Advertisement

ಬರಡು ಭೂಮಿಯಲ್ಲಿ ಬಂಗಾರದ ಸ್ಟ್ರಾಬೆರಿ ಬೆಳೆ : ಉತ್ತಮ ಇಳುವರಿ ಪಡೆದು ಮಾದರಿಯಾದ ರೈತ

02:58 PM Mar 27, 2022 | Team Udayavani |

ಮಾಸ್ತಿ: ಚಿನ್ನದ ನಾಡಿನಲ್ಲಿ ರೈತನಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರೆ, ಬರಡು ಭೂಮಿಯಲ್ಲಿ ಚಿನ್ನ ಬೆಳೆಯುವ ರೈತರು ನಮ್ಮ ಜಿಲ್ಲೆಯ ತಾಲೂಕಿನಲ್ಲೂ ಇದ್ದಾರೆ ಎಂಬುದಕ್ಕೆ ರೈತರೊಬ್ಬರು ಸಾಕ್ಷಿಯಾಗಿದ್ದಾರೆ. ಮಾಲೂರು ತಾಲೂಕಿನ ರೈತನೊಬ್ಬ ಬರಡು ಭೂಮಿಯಲ್ಲಿ ಕೊಳವೆ ಬಾವಿ ನೀರಿನಿಂದ ಹನಿ ನೀರಾವರಿ ಪದ್ಧತಿ ಬಳಸಿ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆದು, ಉತ್ತಮ ಇಳುವರಿ ಪಡೆದು ಇತರ ರೈತರಿಗೆ ಮಾದರಿ
ಎನಿಸಿಕೊಂಡಿದ್ದಾರೆ.

Advertisement

ಮಾಸ್ತಿ ಹೋಬಳಿ ರಾಜೇನಹಳ್ಳಿ ಗ್ರಾಮದ ಬಳಿ ಇರುವ ಬೆಂಗಳೂರಿನ ಚನ್ನಸಿಂಗ್‌ ಅವರ ತೋಟವನ್ನು ಲೀಸ್‌ಗೆ ಪಡೆದ ರಾಜೇನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ತೋಟದ ಮಣ್ಣು ಹಾಗೂ ನೀರನ್ನು ಕೃಷಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ ಸ್ಟ್ರಾಬರಿ ಹಣ್ಣು ಬೆಳೆಯಲು ಮಣ್ಣು ಹಾಗೂ ನೀರು ಸೂಕ್ತವಾಗಿದೆ ಎಂಬ ಪ್ರಮಾಣಪತ್ರ ಪಡೆದು ಹುಬ್ಬಳ್ಳಿ-ಧಾರವಾಡ ನರ್ಸರಿಯಿಂದ ಒಂದು ನಾರಿಗೆ 12 ರೂ.ನೀಡಿ ಅರ್ಧ ಎಕರೆಗೆ ಆಗುವಷ್ಟು ಸ್ಟ್ರಾಬೆರಿ ನಾರನ್ನು ತಂದು, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ನಾಟಿ ಗೊಬ್ಬರ ಬಳಸಿಕೊಂಡು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ತೋಟದಲ್ಲಿ ಸ್ಟ್ರಾಬೆರಿ ನಾರನ್ನು ನಾಟಿ
ಮಾಡಿದ್ದಾರೆ.

ಇದನ್ನೂ ಓದಿ : ಕಿಡಿಗೇಡಿಗಳಿಂದ ವಿಗ್ರಹ ಭಿನ್ನಕ್ಕೆ ಯತ್ನ : ದೇವಾಲಯಕ್ಕೆ ಶಾಸಕಿ ರೂಪಕಲಾ ಭೇಟಿ

ಕೆ.ಜಿ.ಗೆ 400 ರೂ. ಮಾರಾಟ: ಸ್ಟ್ರಾಬೆರಿ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಸ್ಟ್ರಾಬೆರಿ ಹಣ್ಣನ್ನು ಮಧುಮೇಹ ಹಾಗೂ ರಕ್ತದೊತ್ತಡ ಇರುವ ರೋಗಿಗಳು ಹೆಚ್ಚಾಗಿ ಬಳಸುತ್ತಾರೆ. ಈತ ಬೆಳೆದಿರುವ
ಸ್ಟ್ರಾಬೆರಿ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಒಂದು ಕೆ.ಜಿ.ಗೆ 350ರಿಂದ 400 ರೂ. ಗಳಷ್ಟು ಮಾರಾಟವಾಗು ತ್ತದೆ. ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಇಲ್ಲದಿದ್ದರೂ, ರೈತರು ತಮ್ಮ ಜಮೀನುಗಳಲ್ಲಿ ಕೊಳವೆ  ಬಾವಿ ಕೊರೆಸಿ ತರಕಾರಿ, ಹಣ್ಣುಗಳು, ಹೂವಿನ ಬೆಳೆ ಬೆಳೆದು ಹಣ್ಣು-ತರಕಾರಿ, ಹೂಗಳನ್ನು ಹೊರ ಜಿಲ್ಲೆ ರಾಜ್ಯಗಳಿಗೆ ಮಾರಾಟ ಮಾಡಲು ಕಳುಹಿಸಿ ಕೊಡುತ್ತಾರೆ.

ಆರ್ಥಿಕ ಪ್ರಗತಿ ಹೊಂದಿ: ರೈತರು ಒಂದೇ ಬೆಳೆಯನ್ನು ತಮ್ಮ ಜಮೀನುಗಳಲ್ಲಿ ಹಾಕುವ ಬದಲು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಬೆಳೆಗಳನ್ನು ಹಾಕಿ ಕೃಷಿ, ತೋಟಗಾರಿಕೆ ಇಲಾಖೆಗಳ ಸವಲತ್ತು ಹಾಗೂ
ಮಾಹಿತಿಯನ್ನು ಪಡೆದು ಹೊಸ ಹೊಸ ಆಧುನಿಕ ಪದ್ಧತಿ ಬಳಸಿ ಲಾಭದಾಯಕ ಬೆಳೆ ಹಾಕಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ರೈತ ನಾರಾಯಣ  ಸ್ವಾಮಿ ಹೇಳುತ್ತಾರೆ.

Advertisement

– ಮಾಸ್ತಿ ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next