Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ತಮ್ಮ ಬದುಕಿನ ಕ್ಷಣಗಳ ಮೆಲುಕು ಹಾಕಿದರು. “ಕಪ್ಪಣ್ಣ ಎಂಬುವುದಕ್ಕೆ ಒಂದು ಪುಟ್ಟ ಕಥೆ ಇದೆ. ನಾನು ನೋಡಲು ಕಪ್ಪಗಿದ್ದ ಕಾರಣ ಎಲ್ಲರೂ ನನ್ನನ್ನು “ಕಪ್ಪಣ್ಣ’ ಎನ್ನುತ್ತಿದ್ದರು. ಅದೇ ಮುಂದೆ ನನ್ನ ಹೆಸರಿನ ಅವಿಭಾಜ್ಯ ಅಂಗವಾಗಿ ಅಚ್ಚಳಿಯದೆ ಉಳಿಯಿತು,’ ಎಂದು ತಮ್ಮ ನಿಕ್ ನೇಮ್ ಸ್ವಾರಸ್ಯ ಬಿಡಿಸಿಟ್ಟರು.
Related Articles
Advertisement
“ಅವಕಾಶಕ್ಕಾಗಿ ಎಂದೂ ರಾಜಕೀಯ ಲಾಬಿ ಮಾಡಿದವನು ನಾನಲ್ಲ. ಕೆಲವರಿಗೆ ನನ್ನ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳಿವೆ. ಎಲ್ಲ ರಾಜಕೀಯ ಮುಖಂಡರೊಂದಿಗೆ ನಾನು ಒಡನಾಟ ಇಟ್ಟುಕೊಂಡಿದ್ದೇನೆ. ಆದರೆ ಯಾವತ್ತೂ ಯಾರ ಮುಂದೆಯೂ ಕೈಚಾಚಿಲ್ಲ. ಇದು ಇಲಾಖಾವಾರು ಅಧಿಕಾರಿಗಳಿಗೆ ತಿಳಿದಿದೆ. ಕೈಚಾಚಿ ನಿಲ್ಲುವುದನ್ನು ರಂಗಭೂಮಿಯ ನಂಟು ಹೇಳಿಕೊಟ್ಟಿಲ್ಲ,’ ಎಂದು ನುಡಿದರು.
“ದಲಿತ ಕಲಾವಿದರನ್ನು ಅಕ್ಕ ಸಮ್ಮೇಳನ ಸೇರಿದಂತೆ ಹಲವು ಸಮ್ಮೇಳನಕ್ಕೆ ಕರೆದುಕೊಂಡು ಹೋಗಿದ್ದು, ನನ್ನ ಬದುಕಿಗೆ ಖುಷಿ ಕೊಟ್ಟಿದೆ. ಈಗಲೂ ಪೌರಕಾರ್ಮಿಕ ಮಕ್ಕಳಿಗೆ ಜಾನಪದ ಕಲಾ ಪ್ರಕಾರಗಳ ಬಗ್ಗೆ ತರಬೇತಿ ನೀಡುತ್ತಿದ್ದೇನೆ. ನಾನು ಒಂದು ನಿರ್ಧಿಷ್ಟ ವಾದ ಕ್ಷೇತ್ರಕ್ಕೆ ಸೀಮಿತವಾದವನಲ್ಲ,’ ಎಂದರು.
ಇದೇ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಈ ಹಿಂದೆ ಈ ಕಾರ್ಯಕ್ರಮ ಕೇವಲ ಸಾಹಿತಿಗಳಿಗೆ ಸೀಮಿತವಾಗಿತ್ತು.ಆದರೆ ಇದರಲ್ಲಿ ಬದಲಾವಣೆ ಮಾಡಿ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವರನ್ನು ಅತಿಥಿಗಳಾಗಿ ಆಹ್ವಾನಿಸುವ ಸಂಪ್ರದಾಯ ಬಂದಿದೆ. ರಂಗ ಮತ್ತು ಜಾನಪದ ಕ್ಷೇತ್ರಕ್ಕೆ ಕಪ್ಪಣ್ಣ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಹಲೋ… ಮೈಕ್ ಟೆಸ್ಟಿಂಗ್ 1, 2, 3…: “ವಾರ್ತಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದ ನಾನು, ಇಲಾಖೆ ವರಿಯಿಂದ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆ ಮತ್ತು ಮೈಕ್ ಸಿದ್ಧಪಡಿಸುತ್ತಿದ್ದೆ. ಮೈಕ್ ಸಿದ್ಧಪಡಿಸುವಾಗ “ಹಲೋ… ಮೈಕ್ ಟೆಸ್ಟಿಂಗ್; ಹಲೋ… ಲೈಟ್ ಸರಿ ಇದೆಯಾ’ ಎಂದು ಕೂಗಿ ಕೇಳುವುದು ಅಭ್ಯಾಸವಾಗಿತ್ತು.
ಆಗ ಹಾಗಿದ್ದವನು, ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ,’ ಎಂದು ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ನೆನದ ಶ್ರೀನಿವಾಸ ಜಿ. ಕಪ್ಪಣ್ಣ, “36 ವರ್ಷಗಳ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ನಾಟಕ ಅಕಾಡೆಮಿಯ ಅಧ್ಯಕ್ಷನಾದೆ. ಈ ಅವಧಿಯಲ್ಲಿ ಜಾನಪದ ಜಾತ್ರೆ ಮತ್ತು ನಿತ್ಯೋತ್ಸವ ದಂತ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕೆಲಸ ಖುಷಿ ಕೊಟ್ಟಿದೆ,’ ಎಂದರು.