Advertisement

Street Dogs: ಬೊಂಬೆನಾಡು ಈಗ ಬೀದಿನಾಯಿಗಳ ಬೀಡು!

04:24 PM Feb 08, 2024 | Team Udayavani |

ಚನ್ನಪಟ್ಟಣ: ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರುತ್ತಿದೆ. ತಾಲೂಕಿನ ನಗರ, ಪಟ್ಟಣ, ಹೋಬಳಿ, ಗ್ರಾಮಗಳಲ್ಲೂ ಕೂಡ ಇದೇ ಪರಿಸ್ಥಿತಿ ಇದೆ. ಒಂದೆಡೆ ಆಹಾರ ಅರಸಿ ಬರುವ ಕಾಡಾನೆಗಳು ತೋಟ, ಹೊಲ, ಗದ್ದೆಗಳನ್ನು ನಾಶ ಪಡಿಸುತ್ತಿವೆ. ಇನ್ನೊಂದೆಡೆ ನಾಯಿಗಳನ್ನು ತಿನ್ನಲು ಚಿರತೆಗಳು ದಾಂಗುಡಿ ಇಡುತ್ತಿವೆ. ಇವುಗಳ ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ.

Advertisement

ಎಬಿಸಿ ಕಾಯ್ದೆ ಭಯ?: ಆರ್ಥಿಕ ಪರಿಸ್ಥಿತಿಯ ಜೊತೆಗೆ ಪ್ರಾಣಿ ದಯಾ ಸಂಘಗಳ ಸಮಸ್ಯೆಯೂ ಇದೆ ಎನ್ನುತ್ತಾರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು. ಬಹುತೇಕ ಎಲ್ಲಾ ಸಂಸ್ಥೆಗಳ ಅಧಿ ಕಾರಿಗಳು ಪ್ರಾಣಿ ದಯಾ ಸಂಘದ ಕಾರ್ಯಕರ್ತರ ಹೋರಾಟದ ನೆಪವೊಡ್ಡಿ ಸುಮ್ಮನಾಗುತ್ತಿದ್ದಾರೆ. ಅನಿಮಲ್‌ ಬರ್ತ್‌ ಕಂಟ್ರೋಲ್‌ (ಡಾಗ್ಸ್‌) ಆಕ್ಟ್ (ಎಬಿಸಿ) 2001ನ್ನು ಉಲ್ಲೇಖೀಸಿ, ತಮ್ಮ ಅಸಹಾಯಕತೆಯನ್ನು ಅಧಿ ಕಾರಿಗಳು ತೋಡಿಕೊಳ್ಳುತ್ತಿದ್ದಾರೆ. ನಾಯಿಗಳಿಂದ ಕಚ್ಚಿಸಿಕೊಂಡ ನಾಗರಿಕರು ರೇಬಿಸ್‌ ನಿರೋಧಕ ಚುಚ್ಚು ಮದ್ದು ಚುಚ್ಚಿಸಿಕೊಂಡು ಹೈರಾಣಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್‌ ಚುಚ್ಚುಮದ್ದು ಲಭ್ಯವಿದೆ ಎಂದು ಜಿಲ್ಲಾ ವೈದ್ಯಾ ಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ, ಈ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ.

ಟೆಂಡರ್‌ಗೆ ಸ್ಪಂದನೆ ಸಿಗ್ತಿಲ್ಲ: ನಗರಸಭೆ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ನಾಯಿಗಳಿವೆ ಎಂದು ಅಂದಾಜಿ ಸಲಾಗಿದೆ. ಈಗಾಗಲೇ ಬೀದಿ ನಾಯಿಗಳ ನಿಯಂತ್ರಣ ಸಮಿತಿ ರಚಿಸಲಾಗಿದೆ. ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಅದೇ ಸ್ಥಳದಲ್ಲಿ ಬಿಡಲು ಟೆಂಡರ್‌ ಕರೆದರೂ ಯಾರೂ ಟೆಂಡರ್‌ನಲ್ಲಿ ಭಾಗ ವಹಿಸುತ್ತಿಲ್ಲ. ಪ್ರತಿಯೊಂದು ಬೀದಿ ನಾಯಿಯ ಚಿಕಿತ್ಸೆಗೆ ಅಂದಾಜು 900 ರೂ. ಖರ್ಚಾಗಲಿದ್ದು, ವಾಹನ ಸೌಲಭ್ಯ, ಸ್ಥಳಾವಕಾಶ ಮತ್ತಿತರ ವೆಚ್ಚಗಳು ಸೇರಿ ಹಲವಾರು ಲಕ್ಷ ರೂ. ಬೇಕಾಗಿದೆ. ಈ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ತಮ್ಮ ನಿಧಿಯಿಂದಲೇ ಬಳಸ ಬೇಕಾಗಿದೆ. ಸರ್ಕಾರದಿಂದ ಅನುದಾನ ಸಿಗೋಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳು ಮೌನಕ್ಕೆ ಶರಣಾಗಿವೆ.

ನಾಯಿಗಳ್ಳೋ, ನರಿಗಳ್ಳೋ?: ಕೆಲವು ಹಳ್ಳಿಗಳಲ್ಲಿ ನಾಯಿಗಳು ಕೋಳಿ, ಕುರಿಯನ್ನು ಕಚ್ಚಿ ತಿನ್ನುತ್ತಿವೆ ಎಂಬ ದೂರುಗಳಿವೆ. ಇವೇನು ನಾಯಿಗಳ್ಳೋ ಅಥವಾ ನರಿಗಳ್ಳೋ ಎಂದು ಗ್ರಾಮೀಣ ಪ್ರದೇಶದ ನಾಗರಿಕರು ಅನು ಮಾನ ವ್ಯಕ್ತಪಡಿಸಿದ್ದಾರೆ. ನಗರ, ಪಟ್ಟಣ, ಗ್ರಾಮ ಎನ್ನುವ ಭೇದ ಭಾವವಿಲ್ಲದೆ, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ.

ಬಿಡಾಡಿ ದನಗಳಿಗಿಲ್ಲ ಗೋ ಶಾಲೆ!: ಬಿಡಾಡಿ ದನಗಳಿಗೆ ಸರ್ಕಾರದ ವತಿಯಿಂದ ಗೋ ಶಾಲೆಗಳಿಲ್ಲ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ಪಶು ವೈದ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವು ಖಾಸಗಿ ಗೋ ಶಾಲೆಗಳಿವೆ. ಕೆಲವು ಸಾರ್ವಜನಿಕರು ಬಿಡಾಡಿ ದನಗಳನ್ನು ಈ ಗೋ ಶಾಲೆಗಳಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Advertisement

ಮೇಲ್ವಿಚಾರಣೆ ಸಮಿತಿ ರಚಿಸಲಿ: ಬೀದಿ ನಾಯಿ ಗಳನ್ನು ಸಾಯಿಸುವುದು ಅಪರಾಧವಾಗಿದೆ. ಪ್ರಾಣಿಗಳ ವಿರುದ್ಧ ಕ್ರೌರ್ಯ ಕಾಯ್ದೆ 1960 ಜಾರಿಯಲ್ಲಿದೆ. ಇದರೊಟ್ಟಿಗೆ ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅನಿಮಲ್‌ ಬರ್ತ್‌ ಕಂಟ್ರೋಲ್‌ (ಎಬಿಸಿ (ನಾಯಿ ಗಳು) ನಿಯಮಗಳು ಜಾರಿಯಲ್ಲಿದೆ. ಇದೇ ನಿಯಮಗಳಡಿ ಮೇಲ್ವಿ ಚಾರಣೆ ಸಮಿತಿಗಳನ್ನು ರಚಿಸಬೇಕಾಗಿದೆ. ಆಯಾ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯ ಅಧಿಕಾರಿಗಳು, ಆರೋಗ್ಯ ಇಲಾಖೆ, ಪಶು ಸಂಗೋಪನೆ ಇಲಾಖೆಯ ಅಧಿಕಾರಿ ಗಳು, ಪಶು ವೈದ್ಯರು ಹಾಗೂ ಎನ್‌ಜಿಒ ಗಳು ಈ ಸಮಿತಿಯ ಸದಸ್ಯರಾಗಿ ರುತ್ತಾರೆ. ಸಂತಾಹ ಹರಣ, ನಿವರ್ಹಣೆ ಹಾಗೂ ನಿಯಂತ್ರಣ ಸಮಿತಿ ನೇತೃತ್ವದಲ್ಲಿ ನಡೆಯಬೇಕಾಗಿದೆ.

ಗ್ರಾಮೀಣ ಸಮಸ್ಯೆಗಿಂತ ನಗರ ಸಮಸ್ಯೆ ಇನ್ನೂ ಭಿನ್ನ: ಚನ್ನಪಟ್ಟಣ ತಾಲೂಕಿನ ಗ್ರಾಮೀಣ ಪ್ರದೇಶ ದಂತೆ ಟೌನ್‌ ವ್ಯಾಪ್ತಿಯಲ್ಲೂ ಕೂಡ ಬೀದಿ ನಾಯಿಗಳ ಸಂತತಿ ಮಿತಿ ಮೀರಿ ಏರುತ್ತಿದೆ. ನಾಯಿ ಗಳನ್ನು ಕೊಲ್ಲಲ್ಲು ಪ್ರಾಣಿ ದಯಾ ಸಂಘ ಬಿಡುವುದಿಲ್ಲ. ಆಯುಕ್ತರು ಆರೋಗ್ಯ ಸಿಬ್ಬಂದಿ ನಾಯಿ ಹಿಡಿ ಯುವ ವರಿಗಾಗಿ ಪ್ರಕಟಣೆ ಹೊರಡಿಸಲಾಗುತ್ತಿದೆ. ಯಾರೂ ಸಿಗುತ್ತಿಲ್ಲ ಎಂದು ಸಮಯಕ್ಕೆ ಒಂದು ಸುಳ್ಳು ಹೇಳಿ ಕೊಂಡು ನಗರಸಭೆಯವರು ಕಾಲಾಯಾಪನೆ ಮಾಡುತ್ತಿದ್ದಾರೆ. ಇಂದು ಯಾವ ಸಣ್ಣ ಪುಟ್ಟ ಬೀದಿಗೆ ಹೋದರೂ ಅಲ್ಲಿ ನಾಯಿಗಳದ್ದೇ ಸಾಮ್ರಾಜ್ಯ. ಬೀದಿಯ ವಿಷಯ ಯಾಕೆ ಆಟದ ಮೈದಾನ, ಬಸ್‌ ನಿಲ್ದಾಣ ಅಷ್ಟೇ ಯಾಕೆ ಆಸ್ಪತ್ರೆ ನಗರಸಭೆಯ ಕಚೇ ರಿಯ ಒಳಗೂ ಸಹ ನಾಯಿಗಳದ್ದೇ ಕಾರುಬಾರು. ಇಂದು ಪೋಷಕರು ಶಾಲೆಗಳಿಗೆ ನಡೆದು ಹೋಗು ವುದಕ್ಕೆ ಬಿಡುವುದಿಲ್ಲ ಎಲ್ಲಿ ನಾಯಿ ಕಚ್ಚಿ ಪಡಬಾರದ ಸಂಕಷ್ಟ ಪಡಬೇಕೋ ಎಂದು ಊರಿನಲ್ಲಿ ಹೇಳ ಬಾರದ ವರಿಗೆಲ್ಲ ತಮ್ಮ ನೋವನ್ನು ಹೇಳಿ ಕೊಂಡರೂ ಪರಿಹಾರ ಸಿಕ್ಕಿಲ್ಲ. ಶಾಸಕರಿಗೆ ನಗರಸಭೆಯ ಕೌನ್ಸಿಲರುಗಳು ಈ ಊರಿಗೂ ನಮಗೂ ಯಾವುದೇ ಸಂಬಂಧವೇ ಇಲ್ಲ ಎಂದು ನಡೆಯುತ್ತಿರುವುದು ಕಂಡು ಬರುತ್ತಿದೆ.

ಅದರ ಜೊತೆಗೆ ನಮ್ಮ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಪಡೆಯುವ ಅವ ಕಾಶವಿದೆ ಎಂದು ಜೆಡಿಎಸ್‌ ಅಧ್ಯಕ್ಷ ಉಪಾ ಧ್ಯಕ್ಷರನ್ನು ಆಯ್ಕೆ ಮಾಡಿ ಕುಳಿತರೂ ಅವರಲ್ಲೇ ಹಲವು ಹತ್ತು ರೀತಿಯ ಗೊಂದಲ ಉಂಟಾಗಿ ಈಗ ನಗರ ಸಭೆಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ ಎಂದು ನಾಗರಿಕರು ಅಲ್ಲಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್‌ ಅವರು ನಮ್ಮ ಮಾತಿಗೆ ಚಿಕ್ಕಾಸಿನ ಬೆಲೆ ಇಲ್ಲ ನಗರಸಭೆಯ ಆಯುಕ್ತರದ್ದೇ ಒಂದು ದಾರಿ ಅಲ್ಲಿನ ಸಿಬ್ಬಂದಿಯದ್ದೇ ಒಂದು ದಾರಿ ಎಂದು ಹೋದಲ್ಲಿ ಬಂದಲ್ಲಿ ದೂರಿಕೊಂಡು ಒಬ್ಬ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಮರತು ಅವರು ಕೂಡ ಈಗ ಜನಹಿತದ ಕಡೆಗೆ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ನಗರ ವ್ಯಾಪ್ತಿಯ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರಸಭೆಯ ನಿರ್ವಹಣೆಗೆ ನಗರವಾಸಿಗಳು ಕಂದಾಯ ಕಟ್ಟುತ್ತಿದ್ದಾರೆ. ಆದರೆ, ನಗರಸಭೆಯ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಜನರ ಹಿತ ಕಟ್ಟಿ ಕೊಂಡು ಏನಾಗಬೇಕು ಎಂಬಂತೆ ಕಾಲಾಯಾಪನೆ ಮಾಡುತ್ತಿದ್ದಾರೆ. ಇಂತಹ ವಿಚಿತ್ರ ಸ್ಥಿತಿಯಲ್ಲಿ ನಾಯಿಗಳು, ಕೋತಿಗಳು ಹಾಗೂ ಹಂದಿಗಳಿಂದ ಕಡಿಸಿಕೊಂಡು ಪ್ರಾಣಿಗಳ ರೀತಿಯಲ್ಲಿ ಈ ನಗರದ ಜನರು ಬದುಕುತ್ತಿ ದ್ದಾರೆ. ಇದನ್ನು ಸರಿಪಡಿಸುವವರಿಲ್ಲ ಜನರು ಹೈರಾಣಾ ಗಿದ್ದಾರೆ ಇಷ್ಟಿದ್ದರೂ ಸಹಿಸಿಕೊಂಡು ಪ್ರಾಣಿಗಳ ರೀತಿಯಲ್ಲಿ ಜನರು ಕಾಲದೂಡುತ್ತಿರುವುದೇ ಅವರ ದೌರ್ಭಾಗ್ಯವಾಗಿದೆ. ● ಚಂದ್ರಶೇಖರ್‌ ಬ್ಯಾಡರಹಳ್ಳಿ, ಚನ್ನಪಟ್ಟಣ ಗ್ರಾಮೀಣ ನಿವಾಸಿ

ಚನ್ನಪಟ್ಟಣ ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಶಾಲಾ ಮಕ್ಕಳು ಜೀವ ಬಿಗಿ ಹಿಡಿದುಕೊಂಡು ಓಡಾಡಬೇಕಾದ ಸ್ಥಿತಿ ಇದೆ. ನಮ್ಮ ಶಾಲೆಯ ವಿದ್ಯಾರ್ಥಿ ಯಶವಂತ್‌ ಎಂಬಾತನಿಗೆ ಇತ್ತೀಚಿಗೆ ಬೀದಿ ನಾಯಿ ಕಚ್ಚಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸಂಬಂಧಿಸಿದ ಅಧಿಕಾರಿ ವರ್ಗದವರು ಹಾಗೂ ಜನಪ್ರತಿ ನಿಧಿಗಳು ಈ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಕಡ್ಡಾಯವಾಗಿ ಅನುಷ್ಠಾನ ಮಾಡ ಬೇಕಿದೆ. – ದೇವರಾಜು, ಮುಖ್ಯಶಿಕ್ಷಕ, ಸಂಕಲಗೆರೆ ಸರ್ಕಾರಿ ಶಾಲೆ, ಚನ್ನಪಟ್ಟಣ ತಾಲೂಕು

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next