Advertisement

ನೀರಾವರಿಗಾಗಿ ಸಂಘ ಬಲಪಡಿಸಿ

09:47 AM Jul 22, 2019 | Team Udayavani |

ಹುಬ್ಬಳ್ಳಿ: ಸಮರ್ಪಕ ನೀರಾವರಿಗಾಗಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಬಲಪಡಿಸುವುದು ಅವಶ್ಯ ವಿದೆ ಎಂದು ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಅಭಿಪ್ರಾಯಪಟ್ಟರು.

Advertisement

ನರಗುಂದ ಚಳವಳಿಯ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆ, ಮಲಪ್ರಭಾ ಬಲದಂಡೆ ಕಾಲುವೆಯ ನರಗುಂದ ವಿಭಾಗ ಮತ್ತು ಮಲಪ್ರಭಾ ಸಹಕಾರ ಸಂಘಗಳ ಮಹಾಮಂಡಳ ಹಾಗೂ ವೀರಪ್ಪ ಕಡ್ಲೇಕೊಪ್ಪ ಹುತಾತ್ಮ ಸ್ಮಾರಕ ಸಮಿತಿ ಆಶ್ರಯದಲ್ಲಿ ಚಿಕ್ಕನರಗುಂದಲ್ಲಿ ರವಿವಾರ ಹಮ್ಮಿಕೊಂಡಿದ್ದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಅಭಿಯಾನ ಹಾಗೂ ಕಾಲುವೆಗಳ ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರು ಬಳಕೆದಾರ ಸಹಕಾರ ಸಂಘಗಳು ಹಾಗೂ ನೀರಾವರಿ ಇಲಾಖೆ ಕೈಜೋಡಿಸಿ ಕೆಲಸ ಮಾಡಿದರೆ ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಒಂದು ವರದಾನವಾಗುವುದು ಎಂದರು.

ಮಲಪ್ರಭಾ ಯೋಜನೆ ಅಧೀಕ್ಷಕ ಅಭಿಯಂತರ ರಾಜೇಶ ಮಾತನಾಡಿ, ನೀರಾವರಿ ಜಾಲ ಸುಸ್ಥಿತಿಯಲ್ಲಿಡಲು ನೀರಾವರಿ ಅಧಿಕಾರಿಗಳೊಂದಿಗೆ ಸಂಘಗಳು ಜತೆಗೂಡಿ ಕೆಲಸ ಮಾಡಬೇಕು ಎಂದರು.

ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಬಿ.ವೈ. ಕಾಡಪ್ಪನವರ ಮಾತನಾಡಿ, ಜನ ಸಮುದಾಯಗಳಿಗೆ ಸಂಕಷ್ಟ ಬಂದಾಗ ಚಳವಳಿ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸಿದ ಇತಿಹಾಸ ನರಗುಂದ ರೈತ ಚಳವಳಿಗಿದೆ. ಪ್ರಸ್ತುತ ಜಲ ಸಂಕಷ್ಟದ ಸಂದರ್ಭದಲ್ಲಿ ರೈತ ಸಂಘಟನೆಗಳು ನೀರಾವರಿ ಇಲಾಖೆಯೊಂದಿಗೆ ಕೈಜೋಡಿಸಿ ಹೊಸ ಮಾದರಿಗಳನ್ನು ನಿರ್ಮಿಸಬಲ್ಲವು ಎಂದರು.

Advertisement

ಮುಂಬರುವ ದಿನಗಳಲಿ ಪ್ರತಿ 15 ದಿನಗಳಿಗೊಮ್ಮೆ ತಮ್ಮ ಗ್ರಾಮದ ಕಾಲುವೆಗಳನ್ನು ಸ್ವಚ್ಛಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ರೈತರು ಸ್ವಯಂಪ್ರೇರಣೆಯಿಂದ ಪ್ರತಿಜ್ಞೆ ಮಾಡಿದರು.

ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಮಾಜಿ ಅಧ್ಯಕ್ಷ ಸದುಗೌಡ ಪಾಟೀಲ, ಖುದ್ದಣ್ಣನವರ, ಶೇಖಪ್ಪ ತಿರ್ಲಾಪುರ, ಜಿ.ಆರ್‌. ತಿಮ್ಮಾರೆಡ್ಡಿ, ಎಚ್.ಎನ್‌. ಹಳಕಟ್ಟಿ, ಶಂಕ್ರಣ್ಣ ಯರಗಟ್ಟಿ, ಬಿ.ಎಂ. ರಾಯರೆಡ್ಡಿ, ನರಗುಂದ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಎಸ್‌.ಎಲ್. ಪಾಟೀಲ, ಮೋನಿ ಪಾಟೀಲ ಹಾಗೂ ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಉಪಾಧ್ಯಕ್ಷರು, ನಿರ್ದೇಶಕರು, ಹಾಳಕುಸುಗಲ್, ಅಳಗವಾಡಿ, ಚಿಕ್ಕನರಗುಂದ ಮತ್ತು ಸುತ್ತಮುತ್ತಲಿನ ಗ್ರಾಮದ ನೀರು ಬಳಕೆದಾರರು ಪಾಲ್ಗೊಂಡಿದ್ದರು.

ಮಲಪ್ರಭಾ ಬಲದಂಡೆ ಕಾಲುವೆ ನರಗುಂದ ಉಪಕಾಲುವೆ 23ನೇ ಹಂಚುಕಾಲುವೆ 2ಆರ್‌ ಕಾಲುವೆ ಅಡಿಯಲ್ಲಿ ಬರುವ ಕಾಲುವೆಗಳನ್ನು ಸ್ವಚ್ಛಗೊಳಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನೀರಾವರಿ ಇಲಾಖೆ ಮತ್ತು ವಾಲ್ಮಿ ಸಂಸ್ಥೆ ಅಧಿಕಾರಿಗಳು ಕಾಲುವೆಯಲ್ಲಿ ತುಂಬಿದ್ದ ಹೂಳು, ಕಸಕಡ್ಡಿ, ಕಂಟಿಗಳನ್ನು ತೆರವುಗೊಳಿಸಿ ಕಾಲುವೆ ಸ್ವಚ್ಛಗೊಳಿಸಿದರು.

ವಾಲ್ಮಿಯ ಸಹಾಯಕ ಅಭಿಯಂತ ಮಹದೇವಗೌಡ ಹುತ್ತನಗೌಡರ ಪ್ರಾಸ್ತಾವಿಕ ಮಾತನಾಡಿದರು. ಸಹ ಪ್ರಾಧ್ಯಾಪಕ ಕೃಷ್ಣಾಜಿರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next