Advertisement

ಒತ್ತಡ ನಿವಾರಣೆ ಸುಲಭ

10:15 PM Jun 17, 2019 | mahesh |

ಬ್ಯುಸಿ ಲೈಫಿನಲ್ಲಿ ಒತ್ತಡ ಸರ್ವ ಸಾಮಾನ್ಯ. ಕೆಲಸ ಅಪೂರ್ಣವಾದಾಗ ಒತ್ತಡ, ಕೆಲಸ ಹೆಚ್ಚಾಗಿದ್ದಾಗ ಒತ್ತಡ ಹೀಗೇ ಒತ್ತಡ ಎಂಬುದು ನಮ್ಮ ಮನಸ್ಸು ಹೊಕ್ಕಲು ಸಾವಿರಾರರು ಕಾರಣಗಳಿರುತ್ತವೆ. ಬದುಕಿನಲ್ಲಿ ಸಾವಿರಾರು ಯೋಚನೆಗಳು ನಮ್ಮನ್ನು ಆವರಿಸಿಕೊಂಡು ಮಾಡುವ ಕೆಲಸಗಳನ್ನು ಸರಿಯಾಗಿ ಮಾಡದಂತೆ ನಮ್ಮನ್ನು ತಡೆಯುತ್ತವೆ. ಒತ್ತಡವೇ ಜೀವನ ಎಂಬುದು ಸದ್ಯದ ಸ್ಥಿತಿ. ದಿನನಿತ್ಯದ ಒತ್ತಡದಿಂದ ಹೊರಬರಲು ನಾವು ಸಾಕಷ್ಟು ಒದ್ದಾಡುತ್ತೇವೆ ಕೂಡ. ಪ್ರತಿದಿನ ಒತ್ತಡದಿಂದ ಹೊರಬರಲು ಇಲ್ಲಿದೆ ಸರಳ ವಿಧಾನ

Advertisement

ಇಷ್ಟವಾದ ಸಂಗೀತ ಆಲಿಸಿ
ಒತ್ತಡ ಸಂದರ್ಭಗಳು ಕೆಲಸಗಳನ್ನು ಮಾಡಲು ಅಡ್ಡಿ ಮಾಡುವುದಲ್ಲದೆ ಹೆಚ್ಚು ಕೆಲಸ ಮಾಡುವಲ್ಲಿ ವಿಫ‌ಲರಾಗುವಂತೆ ಮಾಡಿ ಬಿಡುತ್ತವೆ. ಆಗ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಇಷ್ಟವಾಗುವ ಸಂಗೀತವನ್ನು ಆಲಿಸಿ, ಆಗ ತಲೆಯಲ್ಲಿ ಬೇರೆ ಯಾವ ಯೋಚನೆಗಳು ಬರಲಾರವು. ಆಲಿಸುವ ಸಂಗೀತದ ಬಗ್ಗೆ ಮಾತ್ರ ಗಮನವಿದ್ದರೆ ಒತ್ತಡ ತನ್ನಿಂದ ತಾನಾಗಿಯೇ ಕಡಿಮೆಯಾಗತ್ತದೆ.

ಆಳವಾದ ಉಸಿರಾಟ
ಒತ್ತಡಕ್ಕೊಳಗಾದಾಗ ನಮ್ಮ ದೇಹ ಕಾರ್ಟಿಸೋಲ್‌ ಎಂಬ ಹಾರ್ಮೋನ್‌ ಬಿಡುಗಡೆ ಮಾಡುತ್ತದೆ. ಆಗ ನಮ್ಮ ಹೃದಯ ಬಡಿತ ಚುರುಕುಗೊಳ್ಳುತ್ತದೆ. ಇದರಿಂದ ಉಸಿರಾಟ ತೀವ್ರವಾಗಿ ಒತ್ತಡ ಹೆಚ್ಚಾಗುತ್ತದೆ. ಇದನ್ನು ತಡೆಯಲು ದೀರ್ಘ‌ವಾಗಿ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡಬೇಕು. ಇದನ್ನು 5 ರಿಂದ 6 ಬಾರಿ ಮಾಡಿ ಇದರಿಂದ ಮನಸ್ಸು ನಿರಾಳಗೊಳ್ಳುತ್ತದೆ.

ಸ್ವಲ್ಪ ವಿರಾಮ ನೀಡಿ
ಕೆಲಸ ಮಾಡುವಾಗ ತುಂಬಾ ಒತ್ತಡ ಕಂಡು ಬಂದಲ್ಲಿ ಮೊಬೈಲ್‌, ಲ್ಯಾಪ್‌ ಟಾಪ್‌ಗಳನು ಆಫ್ ಮಾಡಿ, ಎಲ್ಲವನ್ನು ಮರೆತು ಸ್ವಲ್ಪ ಸಮಯ ಬೇರೆ ಯಾವುದಾದರೂ ಖುಷಿ ಕೊಡುವ ಕಾರ್ಯದಲ್ಲಿ ತೊಡಗಿ ಅಥವಾ ಹತ್ತಿರದಲ್ಲಿರುವ ಪಾರ್ಕ್‌ಗಳಿಗೆ ಒಮ್ಮೆ ಹೋಗಿ ಬನ್ನಿ ಇದರಿಂದ ಒತ್ತಡದಿಂದ ಹೊರಬರಲು ಸಾಧ್ಯ ಸ್ನಾಯುಗಳಿಗೆ ವಿಶ್ರಾಂತಿ ನೀಡಿ ದಿನ ವೀಡಿ ಕೆಲಸ ಮಾಡಿ ದಣಿದಿರುತ್ತೀರಿ ಅಂತಹ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ವಿಶ್ರಾಂತಿ ಬೇಕಿರುತ್ತದೆ ಸ್ವಲ್ಪ ಸಮಯವಾದರೂ ಸ್ನಾಯುಗಳಿಗೆ ವಿಶ್ರಾಂತಿ ನೀಡಿ ಇದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಆನಂದ ಸಿಗುತ್ತದೆ. ದೇಹಕ್ಕಾದ ಒತ್ತಡ ಹಾಗೂ ಮನಸ್ಸಿನ ಒತ್ತಡದಿಂದ ಕೊಂಚ ವಿಶ್ರಾಂತಿ ದೊರಕುತ್ತದೆ.

ಧ್ಯಾನ ಮಾಡಿ
ಎಲ್ಲ ರೋಗಗಳಿಗೂ ರಾಮಬಾಣ ಧ್ಯಾನ. ಯಾವುದೇ ಕೆಲಸಗಳ ಕುರಿತು ತಲೆಕೆಡಿಸಿಕೊಳ್ಳದೆ ಒಂದಷ್ಟು ನಿಮಿಷ ಧ್ಯಾನದ ಸ್ಥಿತಿಯಲ್ಲಿ ಕುಳಿತರೆ ದಿನಾ ಉಲ್ಲಾಸದಿಂದ ಕೂಡಿರಲು ಸಾಧ್ಯ. ದಿನಾ ಬೆಳಗ್ಗೆ ಕೆಲವು ನಿಮಿಷವಾದರೂ ಧ್ಯಾನದಿಂದ ಆತಂಕ ಕಡಿಮೆಯಾಗುತ್ತದೆ. ಅದಲ್ಲದೆ ಒತ್ತಡದಲ್ಲಿರುವಾಗ ಬಹು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಧ್ಯಾನದಿಂದ ಕ್ರಿಯಾಶೀಲರಾಗಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next