Advertisement
ಸುಮಾರು ಇನ್ನೂರು ಕಿ.ಮೀ.ದೂರದ ಗದಗ ನಗರದಿಂದ ಬಸನವಾಡು ವಿಜಯಪುರಕ್ಕೆ ಬಂದು ಶವ ಸಂಸ್ಕಾರ, ಸ್ಮಶಾನ ಕಾಯಕ ಮಾಡುತ್ತಿರುವ ಶಂಕರ ಕಾಳೆ ಬದುಕು ಸಿನಿಮಾ ಚಿತ್ರಣದಂತಿದೆ. ಗದಗ ಮೂಲದ ಶಂಕರ ಕಾಳೆ ಕುಟುಂಬದಲ್ಲಿ ಹಲವರು ಹರಿಶ್ಚಂದ್ರ ಕಾಯಕ ಮಾಡುತ್ತಿದ್ದಾರೆ. ಚಿಕ್ಕಪ್ಪ ಮಲ್ಲಿಕಾರ್ಜುನ ಕಾಳೆ, ತಮ್ಮ ನೀಲಕಂಠ ಕಾಳೆ ಇವರೂ ಗದಗ ಮುಕ್ತಿ ಧಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Related Articles
Advertisement
ಪ್ರಸ್ತುತ ಕೋವಿಡ್ ಆತಂಕದ ಸಂದರ್ಭದಲ್ಲಿ ಕುಟುಂಬ ಸದಸ್ಯರೇತಮ್ಮವರ ಶವಗಳನ್ನು ಮುಟ್ಟದೇ ದೂರನಿಂತಿರೂ ಶಂಕರ ಮಾತ್ರ ಪಿಪಿಇ ಕಿಟ್‌ಸೇರಿದಂತೆ ಯಾವ ಸುರಕ್ಷತಾ ಸಾಧನಗಳಿಲ್ಲದೇ ಜೀವದ ಹಂಗು ತೊರೆದು ಶವಸಂಸ್ಕಾರ ಮಾಡುತ್ತಿದ್ದಾರೆ. ಈಚೆಗೆ ಹೆಚ್ಚಿನ ಸಾವುಗಳಿಂದಾಗಿ ಒತ್ತಡ ಹೆಚ್ಚುತ್ತಿರುವ ಕಾರಣ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಸಮಿತಿ ಶವ ಸಂಸ್ಕಾರಕ್ಕೆ ಅವಕಾಶಕಲ್ಪಿಸಿರುವುದು ಶಂಕರ ಕೊಂಚ ನೆಮ್ಮದಿಯನಿದ್ದೆ ಮಾಡಲು ಅವಕಾಶ ಕಲ್ಪಿಸಿದೆ.
ಆದರೆ ಕೋವಿಡ್ ಸೋಂಕಿತ ಶವಗಳ ಸಂಸ್ಕಾರದ ಸಂದರ್ಭದಲ್ಲಿ ಪಿಪಿಇ ಕಿಟ್ ನೀಡದಿದ್ದರೂ ಶಂಕರ ಜೀವದ ಹಂಗು ತೊರೆದು ಶವ ಸಂಸ್ಕಾರ ಮಾಡುತ್ತಿದ್ದಾರೆ. ಸ್ಮಶಾನದ ಹೆಸರಿನಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿ ಮೃತರ ಸಂಬಂಧಿಗಳಿಂದ 20 ಸಾವಿರಕ್ಕೂ ಹೆಚ್ಚು ಹಣ ಪಡೆಯುವುದಕ್ಕೆ ಶಂಕರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ರೀತಿಗಾಗಿ ಸರ್ಕಾರಿ ಉದ್ಯೋಗ ತೊರೆದ ಶಂಕರ! :
ಹೀಗೆ ಹರಿಶ್ಚಂದ್ರ ಕಾಯಕದ ಮೂಲಕ ಸತ್ಯನಿಷ್ಠೆಯ ಸೇವೆ ಮಾಡುತ್ತಿರುವ ಶಂಕರ ಕಾಳೆ ಸರ್ಕಾರಿ ನೌಕರನಾಗಿದ್ದ ಎಂಬ ಮಾತು ಅಚ್ಚರಿ ಮೂಡಿಸಿದರೂ ಸತ್ಯ. ಗದಗ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಆತ ಮೇಲ್ವರ್ಗದ ಯುವತಿಯನ್ನು ಪ್ರೀತಿಸಿ ಮದುವೆಯಾದ. ಜಾತಿಯ ಕಾರಣಕ್ಕೆ 12 ವರ್ಷಗಳ ಹಿಂದೆ ನೌಕರಿ ಸಹಿತ ಊರನ್ನೇ ತೊರೆದ. ಊರೂರು ಅಲೆದ ನಂತರ ಕಳೆದ 4 ವರ್ಷಗಳಿಂದ ವಿಜಯಪುರ ನಗರಕ್ಕೆ ಬಂದು ಸ್ಮಶಾನ ಕಾಯುವ, ಶವ ಸಂಸ್ಕಾರ ಮಾಡುವ ಕಾಯಕ ಮಾಡುತ್ತಿದ್ದಾರೆ. ಆದರೆ ಇದಕ್ಕಾಗಿ ಎಂದೂ ಪಶ್ಚತ್ತಾಪ ಇಲ್ಲದ ಅವರು, ಇದ್ದುದರಲ್ಲೇ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಕೋವಿಡ್ ಸೋಂಕಿತರು ಮೃತಪಟ್ಟರೆ ಆಂಬ್ಯುಲೆನ್ಸ್ ಸಿಬ್ಬಂದಿ ಸ್ಮಶಾನದ ಹೆಸರಿನಲ್ಲಿ 20 ಸಾವಿರ ರೂ. ಪಡೆಯುತ್ತಿದ್ದು, ಶವದ ಮೇಲೆ ವ್ಯಾಪಾರ ಮಾಡುವ ಕ್ರಮ ಸರಿಯಲ್ಲ. ಶವ ಸಂಸ್ಕಾರದಸಂದರ್ಭದಲ್ಲಿ ಖಾಸಗಿಯಾಗಿ ನನಗೆಪಿಪಿಇ ಕಿಟ್ ಸಿಗುವುದಿಲ್ಲ, ಹೀಗಾಗಿಜಿಲ್ಲಾಡಳಿತ ಶವ ಸಂಸ್ಕಾರಕ್ಕೆ ಬರು ವಾಗ ನನಗೂ ಒಂದು ಪಿಪಿಇ ಕಿಟ್ ತರುವು ದನ್ನು ಕಡ್ಡಾಯಗೊಳಿಸಲಿ ಸಾಕು.– ಶಂಕರ ಕಾಳೆ ಸ್ಮಶಾನ ಕಾಯಕ ಜೀವಿ
ಶಂಕರ ನಮ್ಮಲ್ಲಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾನೆ. ಕೋವಿಡ್ ಸಂದರ್ಭದಲ್ಲಿ ಆತನ ಸುರಕ್ಷತೆಗಾಗಿ ಹೆಚ್ಚಿನ ಗಮನ ನೀಡುವಂತೆ ಸೂಚಿಸಿದ್ದೇವೆ. ಕಾಲ ಕಾಲಕ್ಕೆ ಆತನ ಆರೋಗ್ಯಪರೀಕ್ಷೆ ಮಾಡಿಸುತ್ತಿದ್ದು, ನಮ್ಮಿಂದ ಸಾಧ್ಯವಿರುವ ಎಲ್ಲ ಸುರಕ್ಷತಾ ಕ್ರಮಕೈಗೊಂಡಿದ್ದೇವೆ. ಪಿಪಿಇ ಕಿಟ್‌ಮುಕ್ತವಾಗಿ ನಮಗೆ ದೊರೆಯದ ಕಾರಣ ಶವ ಸಂಸ್ಕಾರಕ್ಕೆ ಬರುವಾಗನಮ್ಮ ಸಿಬ್ಬಂದಿಗೆ ಪಿಪಿಇ ಕಿಟ್‌ತರುವುದನ್ನು ಕಡ್ಡಾಯ ಮಾಡಬೇಕು.- ಉಮೇಶ ದೇವಗಿರಿ, ಅಧ್ಯಕ್ಷ, ದೇವಗಿರಿ ಸ್ಮಾರಕ ಸ್ಮಶಾನ ಸಮಿತಿ
-ಜಿ.ಎಸ್. ಕಮತರ