Advertisement

ಬನ್ನಿಮಂಗಲ ಕೆರೆಯಲ್ಲಿ ಕೊಕ್ಕರೆಗಳ ಕಲರವ

12:46 PM Jun 20, 2023 | Team Udayavani |

ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ಕೊಕ್ಕರೆ ಪಕ್ಷಿಗಳು ನೋಡುವುದೇ ವಿರಳವಾಗಿದೆ. ಅದರಲ್ಲೂ ತಾಲೂಕಿನ ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡ ಕೆರೆಯ ಬನ್ನಿಮಂಗಲ ಕೆರೆಯಲ್ಲಿ ಕೊಕ್ಕರೆಗಳ ಕಲರವ ಕಂಡು ಬರುತ್ತಿದೆ. ಆಧುನಕತೆ ಬೆಳೆದಂತೆಲ್ಲಾ ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳನ್ನು ಕಡಿಯುತ್ತಿ ದ್ದೇವೆ. ಗುಬ್ಬಚ್ಚಿ, ಗೊರವಂಕ, ಮರ ಕುಟಿಗದಂಥ ಹಲವು ಪಕ್ಷಿಗಳು ನೋಡಲು ಸಿಗದಂತಾಗಿದೆ.

Advertisement

ಎಲ್ಲೋ ಒಂದೊಂದು ಕಡೆ ಗುಬ್ಬಚ್ಚಿಗಳನ್ನು ನೋಡಬಹು ದಾಗಿದೆ. ನೋಡು ಗರ ಕಣ್ಮನ ಕೊಕ್ಕರೆಗಳನ್ನು ನೋಡುವಂತಾಗಿದೆ. ಕಳೆದ ವರ್ಷ ಉತ್ತಮ ಮಳೆ ಯಾದ್ದರಿಂದ ಕೆರೆಗಳಲ್ಲಿ ನೀರಿದ್ದು ಇಂತಹ ಜೀವಿಗಳು ಆಶ್ರಯ ತಾಣವಾಗಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿ ಯುತ್ತಲೇ ಇದೆ. ಸರ್ಕಾರ ಮಳೆ ಆಶ್ರಿತ ನೀರಿಗೆ ಅವಲಂಬಿತ ವಾಗದೇ ಶಾಶ್ವತ ನೀರಾವರಿ ಯೋಜನೆಗಳಿಗೆ ಸರ್ಕಾರ ಮುಂದಾಗಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬೋರ್‌ವೆಲ್‌ ಗಳನ್ನು ಕೊರೆದು 1200-1500ಅಡಿಗಳ ಒಳಗೆ ನೀರು ದೊರೆಯುತ್ತದೆ. ಕೆಲವೊಂದು ಬಾರಿ ಕೆಲ ಬೋರ್‌ ವೆಲ್‌ ಗಳು ವಿಫ‌ಲ ವಾಗುತ್ತಿದೆ. ಅತಿ ಹೆಚ್ಚು ಬೋರ್‌ ವೆಲ್‌ಗ‌ಳನ್ನು ಕೊರೆಸಿ ಬೋರ್‌ವೆಲ್‌ ನೀರಿನ ಮೇಲೆ ಅವಲಂಬಿತರಾಗುವಂತಾಗಿದೆ.

ಪಕ್ಷಿಗಳ ಕಲರವದಿಂದ ಹೊಸ ಕಳೆ: ಬನ್ನಿಮಂಗಲ ಕೆರೆಯಲ್ಲಿ ದಕ್ಷಿಣ ಭಾರತದ ಕೊಕ್ಕರೆ ಪ್ರಭೇದಗಳ ಅವಾಸಸ್ಥಾನ ವಾಗಿರುವುದರಿಂದ ಸಾಮಾನ್ಯವಾಗಿ ಇಲ್ಲಿಗೆ ಮಧ್ಯ ಏಷ್ಯಾದ ಗ್ರೇಹೆರಾನ್‌, ವೈಟ್‌ ಪೆಲಿಕಾನ್‌, ಗ್ರೇವೆಲಿಕಾನ್‌, ಪೈಂಟೆಂಡ್‌ ಸ್ಟ್ರಾಕ್‌ ಇತ್ರೆ ಹೊಸ ಪ್ರಭೇದಗಳ ಪಕ್ಷಿಗಳು ಬಂದು ಕೆರೆಗೆ ಮತ್ತಷ್ಟು ಮೆರಗು ನೀಡಲಿವೆ. ಸರಕಾರ ಇಂತಹ ಕೆರೆಗಳಿಗೆ ಮೊದಲ ಆದ್ಯತೆ ನೀಡಿ ದರೆ, ಇಲ್ಲಿನ ವಾತಾವರಣ ಕೊಕ್ಕರೆಬೆಳ್ಳೂರಿನಂತೆ ಕಂಗೊಳಿಸುವಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ಪೆಲಿಕಾನ್‌ ಪಕ್ಷಿಗಳು ಹೆಚ್ಚಿನ ನೀರಿರುವ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಪ್ರಸ್ತತ ತಾಲೂಕಿನ ಬನ್ನಿಮಂಗಲ ಕೆರೆಯಲ್ಲಿ ಹೆಚ್ಚು ನೀರು ಇಲ್ಲದಿದ್ದರೂ ಸಹ ಇರುವ ನೀರಿನಲ್ಲಿ ಮೀನು ಗಳಿರುವುದರಿಂದ ಆಹಾರಕ್ಕಾಗಿ ಪಕ್ಷಿಗಳು ಬೆಳ್ಳಂಬೆಳಗ್ಗೆ ಗುಂಪು ಗುಂಪಾಗಿರುವುದನ್ನು ಕಾಣಬಹುದು.

ಅಂತರ್ಜಲ ಹೆಚ್ಚಿಸಿ: ಕೆರೆಯು ಸುಮಾರು ಎಕರೆ ಯಷ್ಟು ವಿಸ್ತೀರ್ಣ ಹೊಂದಿರುವುದರಿಂದ ಈ ಹಿಂದೆ ಸರಕಾರದ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಬಿಡಲು ಪ್ರಸ್ತಾಪಿಸಲಾಗಿತ್ತು. ದುರದೃಷ್ಟವಷತ್‌ ಕೆರೆಗೆ ಪೈಪ್‌ಲೈನ್‌ ಸಹ ಆಗಿರುವುದಿಲ್ಲ. ಬನ್ನಿಮಂಗಲದ ಕೆರೆ ಯಲ್ಲಿ ತಮಿಳು ಗ್ರಂಥಲಿಪಿ ಶಾಸನವೂ ಸಹ ಇದ್ದು, ಕೆರೆಗೆ ನೀರು ಹಾಯಿಸಿದರೆ ಅಂತರ್ಜಲ ಹೆಚ್ಚಾಗಿ ಈ ಭಾಗದಲ್ಲಿ ಹತ್ಛ ಹಸುರಿನ ಸಮೃದ್ಧ ವಾತಾವರಣ ಸೃಷ್ಠಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನೀರಿನ ಕೊರತೆಯಲ್ಲೂ ಆಹಾರ ಅರೆಸಿ ಬರು ವಂತಹ ಬಳ್ಳಕ್ಕಿ ಕೊಕ್ಕರೆಗಳು ಕೆರೆಯಂಗಳದಲ್ಲಿ ಬಿಡಾರ ಹೂಡಿದ್ದು ನೋಡುಗರ ಕಣ್ಮನಸೆಳೆಯುತ್ತಿವೆ.

Advertisement

ಕೆರೆಗೆ ಮರುಜೀವ ನೀಡುವ ಕೈಂಕರ್ಯಕ್ಕೆ ಸರಕಾರ ಮುಂದಾಗಲಿ: ಬಿರು ಬೇಸಿಗೆಯಲ್ಲಿ ಬತ್ತಿ ಹೋಗುವ ಕೆರೆಗೆ ಮರುಜೀವ ನೀಡುವ ಕೆಲಸವನ್ನು ಸರಕಾರ ಮಾಡಬೇಕಿದೆ. ಕೆರೆ ಅಭಿವೃದ್ಧಿ ಪಡಿಸಿ ವರ್ಷ ಕಳೆಯುತ್ತಿದ್ದರೂ ಸಹ ಕೆರೆಯ ಮಡಿಲು ಮಾತ್ರ ಬರಿದಾಗಿದೆ. ಕಳೆದ ವರ್ಷ ದಲ್ಲಂತೂ ಕೆರೆಯಲ್ಲಿ ಒಂದು ತೊಟ್ಟು ನೀರು ಸಹ ಇರಲಿಲ್ಲ. ಇದೀಗ ಮಳೆ ಯಿಂದಾಗಿ ಅಲ್ಪಸ್ವಲ್ಪ ನೀರು ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವ ದೊಡ್ಡಬಳ್ಳಾಪುರ ತಾಲೂಕಿನ ಗಡಿಯಂಚಿನಲ್ಲಿರುವ ಈ ಕೆರೆಯೂ ದೊಡ್ಡ ಬಳ್ಳಾಪುರದಿಂದ ಸುಮಾರು 10ಕಿಮೀ ದೂರದಲ್ಲಿದೆ. ಆಲೂರು ದುದ್ದನಹಳ್ಳಿ ಗ್ರಾಪಂಗೆ ಸೇರಿರುವ ಕೆರೆಗೆ ಮರುಜೀವ ನೀಡುವ ಕೈಂಕರ್ಯಕ್ಕೆ ಸರಕಾರ ಮುಂದಾಗಬೇಕಾಗಿದೆ.

ನೀರಿನ ಕೊರತೆಯಲ್ಲೂ ಮುಂಜಾನೆ ಯಲ್ಲಿ ಪಕ್ಷಿಗಳ ಕಲರವನ್ನು ಕೆರೆಯಲ್ಲಿ ನೋಡಬಹುದು. ಸರಕಾರದ ನಿರ್ಲಕ್ಷ್ಯದಿಂದಾಗಿ ಕೆರೆಗೆ ನೀರು ಬಂದಿ ರುವುದಿಲ್ಲ. ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬನ್ನಿಮಂಗಲ ಕೆರೆಯೂ ದೊಡ್ಡಕೆರೆಯಾಗಿರು ವುದರಿಂದ ಈ ಕೆರೆಗೆ ಆದಷ್ಟು ಬೇಗ ನೀರು ತುಂಬಿಸುವ ಕೆಲಸಕ್ಕೆ ಸರಕಾರ ಮನಸ್ಸು ಮಾಡಬೇಕು. ● ಆರ್‌.ರಘು, ಗ್ರಾಪಂ ಸದಸ್ಯ, ಆಲೂರುದುದ್ದನಹಳ್ಳಿ

ಪರಿಸರದ ಸಮತೋಲನ ಮಾನವ ನಿಂದ ಮಾತ್ರ ಸಾಧ್ಯವಿಲ್ಲ. ಗಿಡ- ಮರ, ಪ್ರಾಣಿ ಪಕ್ಷಿ, ಕೀಟ, ಸಸ್ಯ ಸಂಕುಲಗಳು ಇದ್ದಲ್ಲಿ ಮಾತ್ರ ಪರಿಸರದ ಸಮತೋಲನತೆಯನ್ನು ಕಾಯ್ದುಕೊಳ್ಳ ಬಹುದು. ಜಾಗತೀಕರಣದ ಹೆಸರಿನಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯುವುದು, ವನ್ಯಜೀವಿಗಳ ಬೇಟೆ, ಪರಿಸರದ ವ್ಯಾಪಾ ರೀಕರಣ, ಇವೆಲ್ಲವುದರ ಬಗ್ಗೆ ಸರ್ಕಾರ ತೀವ್ರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜನತೆ ಎಚ್ಚೆತ್ತುಕೊಳ್ಳಬೇಕು. ● ಮಂಜುನಾಥ. ಜಿ, ಪರಿಸರಪ್ರೇಮಿ

ಬಿರು ಬೇಸಿಗೆಯಲ್ಲಿ ಪಕ್ಷಿ ಪ್ರಭೇದಗಳಿಗೆ ಕೆರೆ, ಕುಂಟೆ ಮತ್ತು ಇತರೆ ನೀರಿನ ಮೂಲಗಳೇ ಜೀವಾಳ. ಪಕ್ಷಿಗಳ ಅವನತಿಗೆ ಮತ್ತು ಕೆರೆಯ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ. ● ಮೀನಾಕುಮಾರಿ, ಗ್ರಾಪಂ ಸದಸ್ಯೆ, ಆಲೂರುದುದ್ದನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next