Advertisement
ಚಂಡಿಗಡದಲ್ಲಿ ಹುಟ್ಟಿದ ಉಪ್ಮಾ ವಿರ್ಡಿ ಬೆಳೆದದ್ದು ಆಸ್ಟ್ರೇಲಿಯಾದಲ್ಲಿ. ನ್ಯಾಯಾಂಗದ ವ್ಯವಸ್ಥೆಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಲಾ ಕಲಿಕೆಯನ್ನು ಮಾಡಿ ಯಶಸ್ಸು ಆಗುತ್ತಾರೆ.ಲಾಯರ್ ಆಗಿ ಹುದ್ದೆಯನ್ನು ಪಡೆದುಕೊಂಡ ಉಪ್ಮಾ ಆಸ್ಟ್ರೇಲಿಯಾದಲ್ಲಿ ನೆಲೆ ನಿಲ್ಲುತ್ತಾರೆ.ಭಾರತದಲ್ಲಿ ಕುಟುಂಬ ಹೇಳಿಕೊಟ್ಟ ಸಂಸ್ಕೃತಿ,ಸಂಪ್ರದಾಯ,ಆಚರಣೆಯನ್ನು ಮರೆಯದ ಉಪ್ಮಾ ಆಸ್ಟ್ರೇಲಿಯಾದಲ್ಲಿ ಭಾರತದ ಚಹಾದ ರುಚಿಯನ್ನು ಅಲ್ಲಿರುವ ಸ್ನೇಹ ವರ್ಗಕ್ಕೆ ಪರಿಚಯಿಸಿ ಅದರ ಗುಂಗನ್ನು ಹಚ್ಚುತ್ತಾರೆ.
Related Articles
Advertisement
ಮೆಲ್ಬರ್ನ್ ನಲ್ಲಿ ನಡೆದ ಚಹಾ ಫೆಸ್ಟಿವಲ್ ನಲ್ಲಿ ಇವರನ್ನು ಆಹ್ವಾನಿಸಲಾಗಿತ್ತು. ಚಹಾದ ಕುರಿತಾಗಿ’ The Art of chai’ ಕಾರ್ಯಾಗಾರದ ಮೂಲಕ ಹೇಗೆ ಗುಣಮಟ್ಟದ ಚಹಾವನ್ನು ಮಾಡಬಹುದು ಎಂದು ಹೇಳಿ ಕೊಟ್ಟಿದ್ದಾರೆ.
2016 ರಲ್ಲಿ ಉಪ್ಮಾಮ ಅವರನ್ನು Business women of the Year ಆಗಿ ಆಯ್ಕೆ ಮಾಡಿದ್ದರು ಹಾಗೂ Indian Australian Business and Community Awards (IABCA) ಪ್ರಶಸ್ತಿ ಇವರಿಗೆ ಲಭಿಸಿದೆ.
ಇವರ ಚಹಾದ ರುಚಿಗೆ ಪ್ರಶಸ್ತಿಗಳ ಗರಿಯೂ ದಕ್ಕಿದೆ. ಉತ್ತಮವಾದ ಚಹಾ ಎಂದು Royal Hobart Fine Food” ಪ್ರಶಸ್ತಿ Australian Food and Beverage Awards ನಲ್ಲಿ ಅಂತಿಮ ಸುತ್ತಿನಲ್ಲಿ ಆಯ್ಕೆ ಆಗಿ ಪ್ರಶಂಸೆ ಪಡೆದುಕೊಂಡಿದೆ.