Advertisement

ರೆಪೋ ದರ ಇಳಿತಕ್ಕೆ ತಡೆ

08:01 PM Dec 14, 2020 | Suhan S |

ಒಂದು ವರ್ಷದಿಂದ ಸತತವಾಗಿ ಇಳಿಯುತ್ತಿದ್ದ ರೆಪೋ (ಬ್ಯಾಂಕುಗಳು ರಿಸರ್ವ್‌ ಬ್ಯಾಂಕ್‌ ನಿಂದ ಪಡೆಯುವ ಅಲ್ಪಾವಧಿ ಸಾಲ) ದರಕ್ಕೆ ಕೊನೆಗೂ ತಡೆ ಮುಂದುವರೆದಿದೆ. ಮೊನ್ನೆ ಡಿಸೆಂಬರ್‌4 ರಂದು ನಡೆದ ರಿಸರ್ವ್‌ ಬ್ಯಾಂಕಿನ ದ್ವೈಮಾಸಿಕ ಹಣಕಾಸು ನೀತಿ ನಿರೂಪಣಾ ( Moneqary Policy Committee & MPC ) ಸಭೆಯಲ್ಲಿ ನಿರಂತರವಾಗಿ ಮೂರನೇ ಬಾರಿ ರೆಪೋ ದರವನ್ನು ಬದಲಿಸದೇ ಉಳಿಸಿ ಕೊಳ್ಳಲಾಗಿದೆ.ಕಳೆದ ಒಂದು ವರ್ಷದಿಂದ1.15% ರಷ್ಟು ಕಡಿಮೆಯಾಗಿ 4% ಗೆ ಇಳಿದ ರೆಪೋದರ ಈ ಬಾರಿಯೂ ಇಳಿಯಬಹುದುಎಂದು ಸಾಲ ಪಡೆದಿದ್ದ ಗ್ರಾಹಕರುಮತ್ತು ಉದ್ಯಮಕ್ಷೇತ್ರದ ಹಲವರು ನಿರೀಕ್ಷಿಸಿದ್ದರು.

Advertisement

ಅದೀಗ ಹುಸಿಯಾಗಿದೆ. ಹಾಗೆಯೇ ರಿವರ್ಸ್‌ ರೆಪೋ(3.35 %) ( ಬ್ಯಾಂಕುಗಳು ತಮ್ಮ ಉಳಿಕೆ (surplus)ಹಣವನ್ನು ರಿಸರ್ವ್‌ ಬ್ಯಾಂಕ್‌ ನಲ್ಲಿ ಠೇವಣಿ ಇರಿಸಿ ಪಡೆಯುವ ಬಡ್ಡಿದರ)ವನ್ನೂಕಡಿಮೆ ಮಾಡದೇ ಬ್ಯಾಂಕುಗಳು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ. ಬಡ್ಡಿದರ ತಳ ಸೇರಿದೆ! ಅರ್ಥಿಕ ತಜ್ಞರು ಮತ್ತು ಬ್ಯಾಂಕುಗಳ ಪ್ರಕಾರ, ಭಾರತದಲ್ಲಿ

ಬಡ್ಡಿದರ ತಳ (bottomedout) ಸೇರಿದೆ..

ಅರ್ಥಿಕತೆ ಇನ್ನೂ ಹೆಚ್ಚಿನ ಬಡ್ಡಿದರಕಡಿತವನ್ನುತಡೆದುಕೊಳ್ಳಲಾರದು. ಬಡ್ಡಿದರ ಗರಿಷ್ಠ ಇಳಿತವನ್ನು ಕಂಡಿದ್ದು, ಬ್ಯಾಂಕುಗಳ ನಿವ್ವಳ ಬಡ್ಡಿಯ ಮಿತಿಯ ಮೇಲೆ ಭಾರೀ ಒತ್ತಡ ಬೀಳುತ್ತಿದ್ದು, ಬ್ಯಾಂಕುಗಳ ನಿರ್ವಹಣೆಕಷ್ಟವಾಗುತ್ತಿದೆ. ನೀಡುವ ಮತ್ತುಪಡೆಯುವ ಬಡ್ಡಿದರದಲ್ಲಿ ಭಾರೀ ಅಂತರ ಇರುವ ಅನಿವಾರ್ಯತೆಯನ್ನು ಬ್ಯಾಂಕುಗಳು ಒತ್ತಿಹೇಳುತ್ತಿವೆ. ರೆಪೋ ದರ ಇಳಿಕೆಯಾದರೆ, ಅದನ್ನು ಬ್ಯಾಂಕುಗಳು ಸಾಲಪಡೆದ ಗ್ರಾಹಕರಿಗೆ ವರ್ಗಾಯಿಸಲೇ ಬೇಕು. ರೆಪೋ ದರದಕಡಿತದ ಅನುಪಾತದಲ್ಲಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ಇಳಿಸುತ್ತಿದ್ದು, ಈ ನಷ್ಟವನ್ನು ಠೇವಣಿ ಮೇಲಿನ ಬಡ್ಡಿಯನ್ನು ಇಳಿಸಿ ಸಮೀಕರಿಸಿಕೊಳ್ಳುವುದು ಬ್ಯಾಂಕಿಂಗ್‌ ವಲಯದಲ್ಲಿ ತೀರಾ ಮಾಮೂಲು.

ಬಡ್ಡಿದರ ಕಡಿಮೆಯಾಗಿಲ್ಲ :

Advertisement

ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿದರವನ್ನುಕಡಿತ ಮಾಡಿದರೆ, ಬ್ಯಾಂಕುಗಳ ಠೇವಣಿ ಸಂಗ್ರಹದ ಮೇಲೆ ಪರಿಣಾಮವಾಗುತ್ತದೆ ಎಂದು ಬ್ಯಾಂಕುಗಳುರಿಸರ್ವ್‌ ಬ್ಯಾಂಕ್‌ ಗಮನಕ್ಕೆ ತಂದಿವೆ. ಬ್ಯಾಂಕ್‌ವ್ಯವಹಾರಕ್ಕೆ ಹಣ ಬರುವುದೇ ಠೇವಣಿದಾರರಿಂದ. ಹಾಗಾಗಿ, ಠೇವಣಿದಾರರ ಬಗ್ಗೆ ಲಕ್ಷÂಕೊಡುವಅಗತ್ಯವನ್ನೂ ಒತ್ತಿ ಹೇಳಲಾಗಿದೆ ಎಂಬ ಮಾತೂ ಇದೆ. ಠೇವಣಿದಾರರ ಸಂಘವು, ಬ್ಯಾಂಕ್‌ ಠೇವಣಿಮೇಲಿನ ಬಡ್ಡಿದರ ಇಳಿಸುವುದನ್ನು ಖಂಡಿಸುತ್ತಲೇ ಇದೆ. ಠೇವಣಿದಾರರಲ್ಲಿ ಬಹುತೇಕರು ನಿವೃತ್ತರಿದ್ದು, ಠೇವಣಿಗೆ ಬರುವ ಬಡ್ಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಅಕಸ್ಮಾತ್‌ ಬಡ್ಡಿಯಲ್ಲಿ ಇಳಿಕೆಯಾದರೆ ತಮ್ಮ ಬದುಕು ಅಯೋಮಯವಾಗುತ್ತದೆ ಎಂದು ಅಳಲುತೋಡಿಕೊಂಡಿದ್ದಾರೆ. ಸಾಮಾನ್ಯವಾಗಿ ದ್ವೆçಮಾಸಿಕ ಹಣಕಾಸು ನೀತಿ ಪರಿಷ್ಕರಣೆ ಆದಾಗ ಠೇವಣಿಮೇಲಿನ ಬಡ್ಡಿದರ ಕಡಿಮೆಯಾಗುವುದು ಮಾಮೂಲಾಗಿದ್ದು, ಈ ಬಾರಿ ಠೇವಣಿ ಮೇಲಿನ ಬಡ್ಡಿದರ ಕಡಿಮೆಯಾಗಿಲ್ಲ. ಏರುತ್ತಿರುವ ಹಣದುಬ್ಬರ ಮತ್ತು ಅದನ್ನು6.80% ಗೆ ಸೀಮಿತಗೋಳಿಸುವ ನಿಟ್ಟಿನಲ್ಲಿ ರೆಪೋ ದರವನ್ನುಕಡಿತಮಾಡದೇ ಇಡಲಾಗಿದೆ ಎಂಬ ಮಾತುಗಳಿವೆ. ಹಾಗೆಯೇ, ದೊಡ್ಡ ಪ್ರಮಾಣದಲ್ಲಿ ವಿದೇಶಿ ನೇರಬಂಡವಾಳಕೂಡಾ ರೆಪೋಕಡಿತವನ್ನು ತಡೆದಿದೆಎಂದು ಹೇಳಲಾಗುತ್ತಿದೆ. ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹವೂ ಸಮಾಧಾನಕರವಾಗಿದೆ.

ಚಿಗುರುತ್ತಿರುವ ಅರ್ಥಿತೆ ಮತ್ತು ಚೇತರಿಸಿಕೊಳ್ಳುತ್ತಿರುವ ಔದ್ಯಮಿಕ ಚಟುವಟಿಕೆಗಳಿಂದ ತುಸು ರಿಲ್ಯಾಕ್ಸ್‌ ಆದಂತಿರುವ ರಿಸರ್ವ್‌ ಬ್ಯಾಂಕ್‌, ಅದೇ ಕಾರಣದಿಂದ ರೆಪೋ ದರ ಕಡಿಮೆ ಮಾಡುವ ಕೆಲಸಕ್ಕೂ ಸದ್ಯಕ್ಕೆ ಬ್ರೇಕ್‌ ಹಾಕಿದೆ.

 

ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next