Advertisement
ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಬ್ಯಾಲೆನ್ಸ್ ಆಗಿದ್ದೇವೆ. ಈ ಸಲ ನಮ್ಮ ಮುಂದೆ ಟ್ರೋಫಿ ಗೆಲ್ಲುವ ಸವಾಲಿದೆ. ಗೆದ್ದೇ ಗೆಲ್ಲುವೆವು ಎಂಬ ನಂಬಿಕೆಯೂ ಇದೆ. ಬೌಲಿಂಗ್‌ಗಿಂತ ಬ್ಯಾಟಿಂಗ್‌ನಲ್ಲಿ ನಮ್ಮನ್ನು ನಿಯಂತ್ರಿಸುವುದು ಎದುರಾಳಿ ತಂಡಗಳಿಗೆ ಕಷ್ಟವಾಗಬಹುದು. ಕೊಹ್ಲಿ ನಾಯಕತ್ವದಲ್ಲಿ ಆಡುತ್ತೇನೆ ಎಂದು ಯಾವತ್ತಾದರೂ ಅಂದುಕೊಂಡಿದ್ರಾ?
ಕೊಹ್ಲಿ ನಾಯಕತ್ವದಲ್ಲಿ ಆಡುವುದು ನನ್ನ ಕನಸಾಗಿತ್ತು. ಕನಸು ನನಸಾದಾಗ ಆಗುವ ಖುಷಿಯನ್ನು ಪದಗಳಲ್ಲಿ ವರ್ಣಿಸಲಾಗದು. ವಿಶ್ವ ಕ್ರಿಕೆಟ್ ದಿಗ್ಗಜ ಕೊಹ್ಲಿ ಆಟವನ್ನು ಟೀವಿಯಲ್ಲಷ್ಟೇ ನೋಡಿದ್ದೆ. ನಾನು ಅವರಿಂದ ಸಾಕಷ್ಟು ಪ್ರಭಾವಕ್ಕೂ ಒಳಗಾಗಿದ್ದೇನೆ. ಭವಿಷ್ಯದಲ್ಲಿ ಆತನ ನಾಯಕತ್ವದಡಿಯಲ್ಲಿ ಒಂದು ಸಲ ಆಡಬೇಕು ಎನ್ನುವ ಕನಸು ಕಂಡಿದ್ದೆ. ಅದೀಗ ನೆರವೇರಿದೆ ಎಂಬ ಖುಷಿ ಇದೆ.
Related Articles
ಕ್ರಿಕೆಟಿಗ ಅನಿರುದ್ಧ್ ಜೋಶಿ ಹಾಗೂ ನಾನು ಸ್ಟೇಟ್ ಬ್ಯಾಂಕ್ ಉದ್ಯೋಗಿಗಳಾಗಿದ್ದೇವೆ. ನಮ್ಮ ಸಂಸ್ಥೆ ವತಿಯಿಂದ ಬಡ್ತಿಗಾಗಿ ಪರೀಕ್ಷೆ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳಿದ್ದೆವು. ಈ ವೇಳೆ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿರುವ ವಿಷಯ ತಿಳಿಯಿತು. ಆಗ ನಾವಿಬ್ಬರೂ ತುಂಬಾ ಸಂತೋಷ ಪಟ್ಟೆವು. ಬ್ಯಾಂಕ್ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ ತುಂಬಾ ಓದಬೇಕಿತ್ತು. ನಮಗೆ ಪರೀಕ್ಷೆ ಸಮಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20, ಶಫಿ ದರಾಶಾ ಕ್ರಿಕೆಟ್ ಹೀಗೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪರೀಕ್ಷೆಗೆ ಸಿದ್ಧವಾಗಲು ಸಾಧ್ಯವಾಗಿರಲಿಲ್ಲ. ಈ ಪರೀಕ್ಷೆ ಪಾಸಾಗದಿದ್ದರೆ ಏನಂತೆ ? ಆರ್‌ಸಿಬಿ ಸೇರಿ ದೊಡ್ಡ ಪರೀಕ್ಷೆ ಪಾಸಾದೆವಲ್ಲ ಎಂದು ಸಮಾಧಾನಪಟ್ಟುಕೊಂಡೆವು.
Advertisement
ಈ ಸಲದ ಐಪಿಎಲ್‌ನಲ್ಲಿ ನಿಮ್ಮ ಗುರಿ ಏನು?ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದಿದ್ದೇನೆ. ಕೆಲವು ವರ್ಷಗಳಿಂದ ಮಹಾ ಕೂಟದಲ್ಲಿ ಪಾಲ್ಗೊಳ್ಳಬೇಕು, ದೇಶಕ್ಕಾಗಿ ನಾನೂ ಆಡಬೇಕು ಎನ್ನುವ ಉತ್ಕಟ ಬಯಕೆ ಇತ್ತು. ದೇಶಕ್ಕಾಗಿ ಆಡುವ ಮೊದಲೇ ಆರ್‌ಸಿಬಿಗಾಗಿ ಆಡುವ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಗರಿಷ್ಠ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇನೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿಮಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತಿದೆ?
ಕ್ರಿಕೆಟ್ ಆಡುವುದಕ್ಕೆ ಯಾವಾಗಲೂ ನನ್ನ ಮೊದಲ ಆದ್ಯತೆ. ಇಂದು ಇಷ್ಟರವರೆಗೆ ಬರಲು ಸ್ಟೇಟ್ ಬ್ಯಾಂಕ್ ನೀಡಿದ ಪ್ರೋತ್ಸಾಹವೇ ಕಾರಣ. ಹೀಗಾಗಿ ಬ್ಯಾಂಕ್‌ನ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಹೇಮಂತ್ ಸಂಪಾಜೆ