Advertisement

ಸ್ಟ್ರಾಂಜಾ ಮೆಮೋರಿಯಲ್‌ ಬಾಕ್ಸಿಂಗ್‌:ಎಂಟರ ಸುತ್ತಿಗೆ ಸೋನಿಯಾ, ಲೌಲಿನಾ

12:30 AM Feb 16, 2019 | Team Udayavani |

ಹೊಸದಿಲ್ಲಿ: ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ “ಸ್ಟ್ರಾಂಜಾ ಮೆಮೋರಿಯಲ್‌ ಬಾಕ್ಸಿಂಗ್‌’ ಕೂಟದಲ್ಲಿ ಭಾರತದ ವನಿತೆಯರು ಓಟ ಮುಂದು ವರಿಸಿದರೆ, ಪುರುಷರು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ವನಿತೆಯರ ಮುಖಾ ಮುಖಿಯಲ್ಲಿ ಸೋನಿಯಾ ಲಾಥರ್‌, ಲೌಲಿನಾ ಬೊರ್ಗೊಹೈನ್‌ ಮತ್ತು ಪಿಲಾವೊ ಬಸುಮತರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

Advertisement

ಗುರುವಾರ ರಾತ್ರಿ ನಡೆದ 57 ಕೆಜಿ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸೋನಿಯಾ ಲಾಥರ್‌ ಸರ್ಬಿಯಾದ ಜೆಲೆನಾ ಝೆಕಿಕ್‌ ಅವರನ್ನು 5-0 ಅಂಕಗಳ ಅಂತರದಿಂದ ಸೋಲಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತೀಯಳ ಎದುರಾಳಿ ಅಮೆರಿಕದ ಯಾರಿಸೆಲ್‌ ರಮಿರೆಜ್‌.

69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಲೌಲಿನಾ ಬೊರ್ಗೊಹೈನ್‌ ಆಸ್ಟ್ರೇಲಿಯದ ಜೆಸ್ಸಿಕಾ ಮೆಸ್ಸಿನಾ ವಿರುದ್ಧ ಗೆಲುವು ದಾಖಲಿಸಿದರು. ಲೌಲಿನಾ ಕಳೆದ ವರ್ಷದ ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ. 64 ಕೆಜಿ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಪಿಲಾವೊ ಬಸುಮತರಿ ಸ್ಥಳೀಯ ಬಾಕ್ಸರ್‌ ಮೆಲಿಸ್‌ ಯೊನುಜೋವಾ ಅವರಿಂದ ಸ್ವಲ್ಪ ಪೈಪೋಟಿ ಎದುರಿಸಿದರೂ 3-2 ಅಂಕಗಳಿಂದ ಜಯ ಕಾಣುವಲ್ಲಿ ಯಶಸ್ವಿಯಾದರು.

ಪುರುಷ ಬಾಕ್ಸರ್‌ಗಳಿಂದ ನಿರಾಸೆ
ಪುರುಷರ  69 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮನ್‌ದೀಪ್‌ ಜಂಗ್ರಾ ಉಕ್ರೇನ್‌ನ ವಿಕ್ಟರ್‌ ಪೆಟ್ರೋವ್‌ ವಿರುದ್ಧ 0-5 ಅಂಕಗಳ ಅಂತರದಿಂದ ಸೋತರು. 81 ಕೆಜಿ ವಿಭಾಗದಲ್ಲಿ ಹರ್ಷ್‌ ಲಾಕ್ರ ಅಜರ್‌ಬೈಜಾನಿನ ರವೂಫ್ ರಹಿಮೋವ್‌ ವಿರುದ್ಧ ಮುಗ್ಗರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next