Advertisement

ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳೇ ಮಾಯ

01:28 AM Sep 01, 2019 | sudhir |

ಸ್ಮಾರ್ಟ್‌ಸಿಟಿ ನಗರವಾಗಿ ಅಭಿವೃದ್ಧಿ ಹೊಂದಬೇಕಾದ ಮಂಗಳೂರು ಸಮಸ್ಯೆಗಳ ಆಗರವಾಗಿ ಬದಲಾಗುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ಹಲವಾರು ಸಮಸ್ಯೆಗಳಿಂದ ‌ ಜನತೆ ತತ್ತರಿಸಿದ್ದಾರೆ. ಈ ನಡುವೆ ನಗರದ ಪ್ರಮುಖ ರಸ್ತೆಗಳ ಬೀದಿ ದೀಪಗಳೇ ಉರಿಯುತ್ತಿಲ್ಲ.

Advertisement

ಉರ್ವಾಸ್ಟೋರ್‌ ರಸ್ತೆ, ಬಿಜೈ- ಕಾಪಿಕಾಡ್‌ ರಸ್ತೆ ಸೇರಿದಂತೆ ಬಹುತೇಕ ಒಳರಸ್ತೆಗಳಲ್ಲಿ ಬೀದಿ ದೀಪಗಳು ಕಾರ್ಯಾಚರಿಸುತ್ತಿಲ್ಲ. ಒಳರಸ್ತೆಗಳಲ್ಲಿ ಬೀದಿ ದೀಪಗಳು ಉರಿಯದೆ ಇರುವ ಕಾರಣದಿಂದ ಒಂಟಿಯಾಗಿ ಓಡಾಡುವುದಕ್ಕೂ ಮಹಿಳೆಯರು, ಮಕ್ಕಳು ಭಯ ಬೀಳುತ್ತಿದ್ದಾರೆ. ಕತ್ತಲು ಇರುವ ಕಡೆಗಳಲ್ಲಿ ನಾಯಿಗಳ ಗುಂಪು ಸೇರುತ್ತದೆ. ಇದು ಕಚ್ಚುವ ಭಯದಿಂದ ಜನರು ಓಡಾಡಲು ಹೆದರುತ್ತಿದ್ದಾರೆ. ಇದರೊಂದಿಗೆ ರಸ್ತೆ ಬದಿಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಬೀದಿ ದೀಪಗಳೂ ಇಲ್ಲದೆ ಇರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಇದನ್ನು ಅರಿಯಲು ಕಷ್ಟವಾಗುತ್ತಿದೆ. ಇದರಿಂದಾಗಿ ಅನೇಕರು ಬಿದ್ದು ಈಗಾಗಲೇ ಗಾಯಗೊಂಡಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next