Advertisement
ಸದ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಚಿಕ್ಕಜಾಲ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ್‌ಗಾಗಿ ಶೋಧ ನಡೆಯುತ್ತಿದೆ. ಗುತ್ತಿಗೆದಾರ ಪ್ರಕಾಶ್ ಎಂಬುವರ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತ್ವರಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಲಾಗಿತ್ತು. ಈ ವಿಚಾರ ತಿಳಿದ ಪ್ರಕಾಶ್, ಮಾವ ದೇವರಾಜು ಅವರಿಗೆ ಕಾನ್‌ಸ್ಟೇಬಲ್ ರವಿ ಭೇಟಿಯಾಗಿ 3.70 ಲಕ್ಷ ರೂ. ಕೊಟ್ಟರೆ ಪ್ರಕರಣದಿಂದ ಪ್ರಕಾಶ್ ಹಾಗೂ ಇತರರನ್ನು ಕೈಬಿಡುವುದಾಗಿ ಹಣ ಪಡೆದಿದ್ದರು. ಅದರಲ್ಲಿ ಇನ್‌ಸ್ಪೆಕ್ಟರ್ ಪ್ರವೀಣ್‌ಗೆ 3 ಲಕ್ಷ, 50 ಸಾವಿರ ರೂ. ತನಗೆ ಹಾಗೂ ಇಬ್ಬರು ರೈಟರ್‌ಗಳಿಗೆ ತಲಾ 10 ಸಾವಿರ ಸೇರಿ ಒಟ್ಟು 3.70 ಲಕ್ಷ ಲಂಚ ಪಡೆದುಕೊಂಡಿದ್ದ. ಅಲ್ಲದೇ ಮತ್ತೆ 5 ಲಕ್ಷ ರೂ.ಗೆ ಲಂಚಕ್ಕೆ ನಿಡುವಂತೆ ಬೇಡಿಕೆ ಇಟ್ಟಿದ್ದರು.
Related Articles
Advertisement
ಅಚ್ಚರಿ ಏನೆಂದರೆ ಈ ಲಂಚ ಸ್ವೀಕರಿಸುವ ಮುನ್ನವೇ ಪೋನ್ ಪೇ ಮೂಲಕ ಹತ್ತು ಸಾವಿರ ಲಂಚದ ಹಣವನ್ನು ಮೂರನೇ ವ್ಯಕ್ತಿಯ ಮೊಬೈಲ್ ಗೆ ಹಾಕಿಸಿಕೊಂಡು ಲಂಚ ಪಡೆದುಕೊಂಡಿದ್ದ. ಸಾಕ್ಷಾಧಾರಗಳನ್ನು ಪರಿಶೀಲಸಿದ ಲೋಕಾಯುಕ್ತ ಪೊಲೀಸರು ಕಾನ್‌ಸ್ಟೇಬಲ್ ರವಿಯನ್ನು ಬಂಧಿಸಿದ್ದಾರೆ. ರವಿ ಬಂಧನವಾಗುತ್ತಿದ್ದಂತೆ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಅವರ ಎರಡು ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.