Advertisement

Avinash Sable: ಟ್ರೋಲ್‌ ಮಾಡಬೇಡಿ, ಅಥ್ಲೀಟ್‌ಗಳು ಖನ್ನತೆಗೆ ಒಳಗಾಗುತ್ತಾರೆ; ಸಾಬ್ಲೆ

09:38 PM Aug 10, 2024 | Team Udayavani |

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಅಥ್ಲೀಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡಬೇಡಿ. ಅವರು ಖನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಒಲಿಂಪಿಕ್ಸ್‌ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಸ್ಪರ್ಧಿಸಿದ್ದ ಅವಿನಾಶ್‌ ಸಾಬ್ಳೆ ಮನವಿ ಮಾಡಿದ್ದಾರೆ.

Advertisement

ಈ ಬಗ್ಗೆ ಮಾತನಾಡಿರುವ ಅವಿನಾಶ್‌ ಸಾಬ್ಳೆ, ನನ್ನ ಜೊತೆಗಿರುವ ಕ್ರೀಡಾಪಟುಗಳು ಅವರನ್ನು ಗುರಿಯಾಗಿಸಿ ನಡೆಯುತ್ತಿರುವ ಟ್ರೋಲ್‌ಗ‌ಳನ್ನು ನೋಡಿ ಖನ್ನತೆಗೆ ಒಳಗಾಗುತ್ತಿದ್ದಾರೆ. ಈ ರೀತಿ ನೀವು ಲೇವಡಿ ಮಾಡಿದರೆ ನಾವು ಹೇಗೆ ದೇಶವನ್ನು ಪ್ರತಿನಿಧಿಸಲು ಸಾಧ್ಯ ಎಂದು ಅವರೆಲ್ಲ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸೆಣೆಸಾಡುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಟ್ರೋಲ್‌ ಮಾಡಲಾಗುತ್ತಿದೆ. ಅದರಲ್ಲೂ ಹಿಂದಿನ 4 ಒಲಿಂಪಿಕ್ಸ್‌ಗಳಲ್ಲಿ ಭಾಗಿಯಾದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಹಾಗೂ ಕುಸ್ತಿಪಟು ಅಂತಿಮ್‌ ಪಂಘಲ್‌ರನ್ನು ಗುರಿಯಾಗಿಸಿ ಅಪಹಾಸ್ಯ ಮಾಡಲಾಗಿತ್ತು. ಈ ಕುರಿತೇ ಸಬ್ಲೆ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಲ್ಲಿ ಮೋಜು ಮಾಡಲು ನಾವು ಬಂದಿಲ್ಲ. ನಾವು ಸರ್ಕಾರದಿಂದ ಹಣ ಪಡೆದು ಇಲ್ಲಿ ಮೋಜು-ಮಸ್ತಿ ಮಾಡುತ್ತಾ ಪ್ರವಾಸಕ್ಕೆ ಬಂದಿದ್ದೇವೆ ಎಂದು ಕೆಲವರು ಭಾವಿಸಿದ್ದಾರೆ. ವಿಶ್ವವಿಜೇತ ಆಟಗಾರರೆದುರು ಗೆಲುವಿಗಾಗಿ ನಾವು ಪ್ರಯತ್ನಿಸುತ್ತಿರುವಾಗ ಕೆಲವರು ನಾವು ಸ್ಪರ್ಧೆಯಲ್ಲಿ ಕೊನೇ ಸ್ಥಾನದಲ್ಲಿರುವ ಬಗ್ಗೆ ಟ್ರೋಲ್‌ ಮಾಡುತ್ತಿದ್ದಾರೆ’ ಎಂದು ಸಾಬ್ಳೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next