Advertisement
ಭಾನುವಾರ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದಾರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆಯ ಹೊತ್ತಿಗೆ ರಾಮು ಕೊನೆಯುಸಿರೆಳೆದರು. ರಾಮು ಅವರು ಪತ್ನಿ ಮಾಲಾಶ್ರೀ, ಮಗಳು ಅನನ್ಯಾ, ಮಗ ಆರ್ಯನ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
Related Articles
Advertisement
ತಮ್ಮ ಸಿನಿಮಾ ತೆರೆಮೇಲೆ ಶ್ರೀಮಂತವಾಗಿ, ಅದ್ಧೂರಿಯಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ರಾಮು ಎಷ್ಟೇ ಖರ್ಚಾಗುತ್ತಿದ್ದರೂ, ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರ ಈ ಸಿನಿಮಾ ಪ್ರೀತಿಯೇ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುವಂತೆ ಅವರನ್ನು ಪ್ರೇರೇಪಿಸುತ್ತಿತ್ತು. ಇಲ್ಲಿಯವರೆಗೆ ಕನ್ನಡದಲ್ಲಿ ಸತತವಾಗಿ ಒಂದರ ಹಿಂದೊಂದು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತ ಸಕ್ರಿಯವಾಗಿರುವ ನಿರ್ಮಾಪಕರಲ್ಲಿ ರಾಮು ಮುಂಚೂಣಿಯಲ್ಲಿದ್ದರು.
ಮೃದು ಸ್ವಭಾವದ ಮಿತಭಾಷಿ
ನಿರ್ಮಾಪಕ ರಾಮು ಚಿತ್ರರಂಗದಲ್ಲಿ ಮತ್ತು ತಮ್ಮ ಆಪ್ತ ವಲಯದಲ್ಲಿ ಮೃದು ಸ್ವಭಾವದ ವ್ಯಕ್ತಿ, ಮಿತಿ ಭಾಷಿ, ಸರಳ, ಸಜ್ಜನಿಕೆಯ ವ್ಯಕ್ತಿ ಎಂದೇ ಗುರುತಿಸಿ ಕೊಂಡಿದ್ದರು. ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದ ರಾಮು, ಎಂದಿಗೂ ಚಿತ್ರರಂಗದಲ್ಲಿ ಅನಗತ್ಯ ವಾದ-ವಿವಾದಗಳಿಗೆ ಸಿಲುಕಿದವರಲ್ಲ. ಕನ್ನಡ ಬಹುತೇಕ ಎಲ್ಲ ಸ್ಟಾರ್ ಜೊತೆ, ನಿರ್ಮಾಪಕರು – ನಿರ್ದೇಶಕರ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು. ತಮ್ಮ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಮಾಲಾಶ್ರೀ ಅವರನ್ನೇ ವರಿಸುವ ಮೂಲಕ ರಾಮು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಪ್ರಮುಖ ಸೂಪರ್ ಹಿಟ್ ಸಿನಿಮಾಗಳು
“ಗೋಲಿಬಾರ್’ ಸಿನಿಮಾದ ಮೂಲಕ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಾದ ಕೆ. ರಾಮು “ಲಾಕಪ್ ಡೆತ್’, “ಗೋಲಿಬಾರ್’, “ಸಿಂಹದ ಮರಿ’, “ಎ.ಕೆ-47′, “ರಾಕ್ಷಸ’, “ಕಲಾಸಿಪಾಳ್ಯ’, ಸೇರಿ ಇಲ್ಲಿಯವರೆಗೆ ರಾಮು 39 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ 40ನೇ ಸಿನಿಮಾ ಪ್ರಜ್ವಲ್ ದೇವರಾಜ್ ಅಭಿನಯದ “ಅರ್ಜುನ್ ಗೌಡ’ ಸದ್ಯ ಬಿಡುಗಡೆಗೆ ರೆಡಿಯಾಗಿದ್ದು, ಇನ್ನೇನು ತೆರೆಕಾಣಬೇಕಿದೆ.