Advertisement

ಬಿರುಗಾಳಿ: ಡಿಂಗಿ ಸಹಿತ ಮೀನುಗಾರ ನಾಪತ್ತೆ

01:32 AM Sep 08, 2020 | mahesh |

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್‌ ಬೋಟ್‌ ರವಿವಾರ ತಡರಾತ್ರಿ ಬಿರುಗಾಳಿಗೆ ಸಿಲುಕಿದ್ದು ಬೋಟ್‌ನ ಡಿಂಗಿ(ಸಣ್ಣ ದೋಣಿ)ಯಲ್ಲಿ ಕುಳಿತಿದ್ದ ಓರ್ವ ಮೀನುಗಾರ ಡಿಂಗಿ ಸಮೇತ ನಾಪತ್ತೆಯಾಗಿದ್ದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಉಳ್ಳಾಲ ಹೊಗೆ ನಿವಾಸಿ ಆರ್ಥರ್‌ ಸುನಿಲ್‌ ಕುವೆಲ್ಲೋ (45) ನಾಪತ್ತೆಯಾದವರು. ಪರ್ಸಿನ್‌ ಬೋಟ್‌ನಲ್ಲಿ ಉಳ್ಳಾಲ ಉಳಿಯದ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಬೋಟ್‌ನ ಬೆಲ್ಟ್ ತುಂಡಾಗಿದ್ದು, ಈ ಸಂದರ್ಭದಲ್ಲಿ ಸಮುದ್ರಕ್ಕೆ ಬೀಸಿದ್ದ ಬಲೆ ಸಂಪೂರ್ಣ ಮುದ್ದೆಯಾಗಿತ್ತು. ಮೀನುಗಾರರು ರಾತ್ರಿ ವರೆಗೆ ಬಲೆಯನ್ನು ಬಿಡಿಸುವ ಕಾಯಕದಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಳಿ ಮಳೆ ಹೆಚ್ಚಾಗಿ ಬೋಟ್‌ಗೆ ಕಟ್ಟಿದ್ದ ಡಿಂಗಿ ಹಗ್ಗ ತುಂಡಾಗಿ ಸಮುದ್ರಪಾಲಾಯಿತು. ಸುನಿಲ್‌ ಅವರು ಬಲೆ ಎಳೆಯಲೆಂದು ಡಿಂಗಿಯಲ್ಲಿ ಕುಳಿತಿದ್ದರು.

ಬೋಟ್‌ನ ತಾಂತ್ರಿಕ ತೊಂದರೆಯಿಂದಾಗಿ ರಕ್ಷಿಸಲು ಸಾಧ್ಯವಾಗಿಲ್ಲ. ಸೋಮವಾರ ಹಗಲಿಡೀ ಸಮುದ್ರದಲ್ಲಿ ಹುಡುಕಾಡಿದ್ದು ರಾತ್ರಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ. ಕರಾವಳಿ ಕಾವಲು ಪಡೆಗೂ ಮಾಹಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next