ಕಾರವಾರ: ಕುಡಿಯುವ ನೀರಿನ ಮೂಲವಾಗಿರುವ ನದಿಗಳಿಗೆ ಅಳವಡಿಸಿರುವ ಕೃಷಿ ಪಂಪ್‌ಸೆಟ್‌ಗಳನ್ನು ರೈತರು ಸ್ಥಗಿತಗೊಳಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ತಿಳಿಸಿದ್ದಾರೆ.
ಈಗಾಗಲೇ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ನೀರಿನ ಲಭ್ಯತೆ ಇರುವ ಕಡೆಗಳನ್ನು ಪೈಪ್‌ಲೈನ್‌ಗಳನ್ನು ಮಾಡುವ ಅಥವಾ ಕೊಳವೆ ಭಾವಿಗಳನ್ನು ಮತ್ತಷ್ಟು ಆಳಕ್ಕೆ ತೋಡುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನದಿ ಭಾಗದಲ್ಲಿ ಪಂಪ್‌ಸೆಟ್‌ಗಳನ್ನು ನಿಲ್ಲಿಸುವುದರಿಂದ ಆ ನದಿಗಳಿಂದ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅನುಕೂಲವಾಗುತ್ತವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
34 ಮಜಿರೆಗಳಿಗೆ 11 ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಆರಂಭ
ಕುಮಟಾ: ತಾಲೂಕಿನ ಎಲ್ಲೆಡೆ ನೀರಿನ ಬವಣೆ ಹೆಚ್ಚುತ್ತಲೇ ಇದ್ದು, ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
• ಪರಿಮಳ ದೇಶಪಾಂಡೆ,ತಹಶೀಲ್ದಾರ
Advertisement
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಈಗಾಗಲೇ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಹಾಗೂ ಪಟ್ಟಣಗಳಿಗೆ ಗಂಗಾವಳಿ ಮತ್ತು ಅಘನಾಶಿನಿ ನದಿಗಳಿಂದ ನೀರಿನ ಸಂಪರ್ಕ ಪಡೆಯಲಾಗಿದೆ. ಗಂಗವಳಿ ಹಾಗೂ ಅಘನಾಶಿನಿ ನದಿಯಲ್ಲೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಇಂಥ ಕಷ್ಟಕರ ಸನ್ನಿವೇಶದಲ್ಲಿ ನದಿ ನೀರನ್ನು ಕೃಷಿಗೆ, ತೋಟಗಳಿಗೆ ಬಳಸುವುದು ಸಮಂಜಸವಲ್ಲ. ಜನರ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿರುವುದರಿಂದ ಗಂಗಾವಳಿ, ಅಘನಾಶಿನಿ ನದಿಗಳಿಗೆ ರೈತರು ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದಲ್ಲಿ, ತಕ್ಷಣ ಸ್ಥಗಿತಗೊಳಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರೈತರಲ್ಲಿ ಮನವಿ ಮಾಡಿದ್ದಾರೆ. ಈ ತಿಂಗಳ ಕೊನೆ ವಾರದೊಳಗೆ ಮಳೆಯಾಗುವ ಸಾಧ್ಯತೆಗಳಿದ್ದು ಕೃಷಿ ಪಂಪ್‌ಸೆಟ್‌ಗಳನ್ನು ಸ್ಥಗಿತಗೊಳಿ ಸುವುದರಿಂದ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸುವುದಿಲ್ಲ. ಅಲ್ಲದೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿರುವುದರಿಂದ ಪಂಪ್ ಸೆಟ್‌ಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ. ಅದಕ್ಕೆ ರೈತರೂ ಜಿಲ್ಲಾಡಳಿತದೊಂದಿಗೆ ಕುಡಿಯುವ ನೀರನ್ನು ಜನತೆಗೆ ನೀಡುವ ಮಹತ್ತರ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.
Related Articles
Advertisement
ನೀರಿನ ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನ ನೀರಿಗಾಗಿ ಕಿ.ಮೀ.ಗಳಷ್ಟು ದೂರ ಸಾಗಿ ನೀರು ತರುವ ಪರಿಸ್ಥಿತಿಯೂ ಎದುರಾಗಿದೆ. ಹೀಗಾಗಿ ತಾಲೂಕಿನ ಬಹುತೇಕ ನೀರಿನ ಬರ ಇರುವ ಪ್ರದೇಶಕ್ಕೆ ನೀರನ್ನು ಪೂರೈಸುವುದು ಅನಿವಾರ್ಯವಾಗಿದೆ.
ತಾಲೂಕಿನ ಯಾವ ಪ್ರದೇಶಗಳಲ್ಲಿ ಹೆಚ್ಚು ನೀರಿನ ಸಮಸ್ಯೆ ಇದೆ ಎಂದು ಆಯಾ ಗ್ರಾಪಂ ಪಿಡಿಓಗಳ ಮುಖಾಂತರ ಮಾಹಿತಿ ಪಡೆದು ತಹಶೀಲ್ದಾರ್ ಪರಿಮಳ ದೇಶಪಾಂಡೆ ಹಾಗೂ ತಾಪಂ ಇಒ ಸಿ.ಟಿ. ನಾಯ್ಕ ಜಂಟಿಯಾಗಿ ಕೂಡಲೇ ಸ್ಥಳ ಪರಿಶೀಲಿಸಿ ನೀರು ಪೂರೈಕೆಗೆ ಮುಂದಾಗುತ್ತಿರುವುದು ಗ್ರಾಮದ ಜನತೆಯಲ್ಲಿ ಹರ್ಷ ಮೂಡಿಸಿದೆ.
ನೀರು ಪೂರೈಸಲು ಅಷ್ಟು ದೊಡ್ಡ ಜಲಮೂಲ ಇಲ್ಲದಿರುವುದು ಕೂಡ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದರೂ ಖಾಸಗಿ ಜಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಇರುವುದು ಪರಿಶೀಲನೆಯಿಂದ ತಿಳಿದು ಬಂದಿರುವುದರಿಂದ ಲಭ್ಯವಿರುವ ಕಡೆ ಸಂಪರ್ಕಿಸಿ ನೀರು ನೀಡುವಂತೆ ವಿನಂತಿಸಲಾಗಿದೆ.
ಈಗಾಗಲೇ 11 ಗ್ರಾಮ ಪಂಚಾಯತಗಳ 13 ಗ್ರಾಮಗಳಿಗೆ, 34 ಮಜರೆಗಳಿಗೆ 11 ಟ್ಯಾಂಕರ್ ಮೂಲಕ 28ಕ್ಕೂ ಹೆಚ್ಚು ಟ್ರಿಫ್ ನೀರು ಪ್ರತಿದಿನ ಸರಬರಾಜು ಮಾಡಲಾಗುತ್ತಿದೆ. ನೀರಿನ ಬರವಿರುವ ಎಲ್ಲಾ ಪ್ರದೇಶಕ್ಕೂ ಕುಡಿಯುವ ನೀರನ್ನು ಪೂರೈಸಲಾಗುವುದು.• ಪರಿಮಳ ದೇಶಪಾಂಡೆ,ತಹಶೀಲ್ದಾರ