Advertisement

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

03:14 PM Sep 19, 2021 | Team Udayavani |

ಸಂವೇದನೆಯೊಂದಿಗಿನ ಅದ್ಭುತ ಕಲೆಯನ್ನು ಗೀರ್ವಾಣಿಯ ಕೃಪಾಕಟಾಕ್ಷದೊಂದಿಗೆ ನುಡಿಸುತ ತನ್ಮಯತೆಯ   ಅನಾವರಣಗೊಳಿಸುವ ಕಲೆಯನ್ನು ನಮ್ಮ ಹಿರಿಯರು ಆಸ್ತಿಯನ್ನಾಗಿ ಅನೇಕ ಯುವ ಪೀಳಿಗೆಯ ಕೋಗಿಲೆಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ಸರಸ್ವತಿಯ ರೂಪ, ಎಲ್ಲರಿಗೂ ಅಷ್ಟು ಬೇಗ  ಒಲಿಯುವಂತದಲ್ಲ ನಿಷ್ಠೆ ಶ್ರದ್ದೆಯಿಂದ ಪದಗಳ  ರುಚಿಯನ್ನು ಅನುಭವಿಸಿಕೊಂಡು ಹಾಡುವ ಹಾಡು ಮನದ ಕದವನ್ನು ತಟ್ಟುತ್ತದೆ.

Advertisement

ಸಂಗೀತವೆಂದರೆ ಜಾತಿ, ಮತಗಳೆಂಬ ಬೇಧ-ಭಾವವಿಲ್ಲದ ಕಲೆ. ಮನಸ್ಸಿನ ಸಂಕಟ ಬೇಸರಗಳ ನಿವಾರಿಸಲು ಕಿವಿಯೊಳಗೆ ಇಳಿದು ನರನಾಡಿಗಳಲ್ಲಿ ಪ್ರವಹಿಸಿ ಚೈತನ್ಯ ತುಂಬುವ ಪ್ರಕಿಯೆ ಸಂಗೀತ.ಇಂತಹ ಅದ್ಭುತ ಕಲಾ ಸರಸ್ವತಿಯನ್ನು ವರಿಸಿಕೊಳ್ಳುವ ಮೂಲಕ ಸಂಗೀತ ಪ್ರಿಯರನ್ನು ರಾಂಜಿಸುತ್ತಿರುವ ಅನೇಕರಲ್ಲಿ ಉಜ್ವಲ ಆಚಾರ್ ಎಂ ಸಹ ಒಬ್ಬರು.

ಇವರು ಮೂಲತಃ  ಬಂಟ್ವಾಳ ತಾಲೂಕಿನ ಮಂಕುಡೆ ಗ್ರಾಮದವರು.ಶ್ರೀನಿವಾಸ್ ಆಚಾರ್ ಮತ್ತು ಮಮತಾ ಆಚಾರ್ ದಂಪತಿಯ ಪುತ್ರಿ. ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವ ಇವರು ಮನದ ವೇದನೆಗೆ ಗೆಜ್ಜೆಯ ಆರೈಕೆ ಬೇಸತ್ತ ಒಡಲಿಗೆ ಪ್ರಶಾಂತತೆಯ ಹಾರೈಕೆಗಳು ನೀಡುವ ಮನರಂಜನೆಯಲ್ಲಿ ಒಂದಾದ ಭರತನಾಟ್ಯವನ್ನು ಸಹ ಮಾಡುತ್ತಾರೆ .

ಈಕೆ ಪ್ರಸ್ತುತ ಕೆ. ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿ ದೇರಳ ಕಟ್ಟೆಯಲ್ಲಿ ಡಾಕ್ಟರ್ ಆಫ್ ಫಾರ್ಮಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಧುರವಾದ ಕಂಠಗಳಿಂದ ಹಾಡುವ ಮೂಲಕ ಸಂಗೀತದ ಕಡೆ ಒಲವನ್ನು ಬೆಳೆಸಿಕೊಂಡಿದ್ದಾರೆ. ಗುರುಗಳಾದ ವಿಧೂಷಿ ಅರುಣ ಪಡೀಲ್ ಇವರಿಂದ ಸಂಗೀತ ಕಲೆಯನ್ನು ಕರಗತ ಮಾಡಿಕೊಂಡು ಹಾಡುವ ಜೊತೆಗೆ ಭರತನಾಟ್ಯ ವನ್ನು  ಕೂಡ ಇವರು ನೃತ್ಯ ಗುರುಗಳಾದ ಶಿವರಾಜ್ ಭಟ್ ವಿಟ್ಲ, ಸುರೇಶ್ ಕಾರಂತ್ ಬಿ.ಸಿ ರೋಡ್ ಹಾಗೂ ದೀಪಕ್ ಕುಮಾರ್ ಪುತ್ತೂರು ಇವರ ಮೂಲಕ ಕಲಿತಿದ್ದಾರೆ.

ಇವರು ಸಿಕ್ಕ ಅವಕಾಶವನ್ನು ಕಳೆದುಕೊಳ್ಳದೆ ಪ್ರತಿಭಾಕಾರಂಜಿಗಳಂತಹ ಕಾರ್ಯಕರ್ಮದಲ್ಲಿ, ಹಬ್ಬಗಳ ನಿಮಿತ್ತ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹಾಡುತ್ತಾರೆ. ರಾಜ್ಯಮಟ್ಟದ ಜಾನಪದ ಹಾಡು ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿ ಹಾಗೂ ಲಯನ್ಸ್  ಕ್ಲಬ್ ನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Advertisement

ಸಂಗೀತ ಲೋಕದಲ್ಲಿ ಹಿರಿಯ ಸಾಧನೆ ಮಾಡಬೇಕೆನ್ನುವ ಹಂಬಲ ಹೊಂದಿರುವ ಈಕೆ ಕನ್ನಡದ ರಾಬರ್ಟ್ ಚಿತ್ರದ ಕಣ್ಣು ಹೊಡಿಯ್ಯಾಕ್  ಕವರ್ ಸಾಂಗ್ ಹಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಸುಕನ್ಯಾ ಎನ್. ಆರ್

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next