Advertisement

ಹಗಲಿನಲ್ಲೂ ಬೆಳಗುತ್ತಿರುವ ಬೀದಿ ದೀಪ

09:27 PM Jun 02, 2019 | Lakshmi GovindaRaj |

ದೇವನಹಳ್ಳಿ: ರಾಜ್ಯ ಈಗಾಗಲೇ ವಿದ್ಯುತ್‌ ಕೊರತೆ ಎದುರಿಸುತ್ತಿರುವುದು ಗೊತ್ತಿದೆ. ವಿದ್ಯುತ್‌ ಪೋಲಾಗುವುದನ್ನು ತಪ್ಪಿಸಲು ಇಂಧನ ಇಲಾಖೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ.

Advertisement

ಆದರೆ ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೈಲಗೆರೆ ಗ್ರಾಮದಲ್ಲಿ ಸೂಕ್ತ ವಿದ್ಯುತ್ತ ನಿರ್ವಹಣೆಯಾಗುತ್ತಿಲ್ಲ. ಗ್ರಾಮದಲ್ಲಿ ಹಗಲಿನಲ್ಲಿಯೂ ವಿದ್ಯುತ್‌ ದೀಪಗಳು ಉರಿಯುತ್ತಿದ್ದರೂ ಅಧಿಕಾರಿಗಳಾಗಲಿ, ಗ್ರಾಪಂ ಸದಸ್ಯರು ಅಥವಾ ಅಧ್ಯಕ್ಷರಾಗಲಿ ಕ್ರಮಕೈಗೊಂಡಿಲ್ಲ. ಇದರಿಂದಾಗಿ ವಿದ್ಯುತ್‌ ಪೋಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಂಬದಲ್ಲೆ ಸ್ವಿಚ್‌ ಇದ್ದರೂ ಗಮನವಿಲ್ಲ: ಹಗಲಿನಲ್ಲೂ ವಿದ್ಯುತ್‌ ದೀಪ ಉರಿಯುತ್ತಿರುವ ಯಾರ ಕಣ್ಣಿಗೂ ಬಿದ್ದಿಲ್ಲವೆನಿಸುತ್ತಿದೆ. ವಿದ್ಯುತ್‌ ದೀಪ ಉರಿಯುತ್ತಿರುವ ಕಂಬದಲ್ಲಿಯೇ ಸ್ವಿಚ್‌ ಬೋರ್ಡ್‌ ಅಳವಡಿಸಿದ್ದರೂ ಗ್ರಾಮಸ್ಥರಾಗಲಿ ನಿರ್ವಹಣೆ ಮಾಡುವವರಾಗಲಿ ಗಮನಹರಿಸಿಲ್ಲದಿರುವುದು ವಿಪರ್ಯಾಸವಾಗಿದೆ. ಇದೇ ಕಂಬದ ಪಕ್ಕದಲ್ಲಿರುವ ಮತ್ತೂಂದು ಕಂಬದಲ್ಲೂ ಸಹ ಇದೇ ರೀತಿ ವಿದ್ಯುತ್‌ ಪೋಲಾಗುತ್ತಿರುವ ವಿದ್ಯುತ್‌ ದೀಪ ಬೆಳಗಿನ ಸಮಯದಲ್ಲೂ ಸಹ ಯಾವುದೇ ಹಂಗಿಲ್ಲದಂತೆ ಉರಿಯುತ್ತಿರುವುದು ಕಂಡು ಬಂದಿದೆ.

ಸ್ಥಳೀಯ ಗ್ರಾಮಸ್ಥರು ಇತ್ತ ಗಮನ ಹರಿಸಬೇಕು. ಪೋಲಾಗುತ್ತಿರುವ ವಿದ್ಯುತ್‌ನ್ನು ಉಳಿಸುವ ನಿಟ್ಟಿನಲ್ಲಿ ಬೆಳಗಿನ ಸಮಯದಲ್ಲೂ ಸಹ ಉರಿಯುತ್ತಿರುವ ವಿದ್ಯುತ್‌ ದೀಪವನ್ನು ರಾತ್ರಿ ಸಮಯದಲ್ಲಿ ಮಾತ್ರ ಉಪಯೋಗಿಸಬೇಕು ಹಾಗೂ ಸ್ವಿಚ್‌ ಬೋರ್ಡ್‌ ಇದ್ದಲ್ಲಿ ಬೆಳಿಗಿನ ಜಾವ ವಿದ್ಯುತ್‌ ದೀಪ ಬೆಳಗುತ್ತಿದ್ದುದ್ದನ್ನು ಕಂಡಾಗ ಬೆಸ್ಕಾಂನವರನ್ನು ಅಥವಾ ಗ್ರಾಪಂನವರನ್ನು ಕಾಯದೇ ಆರಿಸುವ ಕಾರ್ಯಕ್ಕೆ ಸಾರ್ವಜನಿಕರೇ ಮುಂದಾಗಬೇಕು.

ಸ್ವಯಂ ಪ್ರೇರಿತರಾಗಿ ಪೋಲಾಗುವುದನ್ನು ತಡೆಯಿರಿ: ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಮಾಡುವವರಿಗೆ ವಿದ್ಯುತ್‌ ಪೋಲಾಗುತ್ತಿರುವುದ ಬಗ್ಗೆ ಅರಿವು ಮೂಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ತಾಕೀತು ಮಾಡಬೇಕು. ವಿದ್ಯುತ್‌ ಸೋರಿಕೆ ಸಮಸ್ಯೆ ಅರ್ಧದಷ್ಟು ಹತೋಟಿಗೆ ಬರುವುದು.

Advertisement

ಇದರ ಜೊತೆಗೆ ಗ್ರಾಮದ ಜನರು ಸಹ ಈ ¸ಗ್ಗೆ ಅರಿವು ಹೊಂದಿರಬೇಕು. ತಮ್ಮ ತಮ್ಮ ಗ್ರಾಮಗಳಲ್ಲಿ ಬೆಳಗ್ಗಿನ ವೇಳೆ ಅನಗತ್ಯವಾಗಿ ವಿದ್ಯುತ್‌ ಪೋಲಾಗುತ್ತಿದ್ದರೆ, ಅದನ್ನು ತಡೆಯಲು ಮುಂದಾಗುವಂತೆ ಪ್ರೇರೇಪಿಸಿದರೆ ಶಾಶ್ವತವಾಗಿ ಪರಿಹಾರ ಕಾಣಲು ಸಾಧ್ಯ ವಾಗುತ್ತದೆ ಎಂಬ ಸಾರ್ವಜನಿಕರ ಅಭಿಪ್ರಾಯವಾಗಿದೆ.

ಹಗಲಿನಲ್ಲಿ ವಿದ್ಯುತ್‌ ದೀಪ ಉರಿಯುತ್ತಿದ್ದರೆ ತಕ್ಷಣ ಆರಿಸುವ ಕಾರ್ಯವಾಗಬೇಕು. ಇದರಿಂದ ವಿದ್ಯುತ್‌ ಉಳಿತಾಯವಾಗಬೇಕು. ಮಧ್ಯಾಹ್ನವಾದರೂ ಬೀದಿ ದೀಪಗಳು ಉರಿಯುತ್ತಿರುವುದು. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಿ ವಿದ್ಯುತ್‌ ಉಳಿತಾಯ ಮಾಡಬೇಕಿದೆ.
-ವೇಣು ಗೋಪಾಲ್‌, ಗ್ರಾಮಸ್ಥ

14ನೇ ಹಣಕಾಸಿನಲ್ಲಿ 60% ಹಣವನ್ನು ಬೆಸ್ಕಾಂ ಇಲಾಖೆ ಮತ್ತು ನೀರಿನ ನಿರ್ವಹಣೆಗೆ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಬೆಸ್ಕಾಂ ಇಲಾಖೆ ಯ ಅಧಿಕಾರಿಗಳು ಮತ್ತು ಪಿಡಿಒ ಸಭೆ ಕರೆದು ಎಲ್ಲಾ ವಿದ್ಯುತ್‌ ದೀಪಗಳಿರುವ ಕಂಬಗಳಿಗೆ ಮೀಟರ್‌ ಅಳವಡಿಸಿದರೆ ಸರ್ಕಾರಕ್ಕೆ ಮತ್ತು ಗ್ರಾಪಂಗೆ ಹಣ ಉಳಿತಾಯವಾಗುತ್ತದೆ. ಎಲ್ಲೆಡೆ ನೀರಿಗೆ ಮೀಟರ್‌ ಅಳವಡಿಸಲು ಸೂಚನೆ ನೀಡಲಾಗಿದೆ. ಬೆಸ್ಕಾಂಗೆ ಹಲವಾರು ಬಾರಿ ಮಿಟರ್‌ ಅಳವಡಿಸುವಂತೆ ತಿಳಿಸಲಾಗಿದೆ.
-ಮುರುಡಯ್ಯ, ತಾಪಂ ಕಾರ್ಯ ನಿರ್ವಹಣಾಧಿಕಾರಿ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next