Advertisement
ಮಧ್ಯಪ್ರದೇಶದ ನೀಮಚ್. ಹಿಂದುಳಿದ ಗ್ರಾಮ. ಬಡತನದಲ್ಲಿ ಬದುಕುವ, ದಿನ ಕೂಲಿಯ ಸಂಬಳವನ್ನು ನಂಬಿಕೊಂಡು ಜೋಪಡಿಯಡಿಯಲ್ಲೇ ಕಷ್ಟ ಸುಖವನ್ನು ದಿನ ಹಗಲಾಗಿ ದೂಡುವ ಕುಟುಂಬಗಳೇ ಹೆಚ್ಚಾಗಿರುವ ಗ್ರಾಮ.
Related Articles
Advertisement
ಬದುಕು ಬದಲಾಯಿಸಿದ ವೀಡಿಯೋ :
ಉದಯ್ ದಿನ ನಿತ್ಯ ಡ್ಯಾನ್ಸ್ ಮಾಡುವುದು ಮನೆಯ ಹೊರಗಿನ ಬೀದಿಯಲ್ಲಿ. ಅದೊಂದು ದಿನ ಉದಯ್ ಮಾಡುವ ಡ್ಯಾನ್ಸ್ ನ ವೀಡಿಯೋವನ್ನು ಮಾಡಿದ ಸ್ನೇಹಿತ ಅದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ವೀಡಿಯೋ ನೋಡುತ್ತಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ಗಮನ ಸೆಳೆಯುತ್ತದೆ. ಕಾರ್ಮಿಕನೊಬ್ಬನ ಡ್ಯಾನ್ಸ್ ಸ್ಟೆಪ್ ಗಳನ್ನು ಬಾಲಿವುಡ್ ನ ಪ್ರಸಿದ್ಧ ಕೊರಿಯಗ್ರಾಫರ್ ರೆಮೋ ಡಿಸೋಜ ಹಾಗೂ ಟೆರೆನ್ಸ್ ಲಾರೆನ್ಸ್ ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ.
ಟಿಕ್ ಟಾಕ್ ಕೊಟ್ಟ ಫೇಮ್ :
ದಿನಕಳೆದಂತೆ ಉದಯ್ ಯೊಳಗಿನ ಪ್ರತಿಭೆಗೆ ಒಂದು ವೇದಿಕೆ ಸಿಗುತ್ತದೆ. ಅದು ಟಿಕ್ ಟಾಕ್. ಉದಯ್ ಸ್ನೇಹಿತ ಉದಯ್ ಅವರ ಹೆಸರಿನಲ್ಲಿ ಟಿಕ್ ಟಾಕ್ ಖಾತೆಯೊಂದನ್ನು ತೆರೆಯುತ್ತಾರೆ. ಉದಯ್ ಅವರ ಅದೃಷ್ಟವೆಂಬಂತೆ ಟಿಕ್ ಟಾಕ್ ನಲ್ಲಿ ಹಾಕುವ ವಿಡಿಯೋಗಳು ಲಕ್ಷಾಂತರ ನೋಡುಗರನ್ನು ಸೆಳೆಯುತ್ತದೆ. ಉದಯ್ ಅವರ ಖಾತೆಗೆ ವೇಗವಾಗಿ ಹಿಂಬಾಲಕರು ಬರುತ್ತಾರೆ. ಮಿಲಿಯನ್ ಗಟ್ಟಲೆ ನೋಡುಗರು ಹಾಗೂ ಲೈಕ್ಸ್ ಗಳನ್ನು ಪಡೆಯುತ್ತದೆ. ಉದಯ್ ಬೆಳಗ್ಗೆ ಒಣ ಹುಲ್ಲನ್ನು ಗಾಡಿಗೆ ಲೋಡ್ ಮಾಡುವ ಕೆಲಸಕ್ಕೆ ಹೋಗಿ ಸಂಜೆ ದೇಹ ದಣಿವಿನಲ್ಲಿ ಪುಡಿ ಆಗಿದ್ದರೂ ತಮ್ಮ ಹಿಂಬಾಲಕರಿಗೆ ನಿರಾಶೆಯಾಗಬರದೆಂದು ಡ್ಯಾನ್ಸ್ ನ ವಿಡಿಯೋಗಳನ್ನು ಹಾಕುತ್ತಾರೆ.
ಬಡತನದಲ್ಲಿ ಬೆಂದು ಬೆಳೆದ ಉದಯ್ ಪ್ರತಿಭೆಯನ್ನು ನೋಡಿದ ಟಿಕ್ ಟಾಕ್ ಇಂಡಿಯಾ. ಉದಯ್ ಅವರಿಗೆ ಐಫೋನ್ ಕೊಡುಗೆಯನ್ನು ನೀಡುತ್ತದೆ. ಇದರಿಂದ ಉದಯ್ ಹೊಸ ಬಗೆಯ ವಿಡಿಯೋ ಶೂಟ್ ಗಳನ್ನು ಮಾಡುತ್ತಾರೆ. ಇದರಿಂದ ಉದಯ್ ಅವರ ಪ್ರತಿಭೆ ಮತ್ತಷ್ಟು ಬೆಳಕಿಗೆ ಬರುತ್ತದೆ.
ಟಿಕ್ ಟಾಕ್ ಬ್ಯಾನ್ ; ಉದಯ್ ಫೇಮ್ ಡೌನ್ .!
ಚೀನಾ ಕಂಪೆನಿಯ ಎಲ್ಲಾ ಆ್ಯಪ್ ಗಳನ್ನು ಬಂದ್ ಮಾಡಿದ ಕೇಂದ್ರ ಸರ್ಕಾರದ ನಿಯಮದಿಂದ ಉದಯ್ ಸಿಂಗ್ ಗಳಿಸಿದ್ದ ಲಕ್ಷಾಂತರ ಫಾಲೋವರ್ಸ್ ಗಳನ್ನು ಕಳೆದುಕೊಳ್ಳುತ್ತಾರೆ. ಉದಯ್ ಗಳಿಸಿದ್ದ ಹೆಸರು ದಿನಗಳೆದಂತೆ ಕಾಣದಂತೆ ಮಾಯವಾಗುತ್ತದೆ. ಉದಯ್ ತಮ್ಮ ಹಿಂಬಾಲಕರಿಗೆ ಭಾರತದ ಇತರ ಆ್ಯಪ್ ಗಳಲ್ಲಿ ತಮ್ಮನ್ನು ಫಾಲೋ ಮಾಡುವಂತೆ ಕೇಳಿ ಕೊಳ್ಳುತ್ತಾರೆ.
ಹುಡುಕಿ ಬಂದ ದೊಡ್ಡ ಅವಕಾಶ :
ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ದಿವಾನೆ ಕಾರ್ಯಕ್ರಮದ ತಂಡದವರು, ಟಿಕ್ ಟಾಕ್ ನಲ್ಲಿ ವೈರಲ್ ಆದ ಉದಯ್ ಸಿಂಗ್ ಅವರನ್ನು ಹುಡುಕಿಕೊಂಡು, ಪುಟ್ಟ ಜೋಪಡಿಯೊಳಗೆ ಕ್ಯಾಮರಾ ಹಿಡಿದುಕೊಂಡು ಹೋಗುತ್ತಾರೆ. ಉದಯ್ ಸಿಂಗ್ ನ ಬಳಿ ನಾವು ಡ್ಯಾನ್ಸ್ ದಿವಾನೆ ಕಾರ್ಯಕ್ರಮದಿಂದ ಬಂದಿದ್ದೇವೆ. ನಿಮ್ಮನ್ನು ಕಾರ್ಯಕ್ರಮಗಳನ್ನು ಆಹ್ವಾನಿಸಿ ನಿಮ್ಮ ಪ್ರತಿಭೆಗೆ ಒಂದು ಅವಕಾಶ ನೀಡಲಿದ್ದೇವೆ ಎಂದಾಗ, ಉದಯ್ ಅವರಿಗೆ ಹಗಲಿನಲ್ಲೂ ಕನಸಿನ ಅನುಭವವಾಗುತ್ತದೆ. ತಾವು ಕನಸಿನಲಿಲ್ಲ ಇದು ಅನಿರೀಕ್ಷಿತವಾಗಿ ಬಂದ ಆನಂದವೆಂದು ತಿಳಿಯುತ್ತದೆ.
ಉದಯ್ ಸಿಂಗ್ ಜೋಪಡಿಗೆ ಬೀಗ ಹಾಕಿ ,ತಾಯಿಯೊಂದಿಗೆ ಮುಂಬಯಿ ಪಯಣ ಬೆಳೆಸುತ್ತಾರೆ. ಮುಂಬಯಿಯ ಕಾರ್ಯಕ್ರಮದ ವೇದಿಕೆಗೆ ಹತ್ತಿದಾಗ ಕಣ್ಣಂಚಿನಲ್ಲಿ ನೀರು ಬರುತ್ತದೆ. ಬೀದಿಯಲ್ಲಿ ಹೆಜ್ಜೆ ಹಾಕುವ ಉದಯ್ ಕಾಲುಗಳಿಗೆ ದೊಡ್ಡ ಕಪ್ಪು ಬಣ್ಣದ ವೇದಿಕೆ ಅರ್ಧ ಖುಷಿಯಿಂದ , ಇನ್ನಾರ್ಧ ನರ್ವಸ್ ನೆಸ್ ನಿಂದ ಸ್ಟೆಪ್ ಗಳನ್ನು ಒಮ್ಮೆ ಮರೆಯುತ್ತಾರೆ. ಆದರೆ ಮತ್ತೊಂದು ಅವಕಾಶ ಕೊಟ್ಟ ಜಡ್ಜ್ ಗಳು ಉದಯ್ ಅವರ ಡ್ಯಾನ್ಸ್ ಶೈಲಿಗೆ ಮನಸೋಲುತ್ತಾರೆ. ಉದಯ್ ಡ್ಯಾನ್ಸ್ ದಿವಾನೆ ಕಾರ್ಯಕ್ರಮಕ್ಕೆ ಆಯ್ಕೆ ಆಗುತ್ತಾರೆ.
– ಸುಹಾನ್ ಶೇಕ್