Advertisement

ಜನಪದ ಗೀತೆಗಳ ಬೀದಿ ನಾಟಕ ಪ್ರದರ್ಶನ

04:10 PM Jan 26, 2020 | Suhan S |

ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಕೆಂಚಾಯಿಕೊಪ್ಪ ತಾಂಡಾದ ಸೇವಾಲಾಲ್‌ ದೇವಸ್ಥಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಜನಪದ ಗೀತೆಗಳು’ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಸರಕಾರದ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.

Advertisement

ಕನ್ನಡತಿ ಕಲಾ ತಂಡದ ಲಲಿತಾ ಪಾಟೀಲ ನಾಟಕ ಪ್ರದರ್ಶನ, ದುರ್ಗಾದೇವಿ ಸಂಸ್ಕೃತ ಜನಪದ ಕಲಾ ತಂಡದ ರೇಣುಕಾ ಛಲವಾದಿ ತಂಡದವರು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಿಗುವ ಪ್ರಯೋಜನಗಳಾದ ಕೃಷಿ ಕ್ಷೇತ್ರಕ್ಕೆ ಸಂಬಂ ಧಿಸಿದ ಬಗ್ಗೆ ಸಹಾಯಧನ ಹಾಗೂ ನೆರೆ ಸಂತ್ರಸ್ಥರಿಗೆ ಸಿಗುವ ಸೌಲಭ್ಯ, ನೇಕಾರರು ಹಾಗೂ ಮೀನುಗಾರರ ಸಾಲಮನ್ನಾ, ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಪಿಡಿಒ ಶೃತಿ ಕೆ.ಎನ್‌. ಮಾತನಾಡಿ, ಸರಕಾರದ ಯೋಜನೆಗಳು ಯಾವ ರೀತಿಯಾಗಿ ಸಾರ್ವಜನಿಕರು ಬಳಸಿಕೊಳ್ಳಬೇಕು ಹಾಗೂ ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ನಿತ್ಯ ಉಪಯೋಗಕ್ಕೆ ಬಳಸುವ ನೀರು, ಸ್ವತ್ಛತೆ ರೈತರಿಗೆ ಸಿಗುವಂತಹ ಕೃಷಿ ಇಲಾಖೆಯ ಪ್ರಯೋಜನಗಳು ಬೆಳೆ ಹಾನಿ, ಮಳೆ ಬಂದು ಮನೆ ಹಾಳಾಗಿರುವುದರ ಬಗ್ಗೆ ಸಾರ್ವಜನಿಕರು ಯಾವ ರೀತಿಯಾಗಿ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಗೆ ತಲುಪಿಸಬೇಕು ಎಂದು ಕಲಾ ತಂಡಗಳು ಅತ್ಯಂತ ಸರಳವಾಗಿ ತಿಳಿಸಿಕೊಟಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗ್ರಾಪಂ ಅಧ್ಯಕ್ಷ ಬಸವಣ್ಣೆಪ್ಪ ಪಾಳೆದ, ಗ್ರಾಪಂ ಉಪಾಧ್ಯಕ್ಷೆ ರೇಣುಕಾಬಾಯಿ ಲಮಾಣಿ, ಶಿವಾನಂದ ದೇವಾಂಗದ, ಕುಮಾರ ಬಾಳೆಕೊಪ್ಪ, ಪರಮೇಶ ಚಪ್ಪರದಳ್ಳಿ, ರಾಮಪ್ಪ ಹರಿಜನ, ಪ್ರಕಾಶ ಹರಿಜನ, ರವಿ ಕಾಯ್ಕದ, ವಸಂತ ಪಾಳೆದ, ನಿಂಗನಗೌಡ ಬೆಳ್ಳೂರ, ರುದ್ರಗೌಡ ಬೆಳ್ಳೂರ, ಮುಖ್ಯ ಶಿಕ್ಷಕ ರವೀಂದ್ರ ಕೊಡಮಗ್ಗಿ, ಗ್ರಾಮಸ್ಥರಾದ ರವಿ ಲಮಾಣಿ, ಫಕೀರನಾಯಕ ಲಮಾಣಿ, ಫಕೀರಪ್ಪ ಲಮಾಣಿ, ಸೋಮಾನಾಯಕ್‌ ಲಮಾಣಿ, ಗದಗಿಬಾಯಿ ಲಮಾಣಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next