Advertisement

ಆಕಾಶವನ್ನು ತೋರಲಿಲ್ಲ ಭೂಮಿಯನ್ನು ಮುಟ್ಟಿದ!

02:56 PM Aug 11, 2020 | Suhan S |

ಸಿದ್ದಾರ್ಥನಿಗೆ ಜ್ಞಾನೋದಯವಾಗಿ ಆತ ಬುದ್ಧನಾಗಿದ್ದ ದಿನಗಳವು. ಆದರೆ ಅದನ್ನು ಒಪ್ಪಲು ಜನ ಸಿದ್ಧರಿರಲಿಲ್ಲ. ಕೆಲವರು ಅನುಮಾನದಿಂದ, ಮತ್ತೆ ಕೆಲವರು ಅಪಹಾಸ್ಯದ ಧಾಟಿಯಲ್ಲಿ, ನಿನಗೆ ಜ್ಞಾನೋದಯ ಆಯಿತಂತೆ? ನಿಜವಾ, ಅದು ಹೇಗೆ ಸಾಧ್ಯ? ಎಂದು ಬುದ್ಧನನ್ನೇ ಕೇಳುತ್ತಿದ್ದರು. ಬುದ್ಧ, ಸುಮ್ಮನೆ ಮುಗುಳ್ನಕ್ಕು ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದ. ಎದುರಾಗುವ ಎಲ್ಲರೂ ಒಂದೇ ರೀತಿ ಇರುವುದಿಲ್ಲ ಅಲ್ಲವೇ? ಅದೊಮ್ಮೆ, ಜಗಳಗಂಟನಂತಿದ್ದ ವ್ಯಕ್ತಿಯೊಬ್ಬ ಎದುರಾಗಿ ಕೇಳಿದನಂತೆ: “ನಿನಗೆ ಜ್ಞಾನೋದಯವಾಗಿದೆ ಎಂದು ಜನ ಹೇಳುವುದನ್ನು ಕೇಳಿದ್ದೇನೆ. ಹಾಗೆ ಆಗಿದೆ

Advertisement

ಅನ್ನುವುದಕ್ಕೆ ಏನು ಪ್ರಮಾಣ? ಏನು ಸಾಕ್ಷಿ? ‘. ಬುದ್ಧ ಮರುಮಾತನಾಡದೆ, ತನ್ನ ತೋರ್ಬೆರಳನ್ನು ಮಣ್ಣಿನಲ್ಲಿ ಊರಿದನಂತೆ. ಅದು ಭೂಮಿ ಸ್ಪರ್ಶ ಮುದ್ರಾ! ಬೌದ್ಧರಲ್ಲಿ ಅದು ಬಹಳ ಪ್ರಸಿದ್ಧ ಆಚರಣೆ. ನೀನು ಜ್ಞಾನಿ ಎನ್ನುವುದಕ್ಕೆ ಏನು ಸಾಕ್ಷಿ ಎಂದು ಕೇಳಿದಾಗ, ಬುದ್ಧ ಅಂಗೈ ಎತ್ತಿ ಆಕಾಶವನ್ನು ತೋರಲಿಲ್ಲ. ನಾನು ಶ್ರೇಷ್ಠ, ನಾನು ಸತ್ಯವಂತ, ನಾನು ಯಜಮಾನ, ನಾನು ಬುದ್ಧಿವಂತ… ಹೀಗೆಲ್ಲಾ ಹೇಳಿಕೊಳ್ಳುವಾಗ ನಾವೆಲ್ಲಾ ನಮ್ಮ ಎದೆ ಮುಟ್ಟಿಕೊಳ್ಳುತ್ತೇವೆ. ಆದರೆ ಬುದ್ಧ ಹಾಗೆ ಮಾಡಲಿಲ್ಲ. ಆತ ತಲೆ ಬಗ್ಗಿಸಿ ಭೂಮಿಯನ್ನು ಮುಟ್ಟಿದ. ಅದು ಸಂಭ್ರಮವೂ ಹೌದು, ಆತಂಕವೂ ಹೌದು.

ಜ್ಞಾನೋದಯ ಆಗಿದೆ ಎಂದು ಹೇಳಿಕೊಳ್ಳು ವುದು ಸಂಭ್ರಮಕ್ಕೆ ಕಾರಣವಾದರೆ, ಜ್ಞಾನೋದಯ ಅಂದರೆ ಇಷ್ಟೇನಾ ಎಂಬ ಇನ್ನೊಂದು ಅರಿವು ಆತಂಕಕ್ಕೆ ಕಾರಣ. “ಅಕಸ್ಮಾತ್‌ ಬುದ್ಧ ಆಕಾಶವನ್ನು ತೋರಿಸಿ ನನಗೆ ಜ್ಞಾನೋದಯ ಆಗಿರುವುದಕ್ಕೆ ಅದೇ ಸಾಕ್ಷಿ ಅಂದಿದ್ದರೆ, ಆತ ಕೂಡ ನಮಗೆಆಕಾಶದಷ್ಟೇ ದೂರದವ ಆಗಿಬಿಡುತ್ತಿದ್ದ. ಆದರೆ ಆಗಿದ್ದೇ ಬೇರೆ. ಬುದ್ಧ ಭೂಮಿಯನ್ನು ತೋರಿಸಿದ. ಆ ಮೂಲಕ ನಾನು ಎಲ್ಲರಿಗೂ ಬಹಳ ಹತ್ತಿರದÇÉೇ ಇರುತ್ತೇನೆ ಅಂದ. ಅಷ್ಟು ಮಾತ್ರವಲ್ಲ; ಅಂದಂತೆಯೇ ಬದುಕಿಯೂ ತೋರಿಸಿದ…

Advertisement

Udayavani is now on Telegram. Click here to join our channel and stay updated with the latest news.

Next