Advertisement

ಬೀದಿನಾಯಿ,ಮಂಗಗಳ ಕಾಟಕ್ಕೆ ಜನತೆ ಹೈರಾಣ

07:09 PM Aug 20, 2021 | Team Udayavani |

ಆಲೂರು: ತಾಲೂಕಿನ ಪಟ್ಟಣ ಸೇರಿ ಕೆಲವು ಗ್ರಾಮಗಳಲ್ಲಿ ಮಂಗಗಳು ಮತ್ತು ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಸಾರ್ವಜನಿಕರು ತತ್ತರಿಸಿ
ಹೋಗಿದ್ದಾರೆ.

Advertisement

ಅನಾಹುತ ತಪ್ಪಿದ್ದಲ್ಲ:ಕೋವಿಡ್‌ ಸಂಕಷ್ಟದಲ್ಲಿರುವ ಜನತಗೆ ಬೀದಿ ನಾಯಿ, ಮಂಗಗಳ ಕಾಟ ತಲೆನೋವಾಗಿ ಪರಿಣಮಿ ಸಿದೆ. ಮನೆಯ ಕಿಟಕಿ ತೆರೆದಿದ್ದರೆ ಯಾವುದೇ ಭಯವಿಲ್ಲದೆ ಮಂಗಗಳು ಮನೆಯೊಳಗೆ ಪ್ರವೇಶ ಮಾಡಿ ಇದ್ದ ಸಾಮಾನುಗಳನ್ನು ಪುಡಿ ಮಾಡಿ ನಷ್ಟ ಉಂಟು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಮನೆಗಳಲ್ಲಿ ಪುಟ್ಟ ಮಕ್ಕಳಿದ್ದರೆ ಅನಾಹುತ ತಪ್ಪಿದ್ದಲ್ಲ.

ಒಣಗಲು ಹಾಕಿದ್ದ ಬಟ್ಟೆಗಳನ್ನು ಹರಿದುಹಾಕುವುದು, ತಲೆ ಮೇಲೆ ಹೊದ್ದುಕೊಂಡು ಮರ ಏರುವುದು,ಅಂಗಳದಲ್ಲಿಒಣಹಾಕಿದ್ದಹಪ್ಪಳ ಸಂಡಿಗೆ
ತಿನ್ನುವುದರ ಜತೆಗೆ, ಚೆಲ್ಲಾಡಿ ಪುಡಿ ಮಾಡುವುದು, ತೆಂಗಿನಮರ ಏರಿ ಎಳನೀರು, ತೆಂಗಿನಕಾಯಿಗೆ ಹಾನಿ ಮಾಡುತ್ತಿವೆ. ಓಡಿಸಲು ಹೋದವರ ಮೇಲೆ ಎರಗುವುದು ಸಾಮಾನ್ಯವಾಗಿ ಬಿಟ್ಟಿದೆ.

ಇದನ್ನೂ ಓದಿ:ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ : ರಾಜ್ಯದ ಜನರಲ್ಲಿ ಸಿಎಂ ಮನವಿ

ಕೀಟಲೆ:ಜನನಿಬಿಡ ಪ್ರದೇಶದಲ್ಲಿಯೂ ಭಯವಿಲ್ಲದೆ ಎಲ್ಲೊಂದರಲ್ಲಿ  ಓಡಾಡುವ ಮೂಲಕ ಕೇಬಲ್‌ ತುಂಡರಿಸುವುದು, ಅಂಗಡಿಗಳಿಗೆ ಪ್ರವೇಶ ಮಾಡಿ ಹಣ್ಣು ಹಂಪಲು ಕಿತ್ತು ಬಿಸಾಡುವ ಮೂಲಕ ಜನರಿಗೆ ಪುಕ್ಕಟ್ಟೆ ಮನರಂಜನೆ ನೀಡುತ್ತಿವೆ. ಜನಸಾಮಾನ್ಯರೂ ಖರೀದಿಸಿ ಕೊಂಡು ಹೋಗುವ ಸರಕು ಸಾಮಾನುಗಳನ್ನು ಎಗ್ಗಿಲ್ಲದೆ ಕಿತ್ತುಕೊಂಡು ಹಾಳು ಮಾಡುತ್ತಿವೆ. ಹೀಗಾಗಿ ಜನಸಾಮಾನ್ಯರು ಓಡಾಡುವುದು ಕಷ್ಟವಾಗಿದೆ. ಇನ್ನುಬೀದಿನಾಯಿಗಳು ಹಿಂಡು ಹಿಂಡಾಗಿ ತಿರುಗಾಡುತ್ತಿವೆ. ಮಕ್ಕಳು ತಿರುಗಾಡುವಾಗ ಈಗಾ ಗಲೇ ಹಲವರಿಗೆ ಕಚ್ಚಿ ಗಾಯಗೊಳಿಸಿ ಅಪಾಯದಿಂದ ಪಾರಾಗಿದ್ದಾರೆ. ರಾತ್ರಿ ವೇಳೆಯಲ್ಲಂತೂ ಜನ ಸಾಮಾನ್ಯರು ನಿದ್ರೆ ಮಾಡಲು ತೊಂದರೆ ಕೊಡುತ್ತಾ, ಬೀದಿಗಳಲ್ಲಿ ಬೊಗಳುತ್ತಾ ತಿರುಗಾಡುತ್ತಿವೆ. ಮಹಿಳೆಯರು, ಮಕ್ಕಳು ತಿರುಗಾಡಲು ನಿತ್ಯ ಭಯಪಡುತ್ತಿದ್ದಾರೆ.

Advertisement

ಕೆಡಿಪಿ ಸಭೆಯಲ್ಲಿ ಚರ್ಚಿಸುವೆ
ಮಂಗಗಳು ಮತ್ತು ಬೀದಿ ನಾಯಿಗಳ ಹಾವಳಿಯಿಂದ ತಿರುಗಾಡಲು ಭಯವಾಗುತ್ತಿದ್ದು ನಿಯಂತ್ರಿಸಲು ಸರ್ಕಾರ ಆದೇಶ ಹೊರಡಿಸಬೇಕು. ನಾಯಿಗಳನ್ನು ಬೇರೆಡೆಗೆ ಸಾಗಿಸಲು ಅನುಮತಿ ನೀಡಬೇಕು. ಅರಣ್ಯ ಇಲಾಖೆ ಮಂಗಗಳನ್ನು ಹಿಡಿಯಲು ಮುಂದಾಗುವಂತೆ, ಮುಂಬರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗ್ರಾಪಂ ಸದಸ್ಯ ರುದ್ರೇಗೌಡ ತಿಳಿಸಿದ್ದಾರೆ

ಬೀದಿ ನಾಯಿ, ಮಂಗಗಳ ಉಪಟಳ ವಿಪರೀತವಾಗಿದ್ದರೂ, ಪಪಂ ಆಡಳಿತ ಕಣ್ಮುಚ್ಚಿ ಕುಳಿತಿದೆ.ಕಚೇರಿಯಲ್ಲಿ ದಾಖಲಾತಿ ನಾಶ ಮಾಡುತ್ತಿವೆ. ಬೀದಿ ನಾಯಿಗಳ ಉಪಟಳದಿಂದ ಭಯ ನಿರ್ಮಾಣವಾಗಿದೆ.
-ಅಬ್ದುಲ್‌ಖುದ್ದೂಸ್‌, ಪಪಂ ಸದಸ್ಯರ

ಮರಸು,ಮರಸುಕೊಪ್ಪಲು,ಮರಸುಕಾಲೋನಿ ಗ್ರಾಮದಲ್ಲಿ ಬೀದಿ ನಾಯಿಗಳು ವಿಪರೀತವಾಗಿವೆ. ರಾತ್ರಿ ವೇಳೆನಿದ್ದೆ ಮಾಡಲು ಸಾಧ್ಯ ವಾಗುತ್ತಿಲ್ಲ. ಹೊಲದಲ್ಲಿ ಬೆಳೆತುಳಿದುಹಾಳುಮಾಡುತ್ತಿವೆ.ಕೂಡಲೇಬೀದಿ ನಾಯಿಯಗಳ ಹಾವಳಿ ತಪ್ಪಿಸಿ.
– ಚಿಕ್ಕೇಗೌಡ, ಮರಸು ನಿವಾಸಿ

ಅರಣ್ಯ ಇಲಾಖೆ ಸಹಕಾರದೊಂದಿಗೆ ಮಂಗ, ಬೀದಿ ನಾಯಿ ಹಿಡಿಯುವವರಿಗೆ ಕರೆ ಮಾಡಿ ಹಿಡಿಯಲುಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿಕರು
ಎಚ್ಚರಿಕೆಯಿಂದ ಇರಬೇಕು.
– ಬಸವರಾಜು ಶಿಗ್ಗಾವಿ,
ಪಪಂ ಮುಖ್ಯಾಧಿಕಾರಿ

ಮಂಗಗಳಕಾಟದಿಂದ ಮನೆ ಬಾಗಿಲು,ಕಿಟಕಿ ತೆಗೆಯಲಾರದ ಪರಿಸ್ಥಿತಿಯಿದೆ. ಪಪಂ ಆಡಳಿತಕೋತಿಗಳ ಹಾವಳಿ ತಡೆಗೆ ಮುಂದಾಗಬೇಕು.
– ಗಾಯಿತ್ರಿ, ಗೃಹಿಣಿ, ಆಲೂರು

– ಟಿ.ಕೆ.ಕುಮಾರಸ್ವಾಮಿ ಆಲೂರು

Advertisement

Udayavani is now on Telegram. Click here to join our channel and stay updated with the latest news.

Next