Advertisement

ಉಗ್ರ ಸಂಹಾರದ ಯಶೋಗಾಥೆ

08:27 AM Jun 25, 2020 | mahesh |

ಪ್ರಸಕ್ತ ವರ್ಷ ಜಮ್ಮು -ಕಾಶ್ಮೀರದಲ್ಲಿ ಸಂಪೂರ್ಣ ಉಗ್ರ ನಾಯಕತ್ವವನ್ನು ನಾಶಪಡಿಸುವ ಮೂಲಕ ಭದ್ರತಾ ಪಡೆಗಳು ಮಹತ್ವದ ಯಶಸ್ಸು ಸಾಧಿಸಿವೆ. ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾದವರ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಭದ್ರತಾ ಪಡೆಯ ಯೋಧರ ಈ ಸಾಧನೆ ಕುರಿತು ಒಂದಿಷ್ಟು ವಿವರ ಇಲ್ಲಿದೆ.

Advertisement

ಉಗ್ರರಿಗೀಗ ನಾಯಕರೇ ಇಲ್ಲ
ಹಿಜ್ಬುಲ್‌ ಮುಜಾಹಿದೀನ್‌, ಲಷ್ಕರ್‌, ಅನ್ಸಾರ್‌ ಸೇರಿದಂತೆ ಕಣಿವೆ ರಾಜ್ಯದಲ್ಲಿನ ಬಹುತೇಕ ಎಲ್ಲ ಉಗ್ರ ಸಂಘಟನೆಗಳಿಗೂ ಈಗ ನಾಯಕರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಅಷ್ಟೇ ಅಲ್ಲ, ಪ್ರಮುಖ ಕಮಾಂಡರ್‌ನ ನಂತರದ ಶ್ರೇಣಿಯಲ್ಲಿ ಬರುವ ವ್ಯಕ್ತಿಗಳನ್ನೂ ಭದ್ರತಾ ಪಡೆ ಸದೆಬಡಿದಿರುವ ಕಾರಣ ಉಗ್ರರಿಗೆ ತೀವ್ರ ಹಿನ್ನಡೆಯಾಗಿದೆ ಎನ್ನುತ್ತಾರೆ ಸೇನಾಧಿಕಾರಿಗಳು.

ಹತ್ಯೆಗೀಡಾದ ಪ್ರಮುಖ ಭಯೋತ್ಪಾದಕರು
ರಿಯಾಜ್‌ ನೈಕೂ, ಅಬ್ದುಲ್‌ ರೆಹಮಾನ್‌ ಅಲಿಯಾಸ್‌ ಫೌಜಿ ಭಾಯಿ, ಜುಬೈರ್‌, ಖಾರಿ ಯಾಸಿರ್‌, ಜುನೈದ್‌ ಸೆಹ್ರಿ, ಬುರ್ಹಾನ್‌ ಕೋಕಾ, ಹೈದರ್‌, ತಯ್ಯಬ್‌ ವಾಲಿದ್‌.

ಯಶಸ್ಸಿನ ಹಿಂದಿನ ಗುಟ್ಟೇನು?
ಪೊಲೀಸರು ಈ ಬಾರಿ ಉಗ್ರರ ಕುರಿತು ಮಾಹಿತಿ ಒದಗಿಸುತ್ತಿದ್ದುದು ಮಾತ್ರವಲ್ಲ, ಎನ್‌ಕೌಂಟರ್‌ನಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದು.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಉಗ್ರರಿಗೆ ತಮ್ಮಿಷ್ಟದಂತೆ ಮುಕ್ತವಾಗಿ ಸಂಚರಿಸಲು ಆಗದೇ, ನಿರ್ದಿಷ್ಟ ಪ್ರದೇಶಗಳಲ್ಲೇ ಅಡಗಿಕೊಳ್ಳುವಂತೆ ಆಗಿದ್ದು.

119 ಈ ವರ್ಷ ಹತ್ಯೆಗೀಡಾದ  ಉಗ್ರರು
29 ಕಾರ್ಯಾಚ ರಣೆಯಲ್ಲಿ ಹುತಾತ್ಮರಾದ ಯೋಧರು
12 ಎನ್‌ಕೌಂಟರ್‌  ವೇಳೆ ಮೃತಪಟ್ಟ ನಾಗರಿಕರು
ಶೇ.20 ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಳಿಕೆಯಾದ ಹಿಂಸಾತ್ಮಕ ಘರ್ಷಣೆಗಳ ಪ್ರಮಾಣ

Advertisement
Advertisement

Udayavani is now on Telegram. Click here to join our channel and stay updated with the latest news.

Next