ಪಿಥೋರಗಢ: ಭಾರತದ ಗಡಿ ಸಂರಕ್ಷಣೆ ದೃಷ್ಟಿಯಿಂದ, ಚೀನಾದ ಕಳ್ಳಾಟಗಳನ್ನು ತಡೆಯುವ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಮುನ್ಸಿಯಾರಿ-ಮಿಲಮ್ ರಸ್ತೆ ನಿರ್ಮಾಣ 2023ರ ಅಂತ್ಯದೊಳಗೆ ಮುಗಿಯಲಿದೆ ಎಂದು ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ತಿಳಿಸಿದೆ.
ಈ ರಸ್ತೆ ನಿರ್ಮಾಣ ಮುಗಿದ ಮೇಲೆ ಉತ್ತರಾಖಂಡದ ಜೋಹರ್ ಕಣಿವೆಯಲ್ಲಿರುವ ಭಾರತ-ಚೀನಾ ಗಡಿಭಾಗದ ಕಡೆಯ ಪೋಸ್ಟನ್ನು ತಲುಪಲು ಭಾರತೀಯ ಸೈನಿಕರಿಗೆ ಸಾಧ್ಯವಾಗಲಿದೆ.
ಅತ್ಯಂತ ಕನಿಷ್ಠ ತಾಪಮಾನದ ಈ ಭಾಗದಲ್ಲಿ ಇದುವರೆಗೆ ಭಾರತೀಯ ಸೇನೆ ಕಷ್ಟಪಡುತ್ತಿತ್ತು. ನಿರ್ಮಾಣ ಮುಗಿದ ಮೇಲೆ ಆ ರಗಳೆ ಇರುವುದಿಲ್ಲ. ಮುನ್ಸಿಯಾರಿ ಭಾಗದಿಂದ ಈಗಾಗಲೇ 25 ಕಿ.ಮೀ. ರಸ್ತೆ ನಿರ್ಮಾಣ ಮುಗಿದಿದೆ.
ಮಿಲಮ್ ಭಾಗದಲ್ಲಿ 9 ಕಿ.ಮೀ. ನಿರ್ಮಾಣವಾಗಿದೆ.
ಇದನ್ನೂ ಓದಿ:ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿ
ಇನ್ನೂ 15 ಕಿ.ಮೀ. ನಿರ್ಮಾಣ ಕಠಿಣ ಹೆಬ್ಬಂಡೆಗಳಿರುವ ಪರ್ವತಪ್ರದೇಶದಲ್ಲಿ ಆಗುತ್ತಿರುವ ಕಾರಣ ತಡವಾಗಿದೆ. ಅಲ್ಲದೇ ಕಳೆದವರ್ಷ ಕೊರೊನಾ ಲಾಕ್‌ಡೌನ್‌ನಿಂದಲೂ ನಿರ್ಮಾಣ ತಡವಾಗಿದೆ ಎಂದು ಬಿಆರ್‌ಒ ಮಾಹಿತಿ ನೀಡಿದೆ.