Advertisement

Wiener Zeitung: ಮುದ್ರಣ ನಿಲ್ಲಿಸಿದ 320 ವರ್ಷದ ಆಸ್ಟ್ರಿಯಾದ ಪತ್ರಿಕೆ

09:11 PM Jun 30, 2023 | Team Udayavani |

ಬರ್ಲಿನ್‌: ಜಗತ್ತಿನ ಅತ್ಯಂತ ಹಳೆಯ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಸ್ಟ್ರಿಯಾ ಸರ್ಕಾರದ ಮಾಲೀಕತ್ವದ ಪತ್ರಿಕೆ ವೀನರ್‌ ಝೈಟುಂಗ್‌ (Wiener Zeitung) ಶುಕ್ರವಾರ ಮುದ್ರಣ ಸ್ಥಗಿತಗೊಳಿಸಿದೆ. 1703 ಆ.8ರಿಂದ ಸತತವಾಗಿ 320 ವರ್ಷಗಳ ಕಾಲ ಅದು ಪ್ರಕಟಗೊಳ್ಳುತ್ತಾ ಬಂದಿತ್ತು.

Advertisement

ಆಸ್ಟ್ರಿಯಾ ಸರ್ಕಾರದ ಮಾಲೀಕತ್ವ ಹೊಂದಿರುವ ಈ ಪತ್ರಿಕೆ ಆರಂಭದಲ್ಲಿ “ವಿನರಿಯಸ್‌ ಡಿಯರಿಯಮ್‌’ (Wiennerisches Diarium) ಎಂಬ ಹೆಸರಿನಿಂದ ಪ್ರಕಟವಾಗುತ್ತಿತ್ತು. ಪ್ರಕಟವಾಗಿರುವ ಕೊನೆಯ ಆವೃತ್ತಿಯಲ್ಲಿ “320 ವರ್ಷ, 12 ಅಧ್ಯಕ್ಷರು, 10 ಚಕ್ರವರ್ತಿಗಳು, 2 ಗಣತಂತ್ರ, 1 ಪತ್ರಿಕೆ’ ಎಂದು ಜರ್ಮನ್‌ ಭಾಷೆಯಲ್ಲಿ ಮುದ್ರಿಸಲಾಗಿದೆ. ಸರ್ಕಾರಿ ಪತ್ರಿಕೆಯಾಗಿದ್ದರೂ, ಸಂಪಾದಕೀಯ ನಿಲುವುಗಳಲ್ಲಿ ಸ್ವಾತಂತ್ರ್ಯವಿತ್ತು. ಮುದ್ರಣ ಆವೃತ್ತಿಯಲ್ಲಿ ಕಂಪನಿಗಳು ತಮ್ಮ ಮಾಹಿತಿ ಪ್ರಕಟಿಸಬೇಕಾದರೆ ಪಾವತಿ ಮಾಡಬೇಕು ಎಂಬ ಕಾನೂನು ಜಾರಿಗೆ ತಂದ ಬಳಿಕ ಪತ್ರಿಕೆಯ ಆದಾಯ ಗಣನೀಯವಾಗಿ ತಗ್ಗಿತ್ತು. ಹೀಗಾಗಿಯೇ, ಉದ್ಯೋಗ ಕಡಿತವನ್ನೂ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಅದು ಆನ್‌ಲೈನ್‌ನಲ್ಲಿ ತಿಂಗಳಿಗೆ ಒಂದು ಆವೃತ್ತಿ ಪ್ರಕಟಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next