Advertisement

“ಸ್ಟಾಪ್ಲೆಸ್ಟಿಕ್‌ ಮಣಿಪಾಲ್‌’ಆಂದೋಲನ ಆರಂಭ

03:55 PM Oct 14, 2019 | Team Udayavani |

ಉಡುಪಿ: ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುವುದು ಬೇಡವೆಂಬ ಆಂದೋಲನ “ಸ್ಟಾಪ್ಲೆಸ್ಟಿಕ್‌ ಮಣಿಪಾಲ್‌‘ ಮಣಿಪಾಲದಲ್ಲಿ ಆರಂಭವಾಗಿದೆ.

Advertisement

ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ (ಎಂಐಸಿ) ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಬಳಕೆ ಮಾಡದಿರಲು ಮತ್ತು ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸುವ ಕುರಿತು ಬುಧವಾರ ಆಂದೋಲನ ನಡೆಸಿದರು. ಗ್ರಾಹಕರು, ಅಂಗಡಿ ಮಾಲಕರಿಗೆ ಜಾಗೃತಿ ರೂಪಿಸುವ ಪ್ರಯತ್ನದಲ್ಲಿ ಕಾರ್ಯಕ್ರಮ ನಡೆಸಲಾಯಿತು.

“ನಮ್ಮ ಕಡಲ ಕಿನಾರೆಗಳು ಮತ್ತು ಬೆಟ್ಟ ಗುಡ್ಡಗಳು ನಗರ ಸುತ್ತಮುತ್ತಲಿನವರ ತ್ಯಾಜ್ಯದಿಂದ ತುಂಬಿ ಹೋಗಿವೆ. ಸ್ಟಾಪ್ಲೆಸ್ಟಿಕ್‌ ಮಣಿಪಾಲ್‌ ಪ್ಲಾಸ್ಟಿಕ್‌ರಹಿತ ವಾತಾವರಣದ ಗುರಿ ಹೊಂದಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು.

ಇದಕ್ಕಾಗಿ ಡಿಜಿಟಲ್‌ ಆಂದೋಲನವನ್ನು ಆರಂಭಿಸಲಾಗಿದ್ದು ಸಾರ್ವಜನಿಕ ಪ್ರಚಾರಾರ್ಥ ಆಂದೋಲನ ನಡೆಸಲಾಯಿತು.

ವಿದ್ಯಾರ್ಥಿಗಳ ಗುಂಪು ಮಣಿಪಾಲದ ಜನನಿಬಿಡ ಪ್ರದೇಶಗಳಲ್ಲಿ ತ್ಯಾಜ್ಯದ ಬ್ಯಾಗ್‌ನ್ನು ತಲೆಗೆ ಮುಚ್ಚಿಕೊಂಡು ವಿಶಿಷ್ಟ ರೀತಿಯಲ್ಲಿ ಜಾಗೃತಿ ರೂಪಿಸುವ ಮೂಲಕ ಮಾನವ ಜೀವಿಗಳನ್ನು ಪ್ಲಾಸ್ಟಿಕ್‌ ಹೇಗೆ ನುಂಗುತ್ತಿದೆ ಎಂಬುದನ್ನು ತೋರಿಸಲಾಯಿತು.

Advertisement

ಸ್ಟೂಡೆಂಟ್‌ ಪ್ಲಾಜಾ, ಟೈಗರ್‌ ಸರ್ಕಲ್‌, ಉಪೇಂದ್ರ ಪೈ ಸರ್ಕಲ್‌, ಎಂಐಟಿ ಮುಖ್ಯದ್ವಾರ, ಕೆನರಾ ಮಾಲ್‌, ವಿದ್ಯಾರ್ಥಿಗಳ ಹಾಸ್ಟೆಲ್‌, ಎಂಡ್‌ ಪಾಯಿಂಟ್‌, ಸರಳೆಬೆಟ್ಟು ರಸ್ತೆ, ಮಾಹೆ ವಿ.ವಿ. ಕಟ್ಟಡ, ಕೆಎಂಸಿ ಮೊದಲಾದೆಡೆ ಆಂದೋಲನ ನಡೆಸಲಾಯಿತು.

ವಿಶಿಷ್ಟ ಆಂದೋಲನವನ್ನು ಕಂಡ ಸಾರ್ವಜನಿಕರು ಕುತೂಹಲಗೊಂಡರು. ಈ ತೆರನಾದ ಜನಜಾಗೃತಿ ಪ್ರಯತ್ನ ಇದೇ ಮೊದಲ ಬಾರಿ ಮಣಿಪಾಲದಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next