Advertisement

ಯಹೂದಿ ವಿನೋದ ಕತೆಗಳು

03:45 AM Apr 30, 2017 | Harsha Rao |

ಮಗನ ಪ್ರೀತಿ
ಮೂರು ಜನ ಯಹೂದಿ ಮಹಿಳೆಯರು ಶಾಪಿಂಗ್‌ ಎಲ್ಲ ಮುಗಿದ ಮೇಲೆ ಬ್ರೆಂಟ್‌ ಕ್ರಾಸ್‌ನ ಬೆಂಚಿನ ಮೇಲೆ ಕೂತು ಹರಟುತ್ತಿದ್ದರು. ಹರಟೆಯ ವಿಷಯ ಏನು ಎಂದು ಯಾರು ಬೇಕಾದರೂ ಊಹಿಸಬಹುದು ಬಿಡಿ. ಯಾರೇ ಇಬ್ಬರು ಯಹೂದಿ ತಾಯಿಯರು ಜೊತೆ ಸೇರಿದರೂ ಅವರ ಚರ್ಚೆ ಮಕ್ಕಳಿಂದಾಚೆಗೆ ಹೋಗುವುದೇ ಇಲ್ಲ. ಹಾಗೆಯೇ ಈ ಮೂರು ಮಹಿಳೆಯರು ಕೂಡ ತಮ್ಮ ಮಕ್ಕಳ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.

Advertisement

ಮೊದಲನೆಯವಳು, “”ಸ್ಯಾಡಿ, ನಮ್ಮ ಅರ್ನಾಲ್ಡ್‌ ಎಷ್ಟು ಮುದ್ದುಮಗ ಅಂತೀರಿ! ಈ ಸಲದ ನನ್ನ ಹುಟ್ಟುಹಬ್ಬಕ್ಕೆ ಪಿಕಾಸೋ ವರ್ಣಚಿತ್ರವನ್ನು ಹತ್ತು ಸಾವಿರ ಡಾಲರ್‌ ಕೊಟ್ಟು ತಂದು ಪ್ರಸೆಂಟ್‌ ಮಾಡಿದ. ಅದನ್ನು ನಮ್ಮ ಮನೆಯ ಹಜಾರದÇÉೇ ತೂಗುಹಾಕಿದ್ದೇನೆ” ಎಂದಳು.

“”ಅಯ್ಯೋ ಬಿಡು! ನನ್ನ ಮಗ ಬರ್ನಿ ಮಾಡಿದ್ದನ್ನು ಕೇಳಿದರೆ ನಿನ್ನ ಹೊಟ್ಟೆ ಉರಿಯಬಹುದೋ ಏನೋ. ಈ ಸಲದ ತಾಯಂದಿರ ದಿನಕ್ಕೆ ನನಗೆ ಹೊಸಾ ಮಸೀìಡಿಸ್‌ ಕಾರನ್ನೇ ಉಡುಗೊರೆಯಾಗಿ ಕೊಟ್ಟಿ¨ªಾನೆ” ಎಂದಳು ಮಿನ್ನಿ. 
“”ನಿಮ್ಮಿಬ್ಬರ ಮಕ್ಕಳ ಪ್ರೀತಿ ಸ್ಟಾನ್ಲಿಯ ಎದುರಿಗೆ ಏನೇನೂ ಅಲ್ಲ” ಎಂದಳು ಶೆರ್ಲಿ, “”ಅವನು ದೊಡ್ಡ ಕಾಲೇಜೊಂದರಲ್ಲಿ ಸೈಕಾಲಜಿ ಪ್ರೊಫೆಸರ್‌. ಆದರೆ ಕ್ಲಾಸಲ್ಲಿ ಯಾವತ್ತೂ ನನ್ನ ಬಗ್ಗೇನೇ ಮಾತಾಡ್ತಿರ್ತಾನೆ ಗೊತ್ತ?”

ಸ್ವರ್ಗ ಗಮನ
ಮೋಷೆ ಯಾವುದೋ ಕೆಲಸದ ಮೇಲೆ ಪಟ್ಟಣಕ್ಕೆ ಹೋಗಿದ್ದವನು ಮನೆಗೆ ವಾಪಸಾಗುವ ಹೊತ್ತಿಗೆ ಸರಿಯಾಗಿ ಮಳೆ ಸುರಿಯಿತು. ಹೊರಗೆ ಕಾಲಿಡಲಾಗದಷ್ಟು ಜೋರಾದ ಬಿರುಮಳೆ ಅದು. ಮೋಷೆ ನಿಂತಿದ್ದ ಜಾಗದÇÉೆ ಒಂದು ಹಳೆಯ ಚರ್ಚು ಇದ್ದದ್ದರಿಂದ, ಎರಡನೆಯ ಯೋಚನೆ ಮಾಡದೆ ಮೋಷೆ ಅದರೊಳಗೆ ಹೋದ. ಮುಖ್ಯ ಪ್ರಾರ್ಥನಾ ಕೊಠಡಿಯಲ್ಲಿ ಫಾದರ್‌ ಪ್ರವಚನ ಕೊಡುತ್ತಿದ್ದರು. 

ಮಾಡಲು ಬೇರೇನೂ ಕೆಲಸವಿಲ್ಲದ್ದರಿಂದ ಮೋಷೆ ಅÇÉೇ ಕೊನೆಯ ಬೆಂಚಲ್ಲಿ ಕೂತು ಪಾದರಿಯ ಪ್ರವಚನ ಕೇಳುತ್ತ ಕೂತ. ಅವರ ಹಾವಭಾವ, ಕತೆ ಹೇಳುವ ರೀತಿ, ಭಾಷಾಶೈಲಿ ಎಲ್ಲವೂ ಮೋಡಿ ಮಾಡುವಂತಿದ್ದವು. ಮಾತಿನ ಕೊನೆಗೆ ಅವರು ತನ್ನ ಭಾಷಣದ ಪರಿಣಾಮ ಎಷ್ಟು ಜನರ ಮೇಲಾಗಿದೆ ಎಂದು ತಿಳಿಯಲು, “”ಇಲ್ಲಿ ಎಷ್ಟು ಜನ ಸ್ವರ್ಗಕ್ಕೆ ಹೋಗಲು ಇಚ್ಛಿಸುತ್ತೀರಿ?” ಎಂದು ಕೇಳಿದರು. ಇಡೀ ಸಭಾಂಗಣವೇ ಎದ್ದು ನಿಂತಿತು. ಆದರೆ ಮೋಷೆ ಮಾತ್ರ ಕೂತೇ ಇದ್ದ.

Advertisement

“”ಅಲ್ಲಿ, ಕೊನೆಯ ಸಾಲಲ್ಲಿರುವವರು! ನಿಮಗೆ ಸ್ವರ್ಗಕ್ಕೆ ಹೋಗಲು ಆಸೆಯಿಲ್ಲವೆ?” ಪಾದರಿಗಳು ಆಶ್ಚರ್ಯದಿಂದ ಕೇಳಿದರು.

“”ಆಸೆಯೇನೋ ಇದೆ ಗುರುಗಳೇ. ಆದರೆ ಈ ಹಾಳುಮಳೆ ನಿಂತ ಕೂಡಲೇ ಮೊದಲು ಮನೆಗೆ ಹೋಗಬೇಕಾಗಿದೆ. ನನ್ನನ್ನು ಮಾತ್ರ ಸ್ವರ್ಗಕ್ಕೆ ಕರೆದರೆ ನನ್ನ ಹೆಂಡತಿ ನಿಮ್ಮನ್ನು ಹೇಗೆ ಕಾಡಬಹುದೆಂಬ ಕಲ್ಪನೆ ನಿಮಗಿದ್ದಂತಿಲ್ಲ!” ಎಂದ ಮೋಷೆ.

ಸಾಂತ್ವನದ ಮಾತು
ಇಬ್ಬರು ರೈತರು ಸಂತೆಯಲ್ಲಿ ಕೂತು ಮಾತಾಡುತ್ತಿದ್ದರು. ಹಳ್ಳಿಯಿಂದ ಬಂದವನು ಶ್ಲೋಮೊ. ಸ್ವಲ್ಪಮಟ್ಟಿಗೆ ಪಟ್ಟಣ ಎನ್ನಬಹುದಾದ ಜಾಗದಿಂದ ಬಂದವನು ಮೋಟೆR.

“”ಅಂದ ಹಾಗೆ ನಿಮಗೆಷ್ಟು ಜಮೀನುಂಟು?” ವಿಚಾರಿಸಲು ಕೂತ ಶ್ಲೋಮೊ. ಬೇರೆಯವರ ಜೊತೆ ತನ್ನ ಜಮೀನು ಸಮೀಕರಿಸಿ ನೋಡುವುದೆಂದರೆ ಅವನಿಗೇನೋ ಸಂತೋಷ.

“”ಹೆಚ್ಚೇನೂ ಇಟ್ಟಿಲ್ಲ ಸ್ವಾಮಿ. ಮನೆಮುಂದೆ ಒಂದೆರಡು ಹೊಲ, ಹಿತ್ತಿಲಾಚೆ ಒಂದೆರಡು ಹೊಲ. ಒಟ್ನಲ್ಲಿ ಒಂದೂವರೆ ಮುಡಿ ಬೆಳೆಯಬಹುದಾದಷ್ಟು ಜಾಗ ಇಟ್ಟುಕೊಂಡಿದ್ದೇನೆ” ಎಂದ ಮೋಟೆR. 

“”ಹೌದೆ? ನಾನು ನನ್ನ ಜಮೀನಿನ ಅಳತೆಯನ್ನು ಬೇರೆ ರೀತಿಯಲ್ಲಿ ಹೇಳಬೇಕಾಗುತ್ತೆ. ನಾನೇನಾದರೂ ನನ್ನ ಜಮೀನಿನ ಒಂದು ಮೂಲೆಯಿಂದ ಜೀಪ್‌ನಲ್ಲಿ ಹೊರಟರೆ ಇನ್ನೊಂದು ಬದಿ ಸೇರಲು ಸಂಜೆ ಆಗಿºಡುತ್ತೆ” ಹೆಮ್ಮೆಯಿಂದ ಹೇಳಿದ ಶ್ಲೋಮೊ.

“”ಗೊತ್ತಾಯ್ತು ಬಿಡಿ, ಈ ಲಟಾರಿ ಯುಗೋ ಜೀಪುಗಳ ಬಗ್ಗೆ ಹೇಳ್ಳೋದೇನು! ನನ್ನ ಹತ್ರಾನೂ ಅಂಥಾ¨ªೊಂದು ದರಿದ್ರ ಜೀಪಿತ್ತು ಹಿಂದೆ!” ಎಂದ ಮೋಟೆR.

ದಾನಧರ್ಮಕ್ಕೆ ದುಡ್ಡು
ರಬೈ, ಸಿನೆಗಾಗ್‌ನ ಅರ್ಚಕ ಮತ್ತು ಮಂತ್ರಿ – ಮೂರು ಜನ ವಾಯುವಿಹಾರ ಹೊರಟಿದ್ದರು. ತಮ್ಮ ಸಂಪಾದನೆಯಲ್ಲಿ ಎಷ್ಟೆಷ್ಟು ದುಡ್ಡನ್ನು ದಾನಧರ್ಮಕ್ಕೆ ಎತ್ತಿಡಬೇಕು ಎನ್ನುವ ಚರ್ಚೆ ಬಂತು. ಅರ್ಚಕ ನಿಂತು, “”ಒಂದು ಕೋಲಿಂದ ನೆಲದಲ್ಲಿ ಒಂದು ಪುಟ್ಟ ವೃತ್ತ ಬರೆದು ತೋರಿಸಿದ. ನಾನು ನನ್ನ ಸಂಪಾದನೆಯ ದುಡ್ಡನ್ನೆಲ್ಲ ಮೇಲೆ ಹಾರಿಸುತ್ತೇನೆ. ಆಗ ಕೆಳಗೆ ಬೀಳುವ ದುಡ್ಡಲ್ಲಿ ಎಷ್ಟು ಈ ವೃತ್ತದೊಳಗೆ ಬೀಳುತ್ತೋ ಅಷ್ಟನ್ನೂ ಮೋಹವಿಲ್ಲದೆ ದಾನಕ್ಕೆಂದು ಎತ್ತಿಡುತ್ತೇನೆ” ಎಂದ.
ಮಂತ್ರಿ ಕೋಲಿನಿಂದ ನೆಲದಲ್ಲಿ ಒಂದು ದೊಡ್ಡ ವೃತ್ತವನ್ನು ಬರೆದ. ನಂತರ ನಾನು ಕೂಡ ನನ್ನ ಸಂಪಾದನೆಯ ದುಡ್ಡನ್ನು ಮೇಲೆ ಹಾರಿಸುತ್ತೇನೆ. ಎಷ್ಟು ದುಡ್ಡು ಈ ವೃತ್ತದ ಹೊರಗೆ ಬೀಳುತ್ತೋ, ಅದನ್ನೆಲ್ಲ ನನಗೆ ಸೇರಿದ್ದಲ್ಲ ಎನ್ನುವ ಭಾವದಿಂದ ಧರ್ಮಕಾರ್ಯಗಳಿಗೆ ಖರ್ಚು ಮಾಡುತ್ತೇನೆ” ಎಂದ.

“”ಕ್ಷಮಿಸಿ ಗೆಳೆಯರೇ, ನನಗೇಕೋ ಈ ವೃತ್ತಪರಿಹಾರದಲ್ಲಿ ಅಷ್ಟು ನಂಬಿಕೆ ಇಲ್ಲ. ನಾನು ನನ್ನ ಸಂಪಾದನೆಯ ಅಷ್ಟೂ ದುಡ್ಡನ್ನು ಮೇಲೆ ಹಾರಿಸುತ್ತೇನೆ. ತನಗೆ ಬೇಕಾದಷ್ಟು ದುಡ್ಡನ್ನು ದೇವರು ಎತ್ತಿಕೊಳ್ಳಲಿ. ಕೆಳಗೆ ಬಿದ್ದದಷ್ಟೇ ನನ್ನ ದುಡ್ಡು ಎನ್ನುವ ಭಾವ ನನ್ನದು” ಎಂದ ರಬೈ.

ಹದಿನೇಳು ದಿನ
“”ಅಮ್ಮಾ ಹೇಗಿದ್ದೀಯ?” ಫೋನ್‌ನಲ್ಲಿ ಮೋಷೆ ವಿಚಾರಿಸಿದ.
“”ಅಷ್ಟೇನೂ ಚೆನ್ನಾಗಿಲ್ಲಪ್ಪ” ಎಂದಳಾಕೆ.
“”ಯಾಕಮ್ಮ ಏನಾಯ್ತು? ಏನು ತೊಂದರೆ? ಆರೋಗ್ಯ ಸರಿ ಇಲ್ಲವಾ?”
“”ಯಾಕೋ ತುಂಬಾ ಸುಸ್ತು ಕಣಪ್ಪ. ನಿಶ್ಶಕ್ತಿ”
“”ಯಾಕೆ?”
“”ಕಳೆದ ಹದಿನೇಳು ದಿನದಿಂದ ಊಟ ಮಾಡಿಲ್ಲವಲ್ಲ, ಅದಕ್ಕೇ ಇರಬೇಕು”
“”ಏನ್‌ ಹೇಳ್ತಾ ಇದೀಯ ನೀನು! ಊಟ ಯಾಕೆ ಮಾಡಿಲ್ಲ? ಅದೂ ಹದಿನೇಳು ದಿನ!”
“”ಏನ್‌ ಹೇಳಲಿ ಮಗಾ. ನಿನ್ನ ಫೋನ್‌ ಬಂದಾಗ ನನ್ನ ಬಾಯಲ್ಲಿ ತುತ್ತಿದ್ದರೆ ಮಾತಾಡೋದು ಕಷ್ಟ ಅಂತ ಊಟ ಮಾಡಿರಲಿಲ್ಲ”

– ಆರ್‌. ಸಿ.

Advertisement

Udayavani is now on Telegram. Click here to join our channel and stay updated with the latest news.

Next