Advertisement

ನಕಲಿ ಬೀಜ-ಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ

07:55 PM Mar 11, 2022 | Team Udayavani |

ವಿಧಾನಪರಿಷತ್ತು: ರೈತರಿಗೆ ದ್ರೋಹ ಮಾಡುವ ನಕಲಿ ಬೀಜ ಮತ್ತು ಗೊಬ್ಬರ ಮಾರಾಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ, ರೈತರಿಗೆ ದ್ರೋಹ ಮಾಡುವ ನಕಲಿ ಬೀಜ ಹಾಗೂ ಗೊಬ್ಬರ ತಯಾರಕರು ಯಾರೇ ಇರಲಿ, ಏಷ್ಟೇ ಪ್ರಭಾವಿಗಳಿರಲಿ ಅವರನ್ನು ಬಿಡುವುದಿಲ್ಲ ಎಂದರು.

ನಕಲಿ ಕಂಪೆನಿಗಳು ರೈತರಿಗೆ 8,500 ಕ್ವಿಂಟಾಲ್‌ ಕಳಪೆ ಬೀಜಗಳನ್ನು ಮಾರಾಟ ಮಾಡಿದ್ದಾರೆ. 12ರಿಂದ 15 ಕೋಟಿ ರೂ. ಮೊತ್ತದ ಕಳಪೆ ಬೀಜಗಳು ಸಿಕ್ಕಿವೆ. ರೈತರಿಗೆ ಹತ್ತಾರು ಕೋಟಿ ರೂ. ವಂಚಿಸಲಾಗಿದೆ. ಲೈಸನ್ಸ್‌ ಇಲ್ಲದ ಅನೇಕ ಅಕ್ರಮ ಕಂಪೆನಿಗಳಿವೆ. ಲೈಸನ್ಸ್‌ ಹೊಂದಿದ ಕಂಪೆನಿಗಳ ಹೆಸರಿನ ಬ್ಯಾಗ್‌ಗಳನ್ನು ಪ್ರಿಂಟ್‌ ಮಾಡಿ ಕಳಪೆ ಬೀಜಗಳನ್ನು ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ:ಗೋವಾ: ಸೋಮವಾರ ಸದನವನ್ನು ವಿಸರ್ಜಿಸಲು ನಿರ್ಧರಿಸಿದ ಸಾವಂತ್

ಇದರಿಂದ ಅಮಾಯಕ ರೈತರು ಮೋಸಕ್ಕೊಳಗಾಗುತ್ತಿದ್ದಾರೆ. ಈ ನಕಲಿ ಕಂಪೆನಿಗಳ ಕಳಪೆ ಬೀಜ ಮಾರಾಟದಿಂದ ರೈತರಿಗೆ ನಷ್ಟ, ನಕಲಿ ಕಂಪೆನಿಗಳಿಗೆ ಲಾಭ ಆಗುತ್ತಿದೆ ಎಂದು ರವಿಕುಮಾರ್‌ ಗಮನ ಸೆಳೆದರು.

Advertisement

ಇದಕ್ಕೆ ಉತ್ತರಿಸಿದ ಸಚಿವ ಈಶ್ವರಪ್ಪ, ರವಿಕುಮಾರ್‌ ಅವರು ಗಂಭೀರ ವಿಚಾರಗಳನ್ನು ಗಮನಕ್ಕೆ ತಂದಿದ್ದಾರೆ. ಅದೇ ರೀತಿ ಜೆಡಿಎಸ್‌ ಸದಸ್ಯ ಗೋವಿಂದರಾಜು ಸಹ ಇದೇ ರೀತಿ ಪ್ರಶ್ನೆ ಕೇಳಿದ್ದಾರೆ. ಇದೊಂದು ಗಂಭೀರ ವಿಚಾರ. ಇದನ್ನು ಕೃಷಿ ಸಚಿವರ ಗಮನಕ್ಕೆ ತಂದು ನಾನೇ ಅವರೊಂದಿಗೆ ಸಭೆ ಆಯೋಜನೆ ಮಾಡಿ ರವಿಕುಮಾರ್‌, ಗೋವಿಂದರಾಜು ಸೇರಿದಂತೆ ಸಂಬಂಧಪಟ್ಟ ಶಾಸಕರನ್ನು ಕರೆದು ಅವರಿಂದ ಮಾಹಿತಿಗಳನ್ನು ಪಡೆದು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next