Advertisement
ಜಡ್ಕಲ್, ಮುದೂರು, ಇಡೂರು, ವಂಡ್ಸೆ, ಕೆರಾಡಿ, ಹೊಸೂರು, ಬೆಳ್ಳಾಲ, ಮೂಡಮುಂದು, ನೆಂಪು, ನೂಜಾಡಿ, ದೇವಲ್ಕುಂದ ಪರಿಸರದಲ್ಲಿ ಕೃಷಿ ಕಾರ್ಯ ಚುರುಕಿನಿಂದ ನಡೆಯುತ್ತಿದೆ.
ಜೂನ್ ತಿಂಗಳಲ್ಲಿ ಕಡಿಮೆ ಪ್ರಮಾಣದ ಮಳೆಯಿಂದಾಗಿ ಚಿಂತಾಗ್ರಸ್ತರಾದ್ದ ಈ ಭಾಗದ ಕೃಷಿಕರು ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹರ್ಷಿತರಾಗಿದ್ದಾರೆ. ತೆಂಗು, ಕಂಗು, ಬಾಳೆ ಭತ್ತ ಬೆಳೆಯುವ ಕೃಷಿಕರು ದಿನವಿಡೀ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.
Related Articles
ಭತ್ತದ ಗದ್ದೆಯ ಉಳುಮೆಗೆ ವಿವಿಧ ವಿನೂತನ ಮಾದರಿಯ ಯಂತ್ರಗಳ ಬಳಕೆ ನಡೆಯುತ್ತಿದೆ. ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಮೀಣ ಪ್ರದೇಶದ ಅನೇಕ ಕಾರ್ಮಿಕರು ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ತೆರಳಿರುವುದರಿಂದ ಇರುವ ಕಾರ್ಮಿಕರಿಗೆ ದುಬಾರಿ ಕೂಲಿ ತೆರಬೇಕಾದ ಪ್ರಸಂಗ ಎದುರಾಗಿದೆ.
Advertisement