Advertisement
ಬೀದಿ ನಾಯಿಗಳ ಕಾಟದಿಂದ ಮಕ್ಕಳನ್ನು ಹೊರಗೆ ಬೀಡುವುದು ಕಷ್ಟವಾಗಿದೆ ಎಂದು ಪಾಲಕರು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ಪಕ್ಕದ ರಾಜ್ಯ ಕೇರಳದಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ಎರಗಿ ದೇಹ ಪೂರ್ತಿಯಾಗಿ ತಿಂದಿರುವುದು ಹಲವು ಮಾಧ್ಯಮಗಳಲ್ಲಿ ಪ್ರಕಟಣ ವಾಗಿರುವುದು ನಾವು ಕೇಳಿದ್ದೇವೆ. ನಮ್ಮ ತಾಲೂಕಿನ ಅಧಿಕಾರಿಗಳು ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪಟ್ಟಣ ಪಂಚಾಯಿತಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ. ತಾಲೂಕಿನ ಚನ್ನರಾಯನ ದುರ್ಗ ಕೊಳಾಲ ಕಸಬಾ . ಹೊಳವನಹಳ್ಳಿ ಹೋಬಳಿಯ. ಬಸ್ ನಿಲ್ದಾಣಗಳ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
Related Articles
Advertisement
ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣ ಮತ್ತು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಬೀದಿ ನಾಯಿಗಳ ಕಾಟದಿಂದ ಮಕ್ಕಳನ್ನು ಹೊರಗೆ ಬೀಡುವುದು ಕಷ್ಟವಾಗಿದೆ. ಶಾಲೆಗೆ ಹೋಗುವಾಗಲೂ ಮಕ್ಕಳು ಭಯದ ವಾತಾವರಣದಲ್ಲಿ ಹೋಗುತ್ತಾರೆ ಎಲ್ಲಿ ನಾಯಿಗಳು ನಮ್ಮ ಮೇಲೆ ಎರಗುತ್ತವೆಯೋ ಎಂಬ ಭಯ ಹುಟ್ಟುತ್ತದೆ.
ಬೀದಿ ನಾಯಿಗಳ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯತಿ ಇವುಗಳ ನಿಯಂತ್ರಣ ಮಾಡುವುದಕ್ಕೆ ನಿರ್ಲಕ್ಷ್ಯವಹಿಸಿದ್ದಾರೆ.
ಶ್ರೀನಿವಾಸ್.ಎಚ್.ಎನ್. ಚಿಗುರು ಜನಸೇವಾಟ್ರಸ್ಟ್ ಅಧ್ಯಕ್ಷ ಹೊಳವನಹಳ
ಬೀದಿ ನಾಯಿಗಳ ಬಗ್ಗೆ ಸಾಕಷ್ಟು ಕೇಳಿದ್ದೇನೆ ವಾಹನಗಳ ಹಿಂದೆ ಕೊಡುವುದು ಶಾಲೆಗಳಿಗೆ ಹೋಗುವ ಚಿಕ್ಕ ಚಿಕ್ಕ ಮಕ್ಕಳ ಮೇಲೆ ಎರಗುವುದು ನಾನು ಕೇಳಿದ್ದೇನೆ. ಪಕ್ಕದ ರಾಜ್ಯ ಕೇರಳದಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳ ಮಕ್ಕಳ ಮೇಲೆ ಎರಗಿ ದೇಹ ಪೂರ್ತಿಯಾಗಿ ತಿಂದಿರುವುದು ಹಲವು ಮಾಧ್ಯಮಗಳಲ್ಲಿ ಪ್ರಕಟಣ ವಾಗಿರುವುದು ನಾವು ಕೇಳಿದ್ದೇವೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮಾಹಿತಿ ರವಾನಿಸುತ್ತೇನೆ.
ರಾಮಕೃಷ್ಣಯ್ಯ ಎಸ್ ಕೆ- ಅರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು.
ಸಿದ್ದರಾಜು. ಕೆ.ಕೊರಟಗೆರೆ