Advertisement

ಕನ್ನಡ ಭಾಷೆಯ ಪ್ರಭುತ್ವ ಗಟ್ಟಿಗೊಳಿಸಿ: ಡಾ|ಅಂಗಡಿ

05:29 PM Mar 14, 2022 | Team Udayavani |

ಅಳ್ನಾವರ: ತಾಲೂಕು ಕಸಾಪ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧಕಿಯರ ಸತ್ಕಾರ ಸಮಾರಂಭ ಪಟ್ಟಣದಲ್ಲಿ ನಡೆಯಿತು.

Advertisement

ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ನಮ್ಮ ಭವ್ಯ ಸಂಪ್ರದಾಯವನ್ನು ಎತ್ತಿ ಹಿಡಿಯುವ ಮೂಲಕ ಕನ್ನಡ ಭಾಷೆಯ ಪ್ರಭುತ್ವ ಗಟ್ಟಿಗೊಳಿಸಬೇಕು. ಕನ್ನಡವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಶ್ರಮಿಸಬೇಕು ಎಂದರು.

ತಾಲೂಕಾಧ್ಯಕ್ಷರಾಗಿ ಪುನರಾಯ್ಕೆಯಾದ ಡಾ| ಬಸವರಾಜ ಮೂಡಬಾಗಿಲ್‌ ಮಾತನಾಡಿ, ಮಹಿಳಾ ಶಕ್ತಿ ಅಗಾಧವಾದದ್ದು. ಮಹಿಳಾ ಸಾಧಕಿಯರನ್ನು ಸತ್ಕರಿಸಿ ಸಮಾಜದಲ್ಲಿ ಮಹಿಳಾ ಶಕ್ತಿಗೆ ಚೈತನ್ಯ ತುಂಬಲು ಕಸಾಪ ಉತ್ತಮ ಬುನಾದಿ ಹಾಕಿದೆ ಎಂದು ಹೇಳಿದರು.

25ನೇ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿರುವ ವೈ.ವಿ. ಶಿಂಪಿ ಹಾಗೂ ಮಧುಸೂದನ ಕೆರೂರ ದಂಪತಿ, ಆಶಾ ಕಾರ್ಯಕರ್ತೆ ನಿರ್ಮಲಾ ಹಬ್ಬಣ್ಣವರ ಹಾಗೂ ಸಮಾಜ ಸೇವಕಿ ಸ್ನೇಹಶ್ರೀ ಕಿತ್ತೂರವರ ಸತ್ಕಾರ ನಡೆಯಿತು. ಸಮಾಜದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳಾ ಸಾಧಕಿಯರಾದ ಲಕ್ಷ್ಮೀ ಸಬನೀಸ್‌, ಸುಜಾತಾ ಸುಣಗಾರ, ಸುವರ್ಣಾ ತೇಗೂರ, ಮಂಜುಳಾ ಪವಾರ, ಕೆ.ವಿ. ವಿಜಯಾ, ಡಾ| ಮಂಜುಳಾ ಕುಂಬಾರ, ಸಾವಿತ್ರಿ ನಾಗನೂರ
ಅವರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಗಲಾ ರವಳಪ್ಪನವರ, ಉಪಾಧ್ಯಕ್ಷ ನದೀಂ ಕಾಂಟ್ರಾಕ್ಟರ್‌, ಅರಣ್ಯಾ ಧಿಕಾರಿ ಪ್ರಕಾಶ ಕಮ್ಮಾರ, ಡಾ| ಅಶೋಕ ಕುಂಟನ್ನವರ, ಡಾ| ಜೀನದತ್ತ ಹಡಗಲಿ ಇದ್ದರು.

Advertisement

ಕಸಾಪ ನೂತನ ಪದಾಧಿಕಾರಿಗಳು: ಡಾ| ಬಸವರಾಜ ಮೂಡಬಾಗಿಲ್‌ ಅಧ್ಯಕ್ಷ, ಗುರುರಾಜ ಸಬನೀಸ್‌ ಮತ್ತು ರಂಜನಾ ಪಾಂಚಾಳ ಗೌರವ ಕಾರ್ಯದರ್ಶಿ, ಪ್ರವೀಣ ಪವಾರ ಗೌರವ ಕೋಶಾಧ್ಯಕ್ಷ ಹಾಗೂ ಪ್ರತಿನಿಧಿ ಗಳಾಗಿ ಸುರೇಂದ್ರ ಕಡಕೋಳ, ಡಿ.ಎನ್‌. ಲಲಿತಾ, ಮಂಜುಳಾ ಮೇದಾರ, ಜಯಶ್ರೀ ಉಡುಪಿ, ಪೂರ್ಣಿಮಾ ಮುತ್ನಾಳ, ಶೀತಲ ಬೆಟದೂರ, ಉಮೇಶ ಭೂಮಕ್ಕನವರ ಹಾಗೂ ಸದಸ್ಯರಾಗಿ ಮುರಗೇಶ ಇನಾಮದಾರ, ವೈ.ವಿ. ಶಿಂಪಿ, ಸುವರ್ಣಾ ತೇಗೂರ, ಲತಾ ವಿಜಾಪುರ, ಎಸ್‌.ಬಿ. ಪಾಟೀಲ, ಸೆಬಸ್ಟಿನ್‌ ಸೋಜ ಪ್ರತಿಜ್ಞಾ ವಿಧಿ  ಸ್ವೀಕರಿಸಿದರು.

ವಿಶೇಷ ಅಹ್ವಾನಿತರು: ಈರಯ್ಯ ಶೀಲವಂತರಮಠ, ಉದಯ ಶಿಬ್ರಿಕೇರಿ, ಏಕನಾಥ ಹೊನಗೇಕರ, ಶೈಲಾ ಈಳಿಗೇರ, ಅಜ್ಜಪ್ಪ ಕುರುಬರ, ಬಾಬಾಜಾನ ಮುಲ್ಲಾ, ವೀರಭದ್ರಯ್ಯ ಪಾಟೀಲ, ಬಾಬು ಸುಣಗಾರ, ಸಂಧ್ಯಾ ಹಟ್ಟಿಹೋಳಿ, ತುಕಾರಾಮ ಪಾಟೀಲ, ಸ್ನೇಹಶ್ರೀ ಕಿತ್ತೂರ, ಮಂಜುಳಾ ಅಂಬಡಗಟ್ಟಿ, ಸತ್ತಾರ ಬಾತಖಂಡಿ, ಶಾಹು ಶಿಂದೆ ಅವರಿಗೆ ಕನ್ನಡದ ಶಾಲು ಹಾಕಿ ಸತ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next