Advertisement

ಬೀದಿ ದೀಪ ವ್ಯವಸ್ಥೆ: ಇನ್ನೆರಡು ತಿಂಗಳಲ್ಲಿ ಆಧುನಿಕ ಸ್ಪರ್ಶ

04:49 PM Oct 11, 2022 | Team Udayavani |

ಉಡುಪಿ: ನಗರದ ಬೀದಿ ದೀಪ ವ್ಯವಸ್ಥೆ ಮೇಲ್ದರ್ಜೆಗೇರಲು ಇನ್ನೂ ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ. ಬೀದಿ ದೀಪ ವ್ಯವಸ್ಥೆಯನ್ನು ಸಂಪೂರ್ಣ ಎಲ್‌ಇಡಿಗೊಳಿಸುವ ಯೋಜನೆ ಸಾಕಷ್ಟು ವಿಳಂಬವಾಗಿದೆ. ಹಲವು ವಾರ್ಡ್‌ಗಳಲ್ಲಿ ಬೀದಿ ದೀಪ ಸಮಸ್ಯೆಗಳಿಂದ ಕೂಡಿದ್ದು, ಪ್ರಮುಖ ಜಂಕ್ಷನ್‌, ವಸತಿ ಪ್ರದೇಶಗಳಲ್ಲಿ ಮಕ್ಕಳು, ಮಹಿಳೆಯರು ಓಡಾಟ ನಡೆಸಲು ಆತಂಕಪಡುವಂತಾಗಿದೆ. ಪ್ರಸ್ತುತ ಇರುವ ಬೀದಿ ದೀಪ ನಿರ್ವಹಣೆ ದೂರಿಗೂ ವಿಳಂಬವಾಗುತ್ತಿದೆ ಎಂಬುದು ನಾಗರಿಕರ ದೂರು.

Advertisement

ಟೆಂಡರ್‌ ಪ್ರಕ್ರಿಯೆ ವಿಳಂಬಕ್ಕೆ ತಾಂತ್ರಿಕ ಸಮಸ್ಯೆಗಳು ಕಾರಣ ಎನ್ನಲಾಗುತ್ತಿದೆ. ಇನ್ನೂ ಎರಡು ತಿಂಗಳ ಒಳಗೆ ಸಂಪೂರ್ಣ ಎಲ್‌ಇಡಿ ಲೈಟ್‌ ವ್ಯವಸ್ಥೆ ಮಾಡುವ ಭರವಸೆಯನ್ನು ನಗರಸಭೆ ನೀಡಿದೆ.

ಮಣಿಪಾಲದ ಅಂಚೆ ಕಚೇರಿ ಸಮೀಪದ ಬಸ್‌ ನಿಲ್ದಾಣ ಪರಿಸರದ ಜಂಕ್ಷನ್‌ ಸಹ ಕತ್ತಲೆಮಯವಾಗಿದೆ. ಮಣಿಪಾಲ ಜೂನಿಯರ್‌ ಕಾಲೇಜು, ಮಾಧವ ಕೃಪಾ ಶಾಲೆಯ ಜಂಕ್ಷನ್‌ ಮತ್ತು ಅಲೆವೂರು- ಮಣಿ ಪಾಲ ರಸ್ತೆಯ ಇಂಡಸ್ಟ್ರಿಯಲ್‌ ಪ್ರದೇಶದ ಕಡೆಗೆ ಸಾಗುವ ರಸ್ತೆಯ ಕೆಲವೆಡೆ ಬೀದಿ ದೀಪ ಬೆಳಗುತ್ತಿಲ್ಲ. ರಾತ್ರಿ ಪಾಳಿ ಕೆಲಸಕ್ಕೆ ಹೋಗುವ, ಬರುವ ಮಹಿಳೆಯರು ಯುವತಿಯರು, ಸಂಜೆ ವೇಳೆ ಕೋಚಿಂಗ್‌ ತೆರಳುವ ವಿದ್ಯಾರ್ಥಿಗಳಿಗೆ ಅಭದ್ರತೆ ಕಾಡುತ್ತಿದೆ.

630 ಪೋಲ್‌ಗ‌ಳ ಅಳವಡಿಕೆ

Advertisement

ಸಾರ್ವಜನಿಕ ಸಹಭಾಗಿತ್ವದಲ್ಲಿ ಮಣಿಪಾಲ ಕಾಯಿನ್‌ ವೃತ್ತದಿಂದ ಅಂಬಾಗಿಲು, ಮಣಿಪಾಲದ ಅಂಚೆ ಕಚೇರಿಯಿಂದ ಅಲೆವೂರು ರಸ್ತೆಯ ಬೀದಿ ದೀಪ ಅಳ ವ ಡಿ ಕೆ ಗೆ ಪ್ರತ್ಯೇಕ ಟೆಂಡರ್‌ ಕರೆಯಲಾಗಿದ್ದು ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 630 ಪೋಲ್‌ಗ‌ಳನ್ನು ಅಳವಡಿಸಲಾಗುವುದು. ಸ್ಮಾರ್ಟ್‌ ಬೀದಿ ದೀಪ ವ್ಯವಸ್ಥೆ ಇದಾಗಿದೆ. ಇದರ ತಯಾರಿ ಕೆಲಸ ಈಗಾಗಲೇ ಆರಂಭಗೊಂಡಿದ್ದು ಇನ್ನೆರೆಡು ತಿಂಗಳ ಒಳಗೆ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

17 ಸಾವಿರ ಎಲ್‌ಇಡಿ ಬಲ್ಬ್ ಅಳವಡಿಕೆ: ಶೀಘ್ರದಲ್ಲೇ ಬೀದಿದೀಪದ ಸಮಸ್ಯೆಗೆ ಮುಕ್ತಿ ಸಿಗಲಿದೆ. ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಯೋಜನೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು ಎಂಬ ಉದ್ದೇಶವಿದ್ದು ಇತರ ತಾಂತ್ರಿಕ ಸಮಸ್ಯೆಗಳಿಂದ ವಿಳಂವಾಗಿದೆಯಷ್ಟೆ. ಎಲ್ಲ 35 ವಾರ್ಡ್‌ಗಳಲ್ಲಿ 17,126 ಎಲ್‌ಇಡಿ ಬಲ್ಬ್ ಅಳವಡಿಸಲಾಗುವುದು. ಕೆಲವು ಕಡೆ ಬಿಟ್ಟು ಹೋಗಿದ್ದಲ್ಲಿ, ಅಗತ್ಯ ಇರುವಲ್ಲಿ ಬೀದಿ ದೀಪ ವ್ಯವಸ್ಥೆ ರೂಪಿಸಲು ಮರು ಸಮೀಕ್ಷೆ (ಲೈಟ್‌ ಆಡಿಟಿಂಗ್‌) ನಡೆಸಲಾಗುತ್ತಿದೆ, 10 ವಾರ್ಡ್‌ಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಯೋಜನೆಯ ಟೆಂಡರ್‌ ಅಂತಿಮಗೊಂಡು ಜಿಲ್ಲಾಧಿಕಾರಿಗಳು ಅನುಮೋದನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಸರಕಾರದ ಹಂತದಲ್ಲಿ (ಪೌರಸಭೆ ಆಡಳಿತ ನಿರ್ದೇಶಾನಲಯ) 15ರಿಂದ 20 ದಿನದ ಒಳಗೆ ಇದಕ್ಕೆ ಅನುಮೋದನೆ ಸಿಗಲಿದೆ. ಎರಡು ತಿಂಗಳ ಒಳಗೆ ನಗರದಲ್ಲಿ ಎಲ್‌ಇಡಿ ಬಲ್ಬ್ ಯೋಜನೆ ಅನುಷ್ಠಾನಗೊಳ್ಳಲಿದೆ. – ಕೆ. ರಘುಪತಿ ಭಟ್‌, ಶಾಸಕರು, ಸುಮಿತ್ರಾ ನಾಯಕ್‌, ನಗರ ಸಭಾಧ್ಯಕ್ಷರು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next