ ಪಡೆಯದೆ ವ್ಯಾಪಾರ, ವಹಿವಾಟು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು. 

Advertisement

ಹೋಟೆಲ್‌ ಮಾಲೀಕರ ಸಂಘ ಮತ್ತು ಹೋಟೆಲ್‌ ಮಾಲೀಕರ ಸಂಘದ ಧರ್ಮದತ್ತಿ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್‌ ಮಾಲೀಕರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು ನಗರ ಪಾಲಿಕೆಯ ವೃತ್ತಿ ರಹದಾರಿ ನವೀಕರಣ ಮೇಳ ಉದ್ಘಾಟಿಸಿ ಮಾತನಾಡಿದರು.

ಯಾವುದೇ ವ್ಯಾಪಾರ – ವಹಿವಾಟು ನಡೆಸು ವವರು ಕಡ್ಡಾಯವಾಗಿ ನಗರ ಪಾಲಿಕೆಯಿಂದ ರಹದಾರಿ ಪಡೆಯಬೇಕು. ಆದರೆ ಅನೇಕ ವ್ಯಾಪಾರಿಗಳು ಯಾವುದೇ ರಹದಾರಿ ಪಡೆಯದೆ ವ್ಯಾಪಾರ-ವಹಿವಾಟು ನಡೆಸುವ ಮೂಲಕ ವಂಚನೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಪಾಲಿಕೆಯಿಂದ ವೃತ್ತಿ ರಹದಾರಿ ಪಡೆಯದೆ ವ್ಯಾಪಾರ, ವಹಿವಾಟು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.

ಅಲ್ಲದೆ ವ್ಯಾಪಾರ ವಹಿವಾಟು ನಡೆಸುವವರು ಕಡ್ಡಾಯವಾಗಿ ವೃತ್ತಿ ರಹದಾರಿ ಶುಲ್ಕ, ಕಟ್ಟಡ ತೆರಿಗೆ ಸೇರಿದಂತೆ ಇತರೆ ತೆರಿಗೆಗಳನ್ನು ಸಮಯಕ್ಕೆ ತೆರಿಗೆ ಪಾವತಿಸಬೇಕು. ಆಗ ಮಾತ್ರ ನಗರಪಾಲಿಕೆ ಉತ್ತಮ ಆಡಳಿತ ಹಾಗೂ ವ್ಯಾಪಾರಸ್ಥರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಸಾಧ್ಯ ಎಂದು ಹೇಳಿದರು.

ಈ ಬಾರಿ ವೃತ್ತಿ ರಹದಾರಿ ನವೀಕರಣ ಮೇಳದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮಂದಿ ಭಾಗವಹಿಸುವ ಮೂಲಕ ವೃತ್ತಿ ರಹದಾರಿ ನವೀಕರಣ ಮಾಡಿಸಿಕೊಳ್ಳುವ ಜತೆಗೆ ವೃತ್ತಿ ರಹದಾರಿ ಶುಲ್ಕ ಪಾವತಿಸಿದರು. ಪ್ರಮುಖವಾಗಿ ಹೋಟೆಲ್‌, ಉಪಹಾರಗೃಹಗಳು, ಸಸ್ಯಾಹಾರಿ, ಮಾಂಸಾಹಾರಿ ಹೋಟೆಲ್‌ಗ‌ಳು, ಬೇಕರಿ, ಸ್ವೀಟ್ಸ್‌ ಅಂಗಡಿ, ಫಾಸ್ಟ್‌ಫ‌ುಡ್‌ ಮಾಲೀಕರು ವೃತ್ತಿ ರಹದಾರಿ ನವೀಕರಣ ಮೇಳದಲ್ಲಿ ಭಾಗವಹಿಸಿ ವೃತ್ತಿ ರಹದಾರಿ ನವೀಕರಣ ಮಾಡಿಸಿಕೊಂಡರು.

Advertisement

ಎಫ್ಕೆಸಿಸಿಐ ಉಪಾಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ ರಾಮಚಂದ್ರ, ಚಾಮರಾಜ ಕ್ಷೇತ್ರದ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋಟೆಲ್‌ ಮಾಲೀಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿಶಾಸಿŒ ಇನ್ನಿತರರು ಹಾಜರಿದ್ದರು.

20 ಲಕ್ಷ ರೂ. ಶುಲ್ಕ ಸಂಗ್ರಹ
ಮೈಸೂರು:
ಹೋಟೆಲ್‌ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ನಗರ ಪಾಲಿಕೆಯ ವೃತ್ತಿ ರಹದಾರಿ ನವೀಕರಣ ಮೇಳದಲ್ಲಿ ಮಂಗಳವಾರ ಪಾಲಿಕೆಯ 9 ವಲಯಗಳಿಂದ 20,80,596 ರೂ. ರಹದಾರಿ ನವೀಕರಣ ಶುಲ್ಕ ಸಂಗ್ರಹವಾಗಿದೆ. 363 ಮಂದಿ ವೃತ್ತಿ ರಹದಾರಿ ನವೀಕರಣ ಮಾಡಿಕೊಂಡರು. ಈ ಪೈಕಿ ವಲಯ 6ರಲ್ಲಿ ಅತಿ ಹೆಚ್ಚು 12,85,118 ರೂ. ನಗದು ಸಂಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next