Advertisement

ಹೋರಾಟ ನಿರತರಿಂದ ಬೀದಿ ನಾಟಕ ಪ್ರದರ್ಶನ

10:58 AM Jul 08, 2020 | Suhan S |

ದಾವಣಗೆರೆ: ಕಳೆದ 16 ತಿಂಗಳನಿಂದ ಬಾಕಿ ಇರುವ ಶಿಷ್ಯವೇತನಕ್ಕೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಗೃಹ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮಂಗಳವಾರ “ಸರ್ಕಾರಕ್ಕೆ ಚೆಲ್ಲಾಟ, ವೈದ್ಯರಿಗೆ ಪ್ರಾಣಸಂಕಟ’ ಎಂಬ ಬೀದಿ ನಾಟಕದ ಮೂಲಕ ಸಮಸ್ಯೆಗಳನ್ನು ಎಳೆಎಳೆಯಾಗಿ ತೆರೆದಿಟ್ಟರು.

Advertisement

“ಸರ್ಕಾರಕ್ಕೆ ಚೆಲ್ಲಾಟ, ವೈದ್ಯರಿಗೆ ಪ್ರಾಣಸಂಕಟ’ ಎನ್ನುವ ಶೀರ್ಷಿಕೆಗೆ ಅನುಗುಣವಾಗಿ ಡಾಕ್ಟರ್‌ ಕಲಿಸಲು ಹಂಬಲಿಸುವ ಬಡ ತಂದೆ-ತಾಯಿ, ಆದಕ್ಕಾಗಿ ಮಾಡುವ ಸಾಲ, ಸರ್ಕಾರಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿ ಸಕಾಲದಲ್ಲಿ ಶಿಷ್ಯವೇತನ ದೊರೆಯದೆ ಪಡುವ ಪಡಿಪಾಟಲು, ಒಂದೊತ್ತಿನ ತಿಂಡಿಗೂ ನಡೆಸುವ ಹೆಣಗಾಟಸೇರಿದಂತೆ ಪ್ರತಿಯೊಂದು ಮಜಲಿನ ದರ್ಶನದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಡಾ| ಗಾಯನ ಮತ್ತು ತಂಡದವರು ಮನಮುಟ್ಟುವಂತೆ ನಾಟಕವನ್ನು ಕಟ್ಟಿ ಕೊಟ್ಟರು. ನಾಟಕದ ಜೀವಾಳವಾಗಿ ಡಾ| ನಿಧಿ ನಿರೂಪಣೆ ಇತ್ತು. ಬೀದಿನಾಟಕ ಪ್ರದರ್ಶನದ ನಂತರ ಹೋರಾಟ ನಿರತರು ಚೀನಾ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಬ್ಯಾನರ್‌ ಮೂಲಕ ನಮನ ಸಲ್ಲಿಸಿದರು.

ರಾಷ್ಟ್ರಗೀತೆ ಹಾಡಿದರು. ಗಾಲ್ವಾನ್‌ ಕಣಿವೆಯಲ್ಲಿ ಹೋರಾಡುತ್ತಿರುವ ನಿಜವಾದ ಯೋಧರು ಸ್ಪೂರ್ತಿ. ಸೈನಿಕರು ಪ್ರಾಣವನ್ನೇ ಪಣಕಿಟ್ಟು ಹೋರಾಡುತ್ತಿದ್ದಾರೆ. ನಾವೂ ಸಹ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಹೋರಾಟದ ಜೊತೆ ಜೊತೆಗೆ ಕೋವಿಡ್‌-19 ವಿರುದ್ಧ ಹೋರಾಡುತ್ತಿದ್ದೇವೆ ಎಂದು ಡಾ| ರಾಹುಲ್‌ ತಿಳಿಸಿದರು. ಆದಷ್ಟು ಬೇಗ ಶಿಷ್ಯವೇತನದ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next