Advertisement

ಬೀದಿ ವ್ಯಾಪಾರಿಗಳು ಎಪಿಎಂಸಿಗೆ ಶಿಫ್ಟ್‌

02:45 PM Jan 22, 2021 | Team Udayavani |

ನವಲಗುಂದ: ಬೀದಿ ಬದಿ ತರಕಾರಿ ಇನ್ನಿತರೆ ವ್ಯಾಪಾರ ಮಾಡುವ ವ್ಯಾಪಾರಿಗಳನ್ನು ಸ್ಥಳೀಯ ಎಪಿಎಮ್‌ಸಿ ಆವರಣದಲ್ಲಿ ಜಾಗೆ ಗುರುತಿಸಿ ಗುರುವಾರ ಬೆಳಗ್ಗೆ ಸ್ಥಳಾಂತರ ಮಾಡಲಾಯಿತು.

Advertisement

ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಹಲವಾರು ಬಾರಿ ವ್ಯಾಪಾರಸ್ಥರಲ್ಲಿ ಚರ್ಚಿಸಲಾಗಿತ್ತು, ಹೊಸದಾಗಿ ನಿರ್ಮಿಸಿದ ತರಕಾರಿ ಮಾರುಕಟ್ಟೆಗೆ ಸ್ಥಳಾಂತರವಾಗಲು ತಿಳಿಸಲಾಗಿತ್ತು. ಆದರೂ ಕೂಡಾ ಕೆಲ ದಿನ ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಮತ್ತೆ ಬೀದಿ ವ್ಯಾಪಾರಕ್ಕೆ ಮುಂದಾಗಿದ್ದರು. ಕಾರಣ ಗುರುವಾರ ಬೆಳಗ್ಗೆ ತಹಶೀಲ್ದಾರ್‌ ನವೀನ ಹುಲ್ಲೂರ, ಮುಖ್ಯಾಧಿ  ಕಾರಿ ಎನ್‌.ಎಚ್‌.ಖುದಾವಂದ ಅವರು ಸಿಪಿಐ ಸಿ.ಎಸ್‌.ಮಠಪತಿ, ಪಿಎಸ್‌ಐ ಜಯಪಾಲ ಪಾಟೀಲ ಬಂದೋಬಸ್ತ್ನಲ್ಲಿ ಕಾರ್ಯಾಚರಣೆಗೆ ಮುಂದಾಗಿ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಎಪಿಎಮ್‌ಸಿ ಆವರಣಕ್ಕೆ ಸ್ಥಳಾಂತರಿಸಿದರು.

ಇದನ್ನೂ ಓದಿ:ಸ್ನೇಹಿತರ ಬಾಳಿಗೆ ಆಸರೆಯಾದ ಮಹಾನಾಯಕ

ಕೆಲ ವ್ಯಾಪಾರಸ್ಥರು ಸ್ಥಳಾಂತರ ಮಾಡುತ್ತಿರುವ ಜಾಗೆ ಬಹಳ ದೂರ ಇರುವುದರಿಂದ ಅಲ್ಲಿ ಮೂಲ ಸೌಕರ್ಯಗಳು ಇಲ್ಲದೇ ತೊಂದರೆ ಅನುಭವಿಸುತ್ತೇವೆ. ನಾವು ಎಲ್ಲಿಯೂ ಹೋಗಲ್ಲವೆಂದು ಅಧಿಕಾರಗಳ ಜತೆ ಮಾತಿನ ಚಕಮಕಿ ನಡೆಸಿದರು. ಅಧಿಕಾರಿಗಳು ವ್ಯಾಪಾರಸ್ಥರ ಮನವೊಲಿಸಿ ಜಿಲ್ಲಾ ಧಿಕಾರಿಗಳ ಆದೇಶದಂತೆ ಸ್ಥಳಾಂತರವಾಗಲೇಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.