Advertisement

ಈ ಕೂಡಲೇ ಆಕ್ರಮಣ ನಿಲ್ಲಿಸಿ; ರಷ್ಯಾಗೆ ಅಂತಾರಾಷ್ಟ್ರೀಯ ಕೋರ್ಟ್‌ ಆದೇಶ

02:26 AM Mar 17, 2022 | Team Udayavani |

ಕೀವ್‌/ವಾಷಿಂಗ್ಟನ್‌: “ಈ ಕೂಡಲೇ ಉಕ್ರೇನ್‌ ಮೇಲಿನ ದಾಳಿಯನ್ನು ನಿಲ್ಲಿಸಿ.’ ಹೀಗೆಂದು ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಬುಧವಾರ ರಾತ್ರಿ ಸೂಚಿಸಿದೆ.

Advertisement

ರಷ್ಯಾ ಯುದ್ಧಾಪರಾಧದ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ಉಕ್ರೇನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, “ಈಗಲೇ ರಷ್ಯಾ ಯುದ್ಧ ನಿಲ್ಲಿಸಬೇಕು. ಪರಿಸ್ಥಿ ತಿಯನ್ನು ಮತ್ತಷ್ಟು ಉಲ್ಬಣ ಗೊಳಿಸುವಂಥ ಯಾವುದೇ ಕ್ರಮ ವನ್ನು ಎರಡೂ ರಾಷ್ಟ್ರಗಳು ಕೈಗೊಳ್ಳುವಂತಿಲ್ಲ’ ಎಂದೂ ಆದೇಶಿಸಿದೆ. ನ್ಯಾಯಾಲಯದ ಈ ತೀರ್ಪು “ಉಕ್ರೇನ್‌ಗೆ ಸಂದ ಜಯ’ ಎಂದು ಝೆಲೆನ್‌ಸ್ಕಿ ಬಣ್ಣಿಸಿದ್ದಾರೆ. ಜತೆಗೆ ರಷ್ಯಾ ಕೂಡಲೇ ಹಿಂದೆ ಸರಿಯಬೇಕು ಎಂದೂ ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ್ದ ರಷ್ಯಾ ಅಧ್ಯಕ್ಷ ಪುತಿನ್‌, “ನಾವು ಹಿಂದೆ ಸರಿಯುತ್ತೇವೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ. ಪಾಶ್ಚಾತ್ಯ ರಾಷ್ಟ್ರಗಳಿಗೆ ರಷ್ಯಾ ಬಗ್ಗೆ ಇನ್ನೂ ಗೊತ್ತಿಲ್ಲ’ ಎಂದು ಪಾಶ್ಚಾತ್ಯ ದೇಶಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಜತೆಗೆ ಭವಿಷ್ಯದಲ್ಲಿ ಉಕ್ರೇನ್‌ ಅಣ್ವಸ್ತ್ರಗಳನ್ನು ಹೊಂದು ವುದರಲ್ಲಿತ್ತು. ರಷ್ಯಾಕ್ಕೆ ಉಕ್ರೇನ್‌ ಅನ್ನು ಆಕ್ರಮಿಸಿಕೊಳ್ಳುವ ಉದ್ದೇಶವಿಲ್ಲ. ನಮ್ಮ ಪ್ಲ್ರಾನ್‌ ಪ್ರಕಾರವೇ ಎಲ್ಲ ನಡೆಯುತ್ತಿದೆ ಎಂದೂ ಪುತಿನ್‌ ಹೇಳಿದ್ದಾರೆ.

ಸಂಧಾನ ಸಾಧ್ಯತೆ: ಈ ನಡುವೆ, ಉಕ್ರೇನ್‌ ಮತ್ತು ರಷ್ಯಾ ನಡುವೆ ಬುಧವಾರ ಕೊನೆಯ ಹಂತದ ಮಾತುಕತೆ ನಡೆದಿದ್ದು, “ಸಂಧಾನ’ದ ನಿರೀಕ್ಷೆ ಗೋಚರಿಸಿದೆ. ಸ್ವೀಡನ್‌, ಆಸ್ಟ್ರಿಯಾ ಮಾದರಿಯಲ್ಲಿ ಉಕ್ರೇನ್‌ “ನಿಷ್ಪಕ್ಷ ನಿಲುವು’ ಹೊಂದಿರುವಂತೆ ನೋಡಿಕೊಳ್ಳುವುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಜತೆಗೆ ರಷ್ಯಾ ಮೇಲಿನ ದಿಗ್ಬಂಧನದ ಕುರಿತೂ ಚರ್ಚಿಸಲಾಗಿದೆ. ಇದೇ ವೇಳೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಅವರೂ ತಮ್ಮ ದೇಶವಾಸಿಗಳನ್ನು ಉದ್ದೇಶಿಸಿ ವೀಡಿಯೋ ಸಂದೇಶ ರವಾನಿಸಿದ್ದು, “ಯಾವುದೇ ಯುದ್ಧವು ಸಂಧಾನದೊಂದಿಗೆ ಕೊನೆಗೊಳ್ಳುತ್ತದೆ. ಪ್ರಯತ್ನ ಮುಂದುವರಿದಿದೆ. ಸ್ವಲ್ಪ ತಾಳ್ಮೆ ವಹಿಸೋಣ’ ಎಂದಿದ್ದಾರೆ. ಈ ಹೇಳಿಕೆಯು ಸಂಧಾನ ಯಶಸ್ಸಿನ ಸುಳಿವನ್ನು ನೀಡಿದೆ.

ಮುಂದುವರಿದ ದಾಳಿ: ಬುಧವಾರ ಕೀವ್‌, ಮರಿಯುಪೋಲ್‌ ಸೇರಿದಂತೆ ಹಲವು ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿ ಸಿತ್ತು. ಮರಿಯುಪೋಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದ ಥಿಯೇಟರ್‌ ಮೇಲೆ ರಷ್ಯಾ ಬಾಂಬ್‌ ಹಾಕಿದೆ. ಚೆರ್ನಿಹಿವ್‌ನಲ್ಲಿ ಆಹಾರಕ್ಕಾಗಿ ಸರತಿಯಲ್ಲಿ ನಿಂತಿದ್ದ 10 ಜನರನ್ನು ಗುಂಡಿಕ್ಕಿ ಹತ್ಯೆಗೈದಿದೆ. ಇನ್ನೊಂದೆಡೆ ರಷ್ಯಾ ವಶದಲ್ಲಿರುವ ಖೇರ್ಸಾನ್‌ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ವಾಯುನೆಲೆ ಮೇಲೆ ಉಕ್ರೇನ್‌ ವೈಮಾನಿಕ ದಾಳಿ ನಡೆಸಿದ್ದು, ಅಲ್ಲಿದ್ದ ಹಲವು ಹೆಲಿಕಾಪ್ಟರ್‌ಗಳು ಅಗ್ನಿಗಾಹುತಿಯಾಗಿವೆ. ಮಂಗಳವಾರ ಕೀವ್‌ಗೆ ಆಗಮಿಸಿದ್ದ ಐರೋಪ್ಯ ರಾಷ್ಟ್ರಗಳ ಮೂವರು ನಾಯಕರು ಬುಧವಾರ ಹಿಂದಿರುಗಿದ್ದಾರೆ.

Advertisement

ಸಂಧಾನದ ನಿರೀಕ್ಷೆ; ಸೆನ್ಸೆಕ್ಸ್‌ ಏರಿಕೆ
ರಷ್ಯಾ-ಉಕ್ರೇನ್‌ ಮಾತುಕತೆಯು ಫ‌ಲಪ್ರದವಾಗಲಿದೆ ಎಂಬ ನಿರೀಕ್ಷೆ ಮುಂಬಯಿ ಷೇರುಪೇಟೆಯಲ್ಲೂ ಸಂಚಲನ ಮೂಡಿಸಿದೆ. ಬುಧವಾರ ಮುಂಬಯಿ ಷೇರುಪೇಟೆ ಸೂಚ್ಯಂಕ 1,039.80 ಅಂಕಗಳ ಏರಿಕೆ ದಾಖಲಿಸಿ 56,816ರಲ್ಲಿ ವಹಿವಾಟು ಅಂತ್ಯಗೊಳಿ ಸಿದೆ. ನಿಫ್ಟಿ 312 ಅಂಕ ಏರಿಕೆಯಾಗಿ 16,975ಕ್ಕೆ ತಲುಪಿದೆ. ಇದೇ ವೇಳೆ, ಬ್ರೆಂಟ್‌ ಕಚ್ಚಾ ತೈಲದ ದರ 100 ಡಾಲರ್‌ಗಿಂತ ಕೆಳಗಿಳಿದಿದ್ದು, ಬುಧವಾರ ಬ್ಯಾರೆಲ್‌ಗೆ 98.51 ಡಾಲರ್‌ ಆಗಿತ್ತು.

ತೈಲ ಖರೀದಿ ನಿರ್ಬಂಧಕ್ಕೆ ವಿರುದ್ಧವಲ್ಲ
ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಭಾರತವು ತೈಲ ಖರೀದಿಸಲು ಮುಂದಾಗಿರುವುದು ಅಮೆರಿಕ ವಿಧಿಸಿರುವ ನಿರ್ಬಂಧದ ಉಲ್ಲಂ ಘನೆಯಲ್ಲ ಎಂದು ಬುಧವಾರ ಶ್ವೇತಭವನ ಸ್ಪಷ್ಟಪಡಿಸಿದೆ. ಆದರೆ “ಮುಂದೊಂದು ದಿನ ಇತಿಹಾಸದ ಪುಟಗಳಲ್ಲಿ ಈ ಯುದ್ಧದ ಕುರಿತು ಉಲ್ಲೇಖೀಸುವಾಗ ನಿಮ್ಮ ಸ್ಥಾನ ಎಲ್ಲಿರುತ್ತದೆ ಎಂಬುದನ್ನು ಸ್ವಲ್ಪ ಯೋಚಿಸಿ’ ಎಂದೂ ಹೇಳುವ ಮೂಲಕ ಅಮೆರಿಕವು ಭಾರತ ವನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ವೆುàಲ್‌ ಮಾಡಲು ಯತ್ನಿಸಿದೆ.

ಸಮರಾಂಗಣದಲ್ಲಿ
-ತೈಲ ಬೆಲೆ‌ ಇಳಿಸುವ ನಿಟ್ಟಿನಲ್ಲಿ ಎ.8ರಂದು ತನ್ನ ತೈಲ ಮೀಸಲಿನಿಂದ 3 ಲಕ್ಷ ಕಿ.ಲೀ. ಕಚ್ಚಾತೈಲ ಬಿಡುಗಡೆ ಮಾಡುವುದಾಗಿ ಜಪಾನ್‌ ಘೋಷಣೆ
-ಕೀವ್‌ನಲ್ಲಿ ಭಾರೀ ಸ್ಫೋಟ; 2 ವಸತಿ ಕಟ್ಟಡಗಳ ಮೇಲೆ ರಷ್ಯಾ ಪಡೆ ದಾಳಿ- ಇಬ್ಬರು ನಾಗರಿಕರಿಗೆ ಗಾಯ -ಸದ್ಯದಲ್ಲಂತೂ ಉಕ್ರೇನ್‌ ನ್ಯಾಟೋಗೆ ಸೇರ್ಪಡೆಯಾಗುವುದಿಲ್ಲ ಎಂದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ -ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಶಾಂತಿ ಸ್ಥಾಪನೆಯಾಗಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ ಎಂದ ರಷ್ಯಾ
-ಬಿಬಿಸಿ ವೆಬ್‌ಸೈಟ್‌ಗೆ ರಷ್ಯಾನಿರ್ಬಂಧ, ಇನ್ನಷ್ಟು ಮಾಧ್ಯಮಗಳಿಗೆ ನಿಷೇಧ ಹೇರುವುದಾಗಿ ಬೆದರಿಕೆ

Advertisement

Udayavani is now on Telegram. Click here to join our channel and stay updated with the latest news.

Next