ಕೆ.ಆರ್.ಪೇಟೆ: ತಾಲೂಕಿನ ವಿವಿಧೆಡೆ ಸುರಿದ ಬಿರುಗಾಳಿ ಮಳೆಗೆ ಆಲಂಬಾಡಿಕಾವಲು, ಬೆಳತೂರು, ಮುರುಕನಹಳ್ಳಿ, ಬಸವನಹಳ್ಳಿ, ಗುಡುಗನಹಳ್ಳಿಗಳಲ್ಲಿ ಬೆಳೆಗಳು ನಾಶವಾಗಿದ್ದರೆ, ಹಲವು ಮನೆಗಳ ಮೇಲೆ ಮರಗಳು ಬಿದ್ದು ಹಾನಿಯುಂಟಾಗಿದೆ. ವಿದ್ಯುತ್ ಕಂಬ, ಬೃಹತ್ ಮರಗಳು ರಸ್ತೆಗೆ ಬಿದ್ದು ರಸ್ತೆ ಸಂಚಾರ ಬಂದ್ ಆಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೇಲ್ಚಾವಣಿ ಶಿಥಿಲ: ಆಲಂಬಾಡಿಕಾವಲು ಗ್ರಾಮದ ವೆಂಕಟೇಶ ಯ್ಯ, ಸಣ್ಣಹುಚ್ಚಮ್ಮ, ಮಹಾದೇವಯ್ಯ, ರೇವಣ್ಣ, ರಘುಪತಿ, ಯೋಗಾ ನಂದ ಹಾಗೂ ಬೆಳತೂರು ಕೃಷ್ಣೇಗೌಡ, ರಂಗೇಗೌಡರಿಗೆ ಸೇರಿದ ಮನೆಗಳ ಮೇಲೆ ಮರಗಳು ಬಿದ್ದು ಮನೆಗಳ ಮೇಲ್ಚಾವಣಿ ಮುರಿದು ಬಿದ್ದು ಭಾಗಶಃ ಶಿಥಿಲಗೊಂಡಿವೆ. ಮಳೆ ನೀರು ಮನೆಯಲ್ಲಿ ತುಂಬಿಕೊಂಡಿದೆ.
ಸಣ್ಣಪುಟ್ಟ ಗಾಯ: ಆಲಂಬಾಡಿಕಾವಲಿನ ವೆಂಕಟೇಶಯ್ಯ ಮನೆ ಯಲ್ಲಿ ಮಲಗಿದ್ದ ಗರ್ಭಿಣಿ ಸೇರಿದಂತೆ ಐವರಿಗೆ ಮೇಲ್ಚಾವಣಿ ಹಾರಿ ಸಣ್ಣ ಪುಟ್ಟ ಗಾಯಗಳಾಗಿದ್ದು ಹೊರಗೆ ಓಡಿ ಬಂದ ಕಾರಣ ಹೆಚ್ಚಿನ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಆಲಂಬಾಡಿಕಾವಲು ಗ್ರಾಮದ ರಾಜು ಅವರ ಬಾಳೆ ಬೆಳೆ ನಾಶವಾಗಿದೆ. ಆಲಂಬಾಡಿ ಕಾವಲು ದಲಿತ ಕಾಲೋನಿಗೆ ಹೊಂದಿಕೊಂಡಿರುವ ಮುಜೀಬ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕಾಡು ಮರಗಳು ಪಕ್ಕದಲ್ಲಿಯೇ ಇರುವ ದಲಿತರ ಮನೆಗಳ ಮೇಲೆ ಬಿದ್ದು ಹತಾ ಅಪಾರ ಹಾನಿಯುಂಟಾಗಿದೆ.
ಕಾಡು ಮರಗಳನ್ನು ಕೂಡಲೇ ತೆರವುಗೊಳಿಸುವ ಮೂಲಕ ಮನೆಗಳನ್ನು ರಕ್ಷಿಸಿಕೊಡಬೇಕೆಂದು ದಲಿತ ಕುಟುಂಬಗಳು ತಾಲೂಕು ಆಡಳಿತ ಆಗ್ರಹಿಸಿವೆ. ಘಟನಾ ಸ್ಥಳಕ್ಕೆ ಅಕ್ಕಿಹೆಬ್ಟಾಳು ಹೋಬಳಿ ರಾಜಸ್ವ ನಿರೀಕ್ಷಕ ರಾಮಚಂದ್ರಪ್ಪ, ಗ್ರಾಮ ಲೆಕ್ಕಾ ಧಿಕಾರಿ ದಶರಥ, ಪಿಡಿಒ ಮಹಾದೇವ್, ತಾಪಂ ಮಾಜಿ ಸದಸ್ಯ ಸಂಜೀವಪ್ಪ, ಗ್ರಾಪಂ ಸದಸ್ಯ ಪ್ರಭಾಕರ್ ಭೇಟಿ ನೀಡಿ ಪರಿಶೀಲಿಸಿದರು.
ಸಂಪರ್ಕ ಕಡಿತ: ಮಳೆಯಿಂದ ಆಲಂಬಾಡಿ ಕಾವಲು ಗ್ರಾಮದಿಂದ ಸೋಮನಹಳ್ಳಿಗೆ ಹಾಗೂ ಬಸವನಹಳ್ಳಿ, ಆಲಂಬಾಡಿ, ಅಕ್ಕಿಹೆಬ್ಟಾಳುಗೆ ಹೋಗುವ ಮುಖ್ಯರಸ್ತೆಯಲ್ಲಿ ಮರಗಳು ಬಿದ್ದು ಸಂಚಾರ ಬಂದ್ ಆಗಿತ್ತು. ವಿದ್ಯುತ್ ಕಂಬಗಳು ಗಾಳಿಗೆ ಸಿಲುಕಿ ಆಲಂಬಾಡಿಕಾವಲು, ಸೋಮನಹಳ್ಳಿ, ಬಸವನಹಳ್ಳಿ, ಆಲಂಬಾಡಿ, ಗುಡುಗನಹಳ್ಳಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲೆಯಲ್ಲಿ ಮುಳುಗಿವೆ.
ಧರೆಗುರುಳಿದ ವಿದ್ಯುತ್ ಕಂಬ
ಪಾಂಡವಪುರ: ಬುಧವಾರ ಸುರಿದ ಭಾರೀ ಮಳೆ ಬಿರುಗಾಳಿಗೆ ತಾಲೂಕಾ ದ್ಯಂತ ಸುಮಾರು 60ಕ್ಕೂ ಹೆಚ್ಚು ವಿದ್ಯುತ್ ಕಂಬ ಗಳು ಹಾಗೂ ವಿದ್ಯುತ್ ಪರಿವರ್ತಕ ಗಳು ಧರೆಗುರುಳಿದ್ದು ಇಲಾಖೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ತಾಲೂಕಿನ ಕೆ.ಹೊಸೂರು, ಶಂಭೂನಹಳ್ಳಿ, ಮೇಲು ಕೋಟೆ, ನಾರಾಯಣಪುರ, ಜಕ್ಕನಹಳ್ಳಿ, ನೀಲನ ಹಳ್ಳಿ, ಕೆನ್ನಾಳು, ನಾತ್ ìಬ್ಯಾಂಕ್, ಸೀತಾಪುರ ಹಾಗೂ ಹಾರೋಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ನೆಲಕ್ಕು ರುಳಿವೆ. ಕೃಷಿ ಪಂಪ್ ಸೆಟ್‌ಗಳಿಗೆ ಅಳವ ಡಿಸಿರುವ ವಿದ್ಯುತ್ ಪರಿವರ್ತಕಗಳು ನೆಲ ಕಚ್ಚಿದ್ದು, ಇಡೀ ರಾತ್ರಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಳೆಯುವಂತಾಯಿತು. ರೈತರು ಬೆಳೆದಿರುವ ಭತ್ತ ಹಾಗೂ ಕಬ್ಬು ಹಾಳಾಗಿ ರೈತರು ಪರಿತಪಿಸುತ್ತಿದ್ದಾರೆ.