Advertisement
ದೇಹಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂಬುದು ಎಲ್ಲರ ಇಚ್ಛೆಯೇ. ಅದಕ್ಕಾಗಿ ಜೀವನಶೈಲಿಯಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಅತಿಯಾಗಿ ದಪ್ಪ ಕಾಣಿಸದಿರಲು ಆಹಾರ ಪದ್ಧತಿ ರೂಢಿಸಿಕೊಳ್ಳುವುದು, ಡಯಟ್ ಮೊರೆ ಹೋಗುವುದು, ನೀಳಕಾಯದವರು ಮೆಡಿಸಿನ್‌ಗಳ ಮೊರೆ ಹೋಗುವುದೆಲ್ಲ ನಡೆಯುತ್ತಲೇ ಇರುತ್ತದೆ.
ಮಾರ್ಕ್‌ಗಳು. ಪ್ರಸವದ ನಂತರ ಸ್ಟ್ರೆಚ್ ಮಾರ್ಕ್
ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ಮೂಡುವುದು ಮತ್ತು ಅದೊಂದು ಕಿರಿಕಿರಿಯಾಗಿ ಬಹು ಸಮಯದವರೆಗೆ ಕಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಬೊಜ್ಜು ಇಳಿಸಿಕೊಂಡವರಲ್ಲಿ ಮತ್ತು ಮಗುವಿಗೆ ಜನ್ಮ ನೀಡಿದವರ ಹೊಟ್ಟೆಯಲ್ಲಿ ಈ ಸ್ಟ್ರೆಚ್ ಮಾರ್ಕ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಧಾರಣೆ ಎನ್ನುವುದು ಪ್ರತಿ ಮಹಿಳೆಗೂ ಸುಮಧುರ ಅನುಭವ. ಗರ್ಭ ಧಾರಣೆ ವೇಳೆ ತಿಂಗಳುಗಳು ಕಳೆದಂತೆ ಹೊಟ್ಟೆ ದೊಡ್ಡದಾಗಿ, ಹೆರಿಗೆ ಬಳಿಕ ಸಣ್ಣದಾಗುತ್ತದೆ. ಈ ಸಂದರ್ಭ ದಲ್ಲಿ ಗರ್ಭಿಣಿಯಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ಮಾಡುತ್ತದೆ. ಮಹಿಳೆ-ಪುರುಷರು ತೂಕ ಇಳಿಸಿಕೊಂಡಾಗಲೂ ಕಾಣಿಸಿ ಕೊಳ್ಳುತ್ತದೆ.
Related Articles
Advertisement
ಕ್ರೀಂ ಹಚ್ಚುವ ಮುನ್ನ…ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು ಹಲವಾರು ರೀತಿಯ ಕ್ರೀಂಗಳನ್ನು ಬಳಕೆ ಮಾಡಲು ಜನ ತೊಡಗುತ್ತಾರೆ. ವೈದ್ಯರೊಂದಿಗೆ ಸಮಾಲೋಚಿಸದೆಯೇ ರಾಸಾಯನಿಕ ಮಿಶ್ರಿತ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಸ್ಟ್ರೆಚ್ ಮಾರ್ಕ್ ಹೋಗದೇ ಹಾಗೇ ಉಳಿದುಕೊಳ್ಳುವುದರ ಜತೆಗೆ ಕ್ರೀಂ ಹಚ್ಚಿದ ಭಾಗದಲ್ಲಿ ಕಪ್ಪಾಗುವಂತಹ ಸಮಸ್ಯೆಗಳನ್ನು ಎಳೆದುಕೊಳ್ಳಬೇಕಾಗುತ್ತದೆ. ಕ್ರೀಂ ಬಳಸುವುದಾದರೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಸ್ಟ್ರೆಚ್ ಹೋಗಲಾಡಿಸಲು ಮನೆಮದ್ದು
ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು ರಾಸಾಯನಿಕ ಮಿಶ್ರಿತ ಕ್ರೀಂಗಳನ್ನು ಬಳಸುವ ಬದಲು ಮನೆಯಲ್ಲೇ ಸಿಗುವ ಕೆಲವೊಂದು ಔಷಧೀಯ ಗುಣವುಳ್ಳ ವಸ್ತುಗಳನ್ನು ಬಳಬಹುದು. ಮುಖ್ಯವಾಗಿ ಅಲೊ ವೆರಾವು ಇದಕ್ಕೆ ಅತ್ಯುತ್ತಮ ಔಷಧ. ಅಲೊವೆರಾ ಎಲೆಯಿಂದ ಲೋಳೆ ತೆಗೆದು ಸ್ಟ್ರೆಚ್ ಮಾರ್ಕ್ ಇರುವೆಡೆ ನಿತ್ಯ ಹಚ್ಚಿಕೊಂಡು ಮಸಾಜ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಲಿಂಬೆರಸ ಮತ್ತು ಸೌತೆಕಾಯಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮಾರ್ಕ್ ಮೇಲೆ ಹಚ್ಚಿಕೊಂಡು ಹತ್ತು ನಿಮಿಷ ಬಿಟ್ಟು ಬಿಸಿ ನೀರಿನಿಂದ ತೊಳೆದರೆ ಸ್ಟ್ರೆಚ್ ಮಾರ್ಕ್ ನಿವಾರಿಸಬಹುದು. ಬಾದಾಮಿ ಎಣ್ಣೆ, ತೆಂಗಿನೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಮಾರ್ಕ್ ಇರುವ ಜಾಗಕ್ಕೆ ಮಸಾಜ್ ಮಾಡಿ ಸ್ವಲ್ಪ ಸಮಯದ ಬಳಿಕ ತೊಳೆಯಬೇಕು. ವಿಟಮಿನ್ ಆಹಾರ ಸೇವಿಸಿ
ಗರ್ಭಿಣಿಯಾಗಿದ್ದಾಗ ಸೇವಿಸುವ ಪೌಷ್ಟಿಕಾಂಶಯುಕ್ತ ಆಹಾರವೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ವಿಟಮಿನ್ ಎ, ಇ ಹೆಚ್ಚಿರುವ ಆಹಾರ ಸೇವಿಸಿದರೆ, ಪ್ರಸವದ ನಂತರ ಸ್ಟ್ರೆಚ್ ಮಾರ್ಕ್ ಸಮಸ್ಯೆ ಕಂಡು ಬರುವುದಿಲ್ಲ ಎನ್ನುತ್ತದೆ ವೈದ್ಯಲೋಕ. ವಿಶೇಷವಾಗಿ ಮೀನಿನ ಎಣ್ಣೆ, ಕ್ಯಾರೆಟ್, ಮೊಟ್ಟೆ ಮುಂತಾದವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ದೇಹದಲ್ಲಿ ಯಾವಾಗಲೂ ನೀರಿನಾಂಶ ಜಾಸ್ತಿ ಇರಬೇಕು. ಅದಕ್ಕಾಗಿ ಕನಿಷ್ಠ ಮೂರ್‍ನಾಲ್ಕು ಲೀಟರ್ ನೀರನ್ನು ಪ್ರತಿನಿತ್ಯ ಕಡಿಯಬೇಕು. ದೇಹದಲ್ಲಿ ರಕ್ತ ಸಂಚಾರ ವೃದ್ಧಿಸಲು ಸಹಕರಿಸುವ ವ್ಯಾಯಾಮವು ದೈನಂದಿನ ಜೀವನದ ಭಾಗವಾಗಬೇಕು. ಇವಿಷ್ಟನ್ನು ನಿತ್ಯ ರೂಢಿಸಿಕೊಂಡರೆ ಪ್ರಸವದ ನಂತರ ಸ್ಟ್ರೆಚ್ ಮಾರ್ಕ್ ಬಾರದಂತೆ ತಡೆಯಬಹುದು ಎನ್ನುವುದು ವೈದ್ಯರು. ತಡೆ ಸಾಧ್ಯವಿದೆ
ಮಹಿಳೆಯರಿಗೆ ಪ್ರಸವದ ನಂತರ ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಲ್ಲದೆ, ಜಿಮ್‌ಗೆ ಹೋಗುವವರು, ದೇಹತೂಕ ಇಳಿಸಿಕೊಂಡವರಲ್ಲಿಯೂ ಕಾಣಿಸಿಕೊಳ್ಳಬಹುದು. ಗರ್ಭಿಣಿಯಾಗಿರುವಾಗಲೇ ಆಲಿವ್ ಆಯಿಲ್ ಅಥವಾ ತೆಂಗಿನೆಣ್ಣೆಯನ್ನು ಹೊಟ್ಟೆಗೆ ಹಚ್ಚಿಕೊಳ್ಳುವುದರಿಂದ ಶೇ. 50ರಷ್ಟು ಸ್ಟ್ರೆಚ್ ಮಾರ್ಕ್ ತಡೆಯುವುದು ಸಾಧ್ಯವಿದೆ. ಶುದ್ಧ ಅಲೋವೆರಾವನ್ನೂ ಹಚ್ಚಬಹುದು. ಕ್ರೀಂಗಳನ್ನು ಹಚ್ಚುವ ಮೊದಲು ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದುಕೊಳ್ಳಬೇಕು.
– ಡಾ| ವಿಜೇತಾ ರೈ, ವೈದ್ಯರು ಧನ್ಯಾ ಬಾಳೆಕಜೆ