Advertisement

ಸ್ಟ್ರೀಟ್‌ಫ‌ುಡ್‌ ಫೆಸ್ಟಿವಲ್‌

02:50 PM Nov 18, 2017 | Team Udayavani |

ಬೀದಿಬದಿಯ ತಿನಿಸುಗಳಿಗೆ ಮಾರು ಹೋಗದವರಿದ್ದಾರೆಯೇ? ರಸ್ತೆ ಬದಿಯಲ್ಲಿ ನಿಂತು ತಿನ್ನಬೇಕೆನಿಸಿದರೂ ಸ್ವತ್ಛತೆಯ ಕಾರಣದಿಂದ ಹಿಂದೇಟು ಹಾಕುವುದು ಸಹಜ. ಆದರೆ, ಅದೇ ರೋಡ್‌ಸೈಡ್‌ ತಿನಿಸುಗಳು, ಅಲ್ಲಿ ನಿಂತು ತಿನ್ನುವ ಅನುಭವ ರೆಸ್ಟೋರೆಂಟ್‌ಗಳಲ್ಲಿ ಲಭ್ಯವಾದರೆ?.. ಹಾಂ, ಸೌತ್‌ ಇಂಡೀಸ್‌ ರೆಸ್ಟೋರೆಂಟ್‌ ಹೀಗೊಂದು “ಸ್ಟ್ರೀಟ್‌ ಫ‌ುಡ್‌ ಫೆಸ್ಟಿವಲ್‌’ನ್ನು ನಿಮಗಾಗಿ ನಡೆಸುತ್ತಿದೆ. ತರಹೇವಾರಿ ಸಸ್ಯಾಹಾರಿ ಖಾದ್ಯಗಳನ್ನು ನೀವಿಲ್ಲಿ ಸವಿಯಬಹುದು. ಅಪ್ಪಂ, ವೆಜ್‌ ಖೀಮಾ ಪಾವ್‌, ಪಾವ್‌ ಭಾಜಿ, ಆಲ್‌ ಇಂಡಿಯಾ ಚಾಟ್‌, ದೇಸಿ ಪಾಸ್ತಾ ಜೊತೆಗೆ 10 ಮುಖ್ಯಸಸ್ಯಾಹಾರಿ ಖಾದ್ಯಗಳು ಹಾಗೂ 10 ಬಗೆಯ ಸಿಹಿತಿಂಡಿಗಳು, ಸಲಾಡ್‌, ಐಸ್‌ಕ್ರೀಂ ಮುಂತಾದವೂ ಇಲ್ಲಿ ಲಭ್ಯ ಇರುತ್ತವೆ.

Advertisement

ಎಲ್ಲಿ?: ಸೌತ್‌ ಇಂಡೀಸ್‌, 276, 100 ಅಡಿ ರಸ್ತೆ, 6ನೇ ಮುಖ್ಯ ಜಂಕ್ಷನ್‌,
ಗಿರಿಯಾಸ್‌ ಮೇಲ್ಭಾಗ, ಇಂದಿರಾನಗರ
ಯಾವಾಗ?: ನವೆಂಬರ್‌ 30ರ ವರೆಗೆ
ಸಂಪರ್ಕ: 080 41636363

Advertisement

Udayavani is now on Telegram. Click here to join our channel and stay updated with the latest news.

Next