ಹೊಳೆನರಸೀಪುರ: ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ತಪ್ಪಿಸುವ ಸಲುವಾಗಿ ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳು ಶುಕ್ರವಾರ ದಿಂದ ವ್ಯಾಪಾರ ವಹಿವಾಟು ನಿಲ್ಲಿಸಿ ತಾಲೂಕು ಆಡಳಿತದ ಜೊತೆಯಲ್ಲಿ ಕೈಜೋಡಿಸ ಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಮನವಿ ಮಾಡಿದರು.
ಪುರಸಭೆ ಸಭಾಂಗಣದಲ್ಲಿ ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಕೊರಾನಾ ಸಾಂಕ್ರಮಿಕ ರೋಗ ಬೀದಿ ಬದಿಯಲ್ಲಿ ಮಾರಾಟ ಮಾಡುವ ತಿಂಡಿ ತಿನಿಸು ಗಳಿಂದಲೂ ಹರಡುವ ಸಾಧ್ಯತೆ ಅಧಿಕ ವಾಗಿರುವುದರಿಂದ ವ್ಯಾಪಾರಿಗಳು ತಮ್ಮೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿ, ಜಿಲ್ಲೆಯಲ್ಲಿ ಇಂಥ ರೋಗದ ಲಕ್ಷಣಗಳು ಇಲ್ಲವಾಗಿದ್ದರೂ ಮುಂಜಾಗ್ರತೆಯಿಂದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.
ತಾವುಗಳು ನಮ್ಮೊಂದಿಗೆ ನಾಲ್ಕಾರು ದಿನಗಳು ಸಹಕರಿಸಿ ಅನಂತರ ಮುಂದಿನ ಪರಿಸ್ಥಿತಿ ನೋಡಿ ಕೊಂಡು ತಿಂಡಿ ತಿನಿಸು ಗಳ ಬೀದಿ ಬದಿ ವ್ಯಾಪಾರ ಮಾಡಬೇಕೆ ಬೇಡವೇ ಎಂದು ತೀರ್ಮಾನಿಸೋಣ. ಅದಕ್ಕಾಗಿ ತಾವುಗಳು ನಮ್ಮೊಂದಿಗೆ ಸಹಕಾರದ ಹಸ್ತ ನೀಡಬೇಕೆಂದು ಮನವಿ ಮಾಡಿದ ಅವರು ಶುಕ್ರವಾರದಿಂದ ಪ್ರಾಥಮಿಕ ಶಾಲೆ ಮಕ್ಕಳಿಗೆ ರಜೆ ಘೋಷಣೆ ಮಾಡುತ್ತಿದೆ ಎಂಬ ಮಾಹಿತಿ ನೀಡಿದರು. ಪುರಸಭೆ ಪರಿಸರ ಎಂಜಿನಿಯರ್ ಅಶ್ವಿನಿ ಮಾತನಾಡಿ, ಈ ಸಾಂಕ್ರಾಮಿಕ ರೋಗ ಎಲ್ಲಡೆ ಹರಡುತ್ತಿರುವುದರಿಂದ ಬೀದಿ ಬದಿಯಲ್ಲಿನ ವ್ಯಾಪಾರಿಗಳು ಶುಕ್ರವಾರದಿಂದಲೇ ಕೆಲವು ದಿನಗಳು ವ್ಯಾಪಾರ ಮಾಡುವು ದನ್ನು ಕೈಬಿಟ್ಟು ಪುರಸಭೆಯೊಂದಿಗೆ ಸಹಕಾರದ ಹಸ್ತ ನೀಡಬೇಕೆಂದು ಮನವಿ ಮಾಡಿದರು.
ಕೆಲವು ವ್ಯಾಪಾರಿಗಳು ತಾವು ಹಣ್ಣಿನ ವ್ಯಾಪಾರಿಯಾಗಿದ್ದು ಲಕ್ಷಾಂತರ ರೂ. ಬಂಡವಾಳ ಹಾಕಿ ಹಣ್ಣುಗಳು ಬಂದಿದೆ, ಅವುಗಳನ್ನು ಮಾರಾಟ ಮಾಡುವುದು ಬೇಡವೆಂದರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸಿದ ಪರಿಸರ ಎಂಜಿನಿಯರ್ ಹಣ್ಣಿನ ವ್ಯಾಪಾರ ಮಾಡಬೇಡಿ ಎಂದು ಹೇಳುತ್ತಿಲ್ಲ, ಆದರೆ ಅವುಗಳನ್ನು ಕತ್ತರಿಸಿ ಮಾರಾಟ ಮಾಡುವುದು ಬೇಡಿ ಹುಂಡಿಯಾಗಿ ಹಣ್ಣು ಗಳನ್ನು ಮಾರಾಟ ಮಾಡಿಕೊಳ್ಳಿ, ತಮಗೆ ನಮ್ಮ ಈ ನಿರ್ಧಾರದಿಂದ ಬೇಸರ ಉಂಟಾಗಿದೆ ಎಂಬ ಅಂಶ ನಮಗೂ ಅರಿವಿದೆ. ಆದರೆ ಈ ಎಲ್ಲ ಮಾನವೀಯತೆ ಮಧ್ಯೆ ಪ್ರತಿಯೊಬ್ಬರ ಪ್ರಾಣವನ್ನು ಕಾಪಾಡುವುದು ನಮ್ಮಗಳೆಲ್ಲರ ಕರ್ತವ್ಯವಾಗಬೇಕು. ಆದ್ದರಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬೇಯಿಸಿ ಮಾಡುವ ಪದಾರ್ಥಗಳನ್ನು ಖಂಡಿತವಾಗಿ ಮಾರಾಟ ಮಾಡುವುದು ಬೇಡ. ಈ ನಿರ್ಧಾರದಿಂದ ಸಾಂಕ್ರಾಮಿಕ ರೋಗ ತಡೆಗಟ್ಟಲು ಸಾಧ್ಯವಾದರೆ ಅದೇ ನಾವು ನೀವುಗಳು ಸಮಾಜಕ್ಕೆ ನೀಡುವ ಬಳುವಳಿ ಆಗಿದೆ ಎಂದರು.
ತುರ್ತು ಸಭೆಯಲ್ಲಿ ಪಟ್ಟಣದ ನೂರಾರು ಮಂದಿ ಬೀದಿ ಬದಿ ವ್ಯಾಪಾರಸ್ಥರು ಆಗಮಿಸಿ ಪುರಸಭೆ ಅಧಿಕಾರಿಗಳು ನೀಡಿದ ಸೂಚನೆಯನ್ನು ಪರಿಪಾಲಿಸು ವುದಾಗಿ ತಿಳಿಸಿ ನಿಮ್ಮೊಂದಿಗೆ ನಾವುಗಳು ಕೈಜೋಡಿಸುವುದಾಗಿ ಭರವಸೆ ನೀಡಿದರು.